ಭಾರತೀಯ ರಕ್ಷಣಾ ಪಡೆಯ SSC ಮಹಿಳಾ ಅಧಿಕಾರಿಗಳಿಗೆ ಗುಡ್ ನ್ಯೂಸ್

Published : Mar 25, 2026, 12:57 PM IST
Good news for SSC women officers

ಸಾರಾಂಶ

women ssc officers pension rights: ಸೇನೆಯ ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸುವ ಮಹಿಳಾ ಶಾರ್ಟ್ ಸರ್ವೀಸ್ (SSC) ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ.

ಸೇನೆಯ ಮಹಿಳಾ ಅಧಿಕಾರಿಗಳಿಗೆ ಗುಡ್‌ನ್ಯೂಸ್

ನವದೆಹಲಿ: ಸೇನೆಯ ಮೂರೂ ಪಡೆಗಳಲ್ಲಿ ಸೇವೆ ಸಲ್ಲಿಸುವ ಮಹಿಳಾ ಶಾರ್ಟ್ ಸರ್ವೀಸ್ (SSC) ಅಧಿಕಾರಿಗಳಿಗೆ ಸುಪ್ರೀಂ ಕೋರ್ಟ್‌ನಿಂದ ಖುಷಿಯ ಸುದ್ದಿಯೊಂದು ಹೊರಬಿದ್ದಿದೆ. ತಪ್ಪು ಮೌಲ್ಯಾಂಕನದಿಂದಾಗಿ ಶಾಶ್ವತ ಆಯೋಗ(ಪಿಸಿ)ದಿಂದ ವಂಚಿತರಾದ ಮಹಿಳಾ ಅಧಿಕಾರಿಗಳೂ ಪೂರ್ಣ ಪಿಂಚಣಿಯ ಲಾಭಪಡೆಯಲು ಅರ್ಹರು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾ. ಉಜ್ಜಲ್ ಭುಯಾನ್ ಹಾಗೂ ನ್ಯಾ.ಎನ್.ಕೋಟೀಶ್ವರ್ ಸಿಂಗ್ ಅವರಿದ್ದ ಪೀಠವು ಈ ತೀರ್ಪು ನೀಡಿದೆ. ಈ ಮಹಿಳಾ ಅಧಿಕಾರಿಗಳನ್ನು ಅವಧಿಗೆ ಮೊದಲೇ ಸೇವೆಯಿಂದ ಮುಕ್ತಗೊಳಿಸಿದ್ದರೂ ಪಿಂಚಣಿಗಾಗಿ ಕನಿಷ್ಠ 20 ವರ್ಷ ಸೇವೆ ಸಲ್ಲಿಸಿದವರೆಂದೇ ಪರಿಗಣಿಸಿ ಪಿಂಚಣಿ ನೀಡಬೇಕು ಎಂದು ಒಂದು ಬಾರಿಗೆ ಅನ್ವಯವಾಗುವಂತೆ ಆದೇಶಿಸಿ ಈ ತೀರ್ಪು ನೀಡಿದೆ.

ಇದನ್ನೂ ಓದಿ: ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು: 9 ವರ್ಷದ ಪುಟಾಣಿ ಸಾವು

ಹಿಂದಿನ ಸೇನಾಪಡೆಗಳ ಟ್ರಿಬ್ಯೂನಲ್‌ನ ಆದೇಶಗಳು ಹಾಗೂ 2019ರಲ್ಲಿ ಮಾಡಲಾದ ನೀತಿಯಲ್ಲಿನ ಬದಲಾವಣೆಯಿಂದಾಗಿ ಶಾಶ್ವತ ಆಯೋಗ ನಿರಾಕರಿಸಿದ್ದನ್ನು ಪರಿಗಣಿಸಿ ವಿಂಗ್ ಕಮಾಂಡರ್ ಸುಚೇತಾ ಏಡನ್ ಮತ್ತಿತರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು. ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಪೀಠವು, ವಾರ್ಷಿಕ ಗೌಪ್ಯ ವರದಿಗಳಲ್ಲಿ ಮಹಿಳಾ ಅಧಿಕಾರಿಗಳಿಗೆ ನಿರ್ಲಕ್ಷ್ಯದಿಂದ ಗ್ರೇಡ್ ನೀಡಲಾಗುತ್ತದೆ. ಮಹಿಳೆಯರು ವೃತ್ತಿಯಲ್ಲಿ ಪ್ರಗತಿಗೆ ಅರ್ಹರಲ್ಲ ಎಂಬ ಭಾವನೆಯಿಂದ ಈ ರೀತಿ ಮಾಡಲಾಗುತ್ತದೆ. ಇದು ಮಹಿಳಾ ಅಧಿಕಾರಿಗಳ ಒಟ್ಟಾರೆ ಮೆರಿಟ್ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಅಭಿಪ್ರಾಯಪಟ್ಟಿದೆ.

ಇದನ್ನೂ ಓದಿ: ಮಡಿಕೇರಿ ಸಮೀಪ ಕಾಫಿತೋಟದಲ್ಲಿ ಹುಲಿ ಓಡಾಟ: ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ

ವಾಯುಸೇನೆಯ ವಿಚಾರದಲ್ಲಿ ಸೇನಾ ಅವಧಿಯ ಮಾನದಂಡ ಮತ್ತು ಕನಿಷ್ಠ ಸಾಧನೆಯ ಮಾನದಂಡವನ್ನು 2019ರಲ್ಲಿ ತರಾತುರಿಯಲ್ಲಿ ಜಾರಿಗೊಳಿಸಲಾಗಿದೆ. ಹೀಗಾಗಿ ಅಧಿಕಾರಿಗಳಿಗೆ ಆ ಮಾನದಂಡಗಳನ್ನು ಪೂರೈಸಲು ಸೂಕ್ತ ಅವಕಾಶವೇ ಸಿಕ್ಕಿಲ್ಲ ಎಂದು ಹೇಳಿರುವ ಪೀಠ, ಸಂವಿಧಾನದ 142ನೇ ವಿಧಿಯಡಿ ನೀಡಲಾದ ವಿಶೇಷಾಧಿಕಾರ ಬಳಸಿ ಪಿಂಚಣಿ ಕುರಿತ ತೀರ್ಪು ನೀಡಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಜೆಕ್ಷನ್ ಭಯಕ್ಕೆ ಜೀವವೇ ಹೋಯ್ತು: 9 ವರ್ಷದ ಪುಟಾಣಿ ಸಾವು
ಸಿಲಿಂಡರ್ ಬುಕ್ಕಿಂಗ್ ಗೆ ಹೊಸ ನಿಯಮ, ಎಲ್‌ಪಿಜಿ ನೀಡಲು ಹೊಸ ಮಾರ್ಗಸೂಚಿ ಜಾರಿಗೊಳಿಸಿದ ಕೇಂದ್ರ!