ಯೋಗವನ್ನು ಜಾಗತಿಕವಾಗಿ ಪ್ರಚಾರ ಮಾಡಿದ ಪೂರ್ಣ ಶ್ರೇಯವನ್ನು ದೇಶದ ಮೊದಲ ಪ್ರಧಾನಿ ನೆಹರೂಗೆ ನೀಡುವ ಕಾಂಗ್ರೆಸ್ ಪ್ರಯತ್ನಕ್ಕೆ, ಸ್ವತಃ ಅವರದ್ದೇ ಪಕ್ಷದ ಸಂಸದ ಶಶಿ ತರೂರ್ ಟಾಂಗ್ ನೀಡಿದ್ದಾರೆ.
ನವದೆಹಲಿ: ಯೋಗವನ್ನು ಜಾಗತಿಕವಾಗಿ ಪ್ರಚಾರ ಮಾಡಿದ ಪೂರ್ಣ ಶ್ರೇಯವನ್ನು ದೇಶದ ಮೊದಲ ಪ್ರಧಾನಿ ನೆಹರೂಗೆ ನೀಡುವ ಕಾಂಗ್ರೆಸ್ ಪ್ರಯತ್ನಕ್ಕೆ, ಸ್ವತಃ ಅವರದ್ದೇ ಪಕ್ಷದ ಸಂಸದ ಶಶಿ ತರೂರ್ ಟಾಂಗ್ ನೀಡಿದ್ದಾರೆ. ಅಂತಾರಾಷ್ಟ್ರೀಯ ಯೋಗ ದಿನವಾದ ನಿನ್ನೆ ನೆಹರೂ ಯೋಗ ಮಾಡುತ್ತಿರುವ ಫೋಟೋ ಲಗತ್ತಿಸಿ ಟ್ವೀಟೊಂದನ್ನು ಮಾಡಿದ್ದ ಕಾಂಗ್ರೆಸ್, ‘ಅಂತಾರಾಷ್ಟ್ರೀಯ ಯೋಗ ದಿನದಂದು, ಯೋಗವನ್ನು ಜನಪ್ರಿಯಗೊಳಿಸಿದ ಮತ್ತು ಅದನ್ನು ಶಿಕ್ಷಣದ ಭಾಗವನ್ನಾಗಿ ಮಾಡಿದ ಪಂ.ನೆಹರೂ ಅವರಿಗೆ ಧನ್ಯವಾದ ಅರ್ಪಿಸುತ್ತೇವೆ ಎಂದಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ತರೂರ್, ‘ಖಂಡಿತವಾಗಿಯೂ ಆದರೆ ಯೋಗಕ್ಕೆ ನವಜೀವನ ನೀಡಿದ ಮತ್ತು ಅದನ್ನು ಜನಪ್ರಿಯಗೊಳಿಸಿದ ಹಾಗೂ ವಿಶ್ವಸಂಸ್ಥೆಯ ಮೂಲಕ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಘೋಷಣೆಗೆ ಕಾರಣವಾದ ಪ್ರಧಾನಿ ಕಾರ್ಯಾಲಯ ಮತ್ತು ಭಾರತದ ವಿದೇಶಾಂಗ ಸಚಿವಾಲಯದ ಕೆಲಸವನ್ನೂ ನಾವು ಶ್ಲಾಘಿಸಬೇಕು ಎಂದು ಹೇಳುವ ಮೂಲಕ ತಮ್ಮದೇ ಪಾರ್ಟಿಗೆ ಟಾಂಗ್ ನೀಡಿದ್ದಾರೆ.
