
ನವದೆಹಲಿ: ‘ಕೇರಳದಲ್ಲಿ ಉಪಹಾರಕ್ಕೆ ಇಡ್ಲಿ, ತಪ್ಪಿದರೆ ದೋಸೆಯಷ್ಟೇ ಏಕೆ ಸಿಗುತ್ತದೆ? ಬೇರೆ ಏನೂ ಇರುವುದಿಲ್ಲವೇ?’ ಎಂದು ಎಕ್ಸ್‌ನಲ್ಲಿ ಮಾಡಲಾದ ಪೋಸ್ಟ್‌ಗೆ ಒಬ್ಬರು ಉತ್ತರಿಸಿ, ‘ದೋಸೆ ಬಗ್ಗೆ ಎರಡು ಮಾತಿಲ್ಲ. ಆದರೆ ಇಡ್ಲಿ ಮಾತ್ರ ಬೇಯಿಸಿದ ವಿಷಾದದಂತೆ’ ಎಂದು ವ್ಯಂಗ್ಯವಾಡಿದ್ದಾರೆ.
ಆಗ ಇಡ್ಲಿಯ ಮಾನರಕ್ಷಣೆಗೆ ಸ್ವತಃ ಕಾಂಗ್ರೆಸ್ ಸಂಸದ ಶಶಿ ತರೂರ್ ಧಾವಿಸಿ, ತಕ್ಕ ತಿರುಗೇಟು ನೀಡಿದ್ದಾರೆ. ಇಡ್ಲಿಯನ್ನು ಟೀಕಿಸಿದವರಿಗೆ ಪ್ರತ್ಯುತ್ತರವಾಗಿ ತಾವೇ ಇಡ್ಲಿ ತಯಾರಿಸುತ್ತಿರುವಂತಿರುವ ಎಐ ಫೋಟೋ ಹಂಚಿಕೊಂಡಿರುವ ತರೂರ್ ಅದನ್ನು ತಮ್ಮ ಎಂದಿನ ಶೈಲಿಯಲ್ಲಿ ಕಾವ್ಯಾತ್ಮಕವಾಗಿ ವರ್ಣಿಸಿದ್ದಾರೆ. ‘ಪಾಪದ ಜನ, ಎಂದೂ ಒಳ್ಳೆ ಇಡ್ಲಿಯ ರುಚಿಯನ್ನೇ ನೋಡಿರಲಿಕ್ಕಿಲ್ಲ. ಉತ್ತಮ ಇಡ್ಲಿಯೆಂದರೆ ಅದು ಮೋಡದಂತೆ, ಪಿಸುಮಾತಿನಂತೆ, ಮಾನವ ನಾಗರಿಕತೆಯ ಪರಿಪೂರ್ಣತೆಯ ಕನಸಿನಂತೆ ಇರುತ್ತದೆ. ಇದೊಂದು ಭವ್ಯ ಸೃಷ್ಟಿ. ಸೂಕ್ಷ್ಮವಾದ, ತೂಕವಿಲ್ಲದ ಅಕ್ಕಿ ಮತ್ತು ಬೇಳೆ ಹಬೆಯಲ್ಲಿ ಬೆಂದು, ನಾಲಿಗೆಯ ಮೇಲಿಟ್ಟರೆ ಅಲ್ಲೇ ಕರಗಿ ಅಲೌಕಿಕ ಅನುಭವ ನೀಡುತ್ತದೆ. ಸರಿಯಾದ ಜೋಡಿಯಿದ್ದರೆ ಅದು ಸಂಗೀತ ಸಂಯೋಜಕ ಬೀಥೋವನ್‌ನ ಸ್ವರಮೇಳದ ರೀತಿ, ಟ್ಯಾಗೋರರ ಸಂಗೀತದಂತೆ, ಹುಸೇನ್‌ರ ವರ್ಣಚಿತ್ರದಂತೆ, ತೆಂಡುಲ್ಕರ್ ಸಿಡಿಸಿದ ಶತಕದಂತೆ ಅದ್ಭುತವಾಗಿರುತ್ತದೆ.
