ಗ್ಯಾಸ್​ ಬುಕಿಂಗ್​ ನಿಜವಾದ ರೂಲ್ಸ್​ ಹೀಗಿದೆ: ಜಾಲತಾಣದ ಫೇಕ್​ ನ್ಯೂಸ್​ ನಂಬಬೇಡಿ ಎಂದ ಕೇಂದ್ರ ಸರ್ಕಾರ

Published : Mar 25, 2026, 01:29 PM IST
LPG Booking Rules

ಸಾರಾಂಶ

ಎಲ್​ಪಿಜಿ ಸಿಲಿಂಡರ್ ಬುಕಿಂಗ್​ಗೆ ಹೊಸ ನಿಯಮ ಜಾರಿಯಾಗಿದೆ ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದ್ದು, ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಸ್ಪಷ್ಟನೆ ನೀಡಿದೆ. ನಗರ ಪ್ರದೇಶಗಳಲ್ಲಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ   ಹಳೆಯ ನಿಯಮವೇ ಮುಂದುವರಿದಿದೆ ಎಂದು ತಿಳಿಸಿರುವ ಸರ್ಕಾರ ಅದರ ಡಿಟೇಲ್ಸ್​ ಹಂಚಿಕೊಂಡಿದೆ. ದೇಶದಲ್ಲಿ ಸಾಕಷ್ಟು ಎಲ್​ಪಿಜಿ ದಾಸ್ತಾನು ಲಭ್ಯವಿದೆ ಎಂದು ಸರ್ಕಾರ ಭರವಸೆ ನೀಡಿದೆ.

ಇರಾನ್​, ಇಸ್ರೇಲ್​​ ಮತ್ತು ಅಮೆರಿಕದ ನಡುವಿನ ಯುದ್ಧದಿಂದಾಗಿ ಇದಾಗಲೇ ಎಲ್​ಪಿಜಿ ಸಮಸ್ಯೆ ವಿಶ್ವಾದ್ಯಂತ ತಲೆದೋರಿದೆ. ಭಾರತದಲ್ಲಿಯೂ ಇದರ ಬಿಸಿ ತಟ್ಟಿರುವ ಬೆನ್ನಲ್ಲೇ, ಸೋಷಿಯಲ್​ ಮೀಡಿಯಾದಲ್ಲಿ ಕೆಲವು ವಿಕೃತ ಮನಸ್ಸುಗಳು ಇಲ್ಲಸಲ್ಲದ ಸುದ್ದಿಗಳನ್ನು ಹರಡಿ ಜನರಿಗೆ ಭೀತಿ ಉಂಟು ಮಾಡುತ್ತಿದ್ದಾರೆ. ಇದು ಸುಳ್ಳು ಎಂದು ತಿಳಿದಿದ್ದರೂ, ತಮ್ಮ ಕೆಲವು ಲೈಕ್ಸ್​, ವ್ಯೂವ್ಸ್​ ಹಾಗೂ ಸರ್ಕಾರದ ವಿರುದ್ಧ ಜನರ ಮನಸ್ಸಿನಲ್ಲಿ ವಿಷಬೀಜ ಬಿತ್ತಲು ಇಂಥ ನಕಲಿ ಸುದ್ದಿಗಳನ್ನು ಹರಡಲಾಗುತ್ತಿದೆ. ಇದನ್ನೇ ನಿಜ ಎಂದು ನಂಬಿ ಭಯದ ವಾತಾವರಣ ಸೃಷ್ಟಿಯಾಗುತ್ತಿದ್ದು, ಜನರ ಜೀವನದ ಮೇಲೆ ಮತ್ತಷ್ಟು ಗಂಭೀರ ಪರಿಣಾಮ ಉಂಟಾಗುತ್ತಿದೆ.

ಫೇಕ್​ ನ್ಯೂಸ್​ಗಳಿಗೆ ಬಲಿಯಾಗಬೇಡಿ

ಎಲ್​ಪಿಜಿ ಬುಕಿಂಗ್​ ಅರ್ಥಾತ್​ ಗ್ಯಾಸ್​​ ಸಿಲಿಂಡರ್​ ಬುಕಿಂಗ್​ನಲ್ಲಿ ಹೊಸ ನಿಯಮ ಜಾರಿಯಾಗಿದೆ. ಇಂದಿನಿಂದಲೇ ಜಾರಿ, ಬರುವ ಏಪ್ರಿಲ್​ನಿಂದಲೇ ಜಾರಿ ಹಾಗೇ ಹೀಗೆ ಏನೇನೋ ವದಂತಿಗಳನ್ನು ಹರಡಲಾಗುತ್ತಿದೆ. LPG ಮರುಪೂರಣ ಬುಕಿಂಗ್ ಸಮಯಸೂಚಿಗಳನ್ನು ಪರಿಷ್ಕರಿಸಲಾಗಿದೆ ಎಂದು ಸುಳ್ಳು ಸುದ್ದಿಗಳ ಭರಾಟೆ ಜೋರಾಗಿದೆ. ಇದೀಗ ಈ ಬಗ್ಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸ್ಪಷ್ಟನೆ ನೀಡಿದ್ದು, ಇಂಥ ಸುದ್ದಿಗಳನ್ನು ನಂಬದಂತೆ ಜನರಿಗೆ ಸ್ಪಷ್ಟಪಡಿಸಿದೆ. ಇತ್ತೀಚಿನ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು PMUY ಸಂಪರ್ಕಗಳಿಗೆ 45 ದಿನಗಳ ಮಿತಿ, PMUY ಅಲ್ಲದ ಸಿಂಗಲ್ ಬಾಟಲ್ ಬಳಕೆದಾರರಿಗೆ 25 ದಿನಗಳು ಮತ್ತು ಡಬಲ್ ಬಾಟಲ್ ಸಂಪರ್ಕಗಳಿಗೆ 35 ದಿನಗಳ ಮಿತಿಯೊಂದಿಗೆ ಹೊಸ ಮಿತಿಗಳನ್ನು ಸೂಚಿಸಿವೆ ಎಂದೆಲ್ಲಾ ವರದಿ ಮಾಡಿದ್ದು ಎಲ್ಲವೂ ಸತ್ಯಕ್ಕೆ ದೂರವಾದದ್ದು ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ.

