ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಪಕ್ಷದ ಪ್ರಧಾನ ಕಚೇರಿ ಮೇಲೆ ಗೂಢಾಚಾರಿಕೆ ಮಾಡುತ್ತಿದೆ ಎಂದು ಆಮ್ ಆದ್ಮಿ ಆರೋಪಿಸಿದೆ.
ನವದೆಹಲಿ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ತನ್ನ ಪಕ್ಷದ ಪ್ರಧಾನ ಕಚೇರಿ ಮೇಲೆ ಗೂಢಾಚಾರಿಕೆ ಮಾಡುತ್ತಿದೆ ಎಂದು ಆಮ್ ಆದ್ಮಿ ಆರೋಪಿಸಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಪ್ ವಕ್ತಾರ ಸೌರಭ್ ಭಾರದ್ವಾಜ್ (AAP spokesperson Saurabh Bhardwaj) ಕೆಲ ದಿನಗಳ ಹಿಂದೆ ಅಧಿಕಾರಿಗಳು ಮುಖ್ಯಮಂತ್ರಿ ನಿವಾಸವನ್ನು ಗೂಢಚಾರಿಕೆ ಮಾಡುತ್ತಿದ್ದರು. ಇದೀಗ ಪಕ್ಷದ ಕಚೇರಿ ಮೇಲೂ ಕೆಲವರು ಕಣ್ಣಿಟ್ಟಿರುವುದು ಕಂಡು ಬಂದಿದೆ ಎಂದು ದೂರಿದ್ದಾರೆ.
ಇದರಲ್ಲಿ ಕೇಂದ್ರ ಬಿಜೆಪಿ ಸರ್ಕಾರದ ಕೈವಾಡವಿದೆ’ ಎಂದಿದ್ದಾರೆ. ಇದೇ ವೇಳೆ ದೆಹಲಿಯಲ್ಲಿರುವ ಪಕ್ಷದ ಕಚೇರಿ ಸುತ್ತಲು 7 ಪುರುಷರು ತಿರುಗಾಡುತ್ತಿರುವ ದೃಶ್ಯಾವಳಿಗಳನ್ನು ತೋರಿಸಿದ ಅವರು ‘ಇವರೆಲ್ಲಾ ಯಾವ ಗುಪ್ತಚರ ಸಂಸ್ಥೆಯವರು (intelligence agency). ಬಿಜೆಪಿ ಕೇಜ್ರಿವಾಲ್‌ಗೆ ಹೆದರುತ್ತಿದೆ. ಈ ಬೇಹುಗಾರಿಕೆ ಗಂಭೀರ ವಿಷಯವಾಗಿದೆ’ ಎಂದರು.
Uniform Civil Code: ರಾತ್ರೋರಾತ್ರಿ ಮುಸ್ಲಿಂ ಮಂಡಳಿ ಸಭೆ; ಸಂಹಿತೆಗೆ ಆಪ್ ಅಚ್ಚರಿಯ ತಾತ್ವಿಕ ಬೆಂಬಲ
ಬೋರಾಗ್ತಿದೆ ಎಂದಿದ್ದ ಸತ್ಯೇಂದ್ರ ಸೆಲ್‌ಗೆ ಕೈದಿಯ ಕಳುಹಿಸಿದ ಜೈಲಾಧಿಕಾರಿಗೆ ನೊಟೀಸ್