ಇಂತಹ ಇಡ್ಲಿಯನ್ನು ವಿಷಾದ ಎಂದು ಕರೆಯುವುದೆಂದರೆ, ನೀವು ಆತ್ಮಹೀನರು, ಆಹಾರವನ್ನು ಆಸ್ವಾದಿಸಲು ಅರಿಯದವರು, ದಕ್ಷಿಣ ಭಾರತದ ಅತ್ಯದ್ಭುತ ಸಾಧನೆಯನ್ನು ಹೊಗಳಲು ಆಗದವರು. ನಿಮ್ಮನ್ನು ನೋಡಿದರೆ ಅಯ್ಯೋ ಪಾಪ ಅನ್ನಿಸುತ್ತದೆ’ ಎಂದು ತರೂರ್ ಸುದೀರ್ಘ ಪೋಸ್ಟ್ ಮಾಡಿದ್ದಾರೆ.
ಬ್ರೇಕ್ ಫಾಸ್ಟ್’ಗೆ ಇಡ್ಲಿ, ಸಾಂಬಾರ್ ತಿನ್ನೋದ್ರಿಂದ ಸಿಗುತ್ತೆ ಲೆಕ್ಕವಿಲ್ಲದಷ್ಟು ಲಾಭ
ನೀವು ಬೆಳಗ್ಗೆ ತಿನ್ನುವ ಉಪಹಾರದಿಂದ ಆರೋಗ್ಯಕ್ಕೆ ಹಲವು ರೀತಿಯ ಪ್ರಯೋಜನಗಳು ಸಿಗುತ್ತವೆ. ಯಾವ ಆಹಾರಗಳನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳು ನಮ್ಮ ದೇಹಕ್ಕೆ ಸಿಗುತ್ತೆ ತಿಳಿಯಿರಿ.
ಆರೋಗ್ಯಕರ ಬ್ರೇಕ್ ಫಾಸ್ಟ್
ದಕ್ಷಿಣ ಭಾರತದ ಜನಪ್ರಿಯ ಉಪಹಾರ ಪದಾರ್ಥಗಳಾದ ಇಡ್ಲಿ, ಸಾಂಬಾರ್ ಮತ್ತು ತೆಂಗಿನಕಾಯಿ ಚಟ್ನಿಗಳು ಅವುಗಳ ಪದಾರ್ಥಗಳು ಮತ್ತು ತಯಾರಿಕೆಯ ವಿಧಾನದಿಂದಾಗಿ ವಿವಿಧ ಆರೋಗ್ಯ ಪ್ರಯೋಜನಗಳನ್ನು ನೀಡುತ್ತವೆ ಎಂದು ನಿಮಗೆ ತಿಳಿದಿದೆಯೇ? ಯಾವೆಲ್ಲಾ ಉಪಹಾರಗಳನ್ನು ಸೇವಿಸುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ತಿಳಿಯೋಣ.
ಸಸ್ಯಾಹಾರಿ ಆಮ್ಲೆಟ್, ಬಹುಧಾನ್ಯ ಟೋಸ್ಟ್
ನೇರ ಪ್ರೋಟೀನ್, ಸಂಕೀರ್ಣ ಕಾರ್ಬೋಹೈಡ್ರೇಟ್‌ಗಳು ಮತ್ತು ಜೀವಸತ್ವಗಳು
ನಿಮ್ಮನ್ನು ಹೊಟ್ಟೆ ತುಂಬಿರುವಂತೆ ಮಾಡುತ್ತದೆ, ಕರುಳಿನ ಚಲನಶೀಲತೆಯನ್ನು ಬೆಂಬಲಿಸುತ್ತದೆ ಮತ್ತು ಸ್ಥಿರವಾದ ಶಕ್ತಿಯನ್ನು ಒದಗಿಸುತ್ತದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