ನಿಜವಾದ ನಿಯಮ ಏನಿದೆ?

ಸರ್ಕಾರವು ಪ್ರಸ್ತುತ ನಿಗದಿಪಡಿಸಿರುವ ಸಮಯ ಮಿತಿ ನಿಜವಾಗಿಯೂ ಸದ್ಯ ಇರುವುದು ಹೀಗಿದೆ:

ಪಿಎಂ ಆವಾಜ್​ ಯೋಜನೆಯ ಗ್ರಾಹಕರಾಗಿರಲಿ ಅಥವಾ ಸಾಮಾನ್ಯ ಗ್ರಾಹಕರು ಆಗಿರಲಿ... ಎಲ್ಲರಿಗೂ ಒಂದೇ ನಿಯಮ. ಅದು: ಎರಡು ಬುಕಿಂಗ್​ಗಳ ನಡುವಿನ ಕನಿಷ್ಠ ಅವಧಿ ಎಂದರೆ,

ನಗರ ಪ್ರದೇಶಗಳಲ್ಲಿ 25 ದಿನಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ 45 ದಿನಗಳು.

ಇದರ ಅರ್ಥ ನಗರ ಪ್ರದೇಶಗಳಲ್ಲಿ 25 ದಿನಗಳಾದ ಮೇಲೆ ಇನ್ನೊಂದು ಬುಕಿಂಗ್​ ಮಾಡಬಹುದಾಗಿದೆ. ಇದು ಗ್ರಾಮೀಣ ಪ್ರದೇಶಗಳಿಗಾದರೆ 45 ದಿನಗಳಾಗಿವೆ.

 

ಸಾಕಷ್ಟು ಸ್ಟಾಕ್​

ಸದ್ಯ ದೇಶದಲ್ಲಿ ಸಾಕಷ್ಟು LPG ಸ್ಟಾಕ್‌ಗಳು ಲಭ್ಯವಿದೆ ಎಂದು ಸರ್ಕಾರ ಹೇಳಿದೆ. ಕರ್ನಾಟಕವೂ ಸೇರಿದಂತೆ ಹಲವು ಕಡೆಗಳಲ್ಲಿ ರಾಜಕೀಯ ಮುಖಂಡರು ಸೇರಿದಂತೆ ಕೆಲವರು ಕಾಳಸಂತೆಯಲ್ಲಿ ಸಿಲಿಂಡರ್​ ಮಾರುವ ಉದ್ದೇಶದಿಂದ ಸ್ಟಾಕ್​ ಇಟ್ಟುಕೊಂಡಿದ್ದರು. ಅವರ ಮೇಲೆ ಇದಾಗಲೇ ರೇಡ್ ಮಾಡಲಾಗಿದೆ. ಇನ್ನೂ ದಾಳಿ ನಡೆಯುತ್ತಲೇ ಇವೆ. ಇಂಥ ಕಳ್ಳರಿಂದಲಾಗಿಯೇ ಗ್ಯಾಸ್​ ಸಿಲಿಂಡರ್​ಗಳ ಪೂರೈಕೆಯಲ್ಲಿ ಕೊರತೆ ಆಗುತ್ತಿದ್ದು, ಇಂಥವರನ್ನು ಮಟ್ಟ ಹಾಕುವ ಅಗತ್ಯವಿದೆ ಎನ್ನುವ ಕೂಗು ಜೋರಾಗಿದೆ.

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

30 ಬಾಲಕಿಯರ ಕಾಮತೃಷೆಗೆ ಬಳಸಿದ ವಿಡಿಯೋ ಲೀಕ್ ಬೆನ್ನಲ್ಲೇ ಬಿಜೆಪಿ ನಾಯಕನ ಪುತ್ರ ಅರೆಸ್ಟ್
7 ಮಕ್ಳಳಿದ್ರೂ ಅಕ್ರಮ ಸಂಬಂಧ, 7 ವರ್ಷದ ಮಗನ ಮುಂದೆಯೇ ಹೆಂಡತಿ, ಫ್ರೆಂಡ್‌ಗೆ ಗಂಡ ಗುಂಡಿಕ್ಕಿ ಕೊಂದ!