ನಾನು ದಶಕಗಳಿಂದ ವಾದಿಸುತ್ತಾ ಬಂದಂತೆ ಯೋಗವು (Yoga) ಪ್ರಪಂಚದಾದ್ಯಂತ ನಮ್ಮ ಮೃದು ಶಕ್ತಿಯ ಪ್ರಮುಖ ಭಾಗವಾಗಿದೆ ಮತ್ತು ಅದನ್ನು ಜಗತ್ತು ಗುರುತಿಸುವುದನ್ನು ನೋಡುವುದಕ್ಕೆ ಅದ್ಭುತವಾಗಿದೆ ಎಂದು ತರೂರ್ ಹೇಳಿದ್ದಾರೆ. ಪಕ್ಷ ತಮ್ಮದಲ್ಲದಿದ್ದರೂ ಯೋಗಕ್ಕೆ ಜಾಗತಿಕ ಮಟ್ಟದಲ್ಲಿ ಪ್ರಚಾರ ನೀಡಿದ ಕೇಂದ್ರ ಸರ್ಕಾರವನ್ನು ಕೊಂಡಾಡಿದ ಶಶಿ ತರೂರ್ (Shashi Tharoor) ಬಗ್ಗೆ ಅನೇಕ ನೆಟ್ಟಿಗರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ. ಯೋಗವನ್ನು ಜನಪ್ರಿಯಗೊಳಿಸಿದ್ದಕ್ಕಾಗಿ ಸರ್ಕಾರಕ್ಕೆ ಅದರ ಗೌರವವನ್ನು ನೀಡುವ ಮೂಲಕ ಕ್ಷುಲ್ಲಕ ರಾಜಕೀಯದಿಂದ ಮೇಲೆ ಬೆಳೆದಿರುವುದಕ್ಕೆ ನಿಮಗೆ ಧನ್ಯವಾದ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ನಿಜವಾಗಿಯೂ ಶಶಿ ತರೂರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಬೇಕಿತ್ತು ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನಿಮ್ಮ ಪ್ರಶಂಸೆಗೆ ಹಾಗೂ ಸತ್ಯವಾದ ಟ್ವಿಟ್‌ಗೆ ಧನ್ಯವಾದಗಳು. ಶಶಿ ತರೂರ್ ಅವರಂತಹ ರಾಜಕಾರಣಿಗಳು ಇಂದಿನ ರಾಜಕಾರಣದಲ್ಲಿ ಬಲು ಅಪರೂಪ, ಅವರು ಇಂದಿನ ರಾಜಕರಣದಲ್ಲಿ ಅಪಾಯದಲ್ಲಿದ್ದಾರೆ. ಕಾರ್ಯಕರ್ತರು ಬಿಡಿ ಸ್ವತಃ ಅನೇಕ ದೊಡ್ಡ ದೊಡ್ಡ ನಾಯಕರೇ ಕೆಲವು ಬೇರೆ ಪಕ್ಷಗಳ ಮೌಲ್ಯಯುತವಾದ ನೀತಿಗಳನ್ನು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ಗಿನ್ನಿಸ್ ವಿಶ್ವ ದಾಖಲೆ ಪುಟ ಸೇರಿದ ಪ್ರಧಾನಿ ಮೋದಿ ಅಂತಾರಾಷ್ಟ್ರೀಯ ಯೋಗದಿನಾಚರಣೆ!
ಇತ್ತೀಚೆಗೆ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ನಂತರ ಕಾಂಗ್ರೆಸ್‌ಗೆ ಶಶಿ ತರೂರ್ ಎಚ್ಚರಿಕೆ ನೀಡಿದ್ದರು. ಮುಂದಿನ ವರ್ಷದ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಉಲ್ಲೇಖಿಸಿ ಒಂದು ರಾಜ್ಯದಲ್ಲಿ ಕೆಲಸ ಮಾಡಿದರೆ, ಅದು ರಾಷ್ಟ್ರೀಯವಾಗಿ ಕೆಲಸ ಮಾಡಬಹುದು ಎಂದು ಭಾವಿಸಿ ಸುಮ್ಮನೇ ಸಮಾಧಾನದಿಂದ ಕೂರಬಾರದು ಎಂದು ಹೇಳಿದರು. 2019 ರಲ್ಲಿ ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ತಿಂಗಳ ಮೊದಲು ನಡೆದ ರಾಜಸ್ಥಾನ (Rajasthan), ಛತ್ತೀಸ್‌ಗಢ (Chhattisgarh) ಮತ್ತು ಮಧ್ಯಪ್ರದೇಶ (Madhya Pradesh) ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿತ್ತು. ಆದರೆ ಲೋಕಸಭೆ ಚುನಾವಣೆಯಲ್ಲಿ ಕಳಪೆ ಪ್ರದರ್ಶನ ನೀಡಿತ್ತು ಎಂಬುದನ್ನು ತರೂರ್ ನೆನಪಿಸಿದ್ದರು.
ವಿಶ್ವಸಂಸ್ಥೆಯಲ್ಲಿ ಪ್ರಧಾನಿ ಮೋದಿ ಯೋಗ, ಮೊಳಗಿತು ಓಂಕಾರ; 180 ರಾಷ್ಟ್ರದ ಗಣ್ಯರು ಭಾಗಿ!
Indeed! We should also acknowledge all those who revived & popularised yoga, including our government, & , for internationalising through the . As I have argued for decades, yoga is a vital part of our soft power across the world &… https://t.co/WYZvcecl0Q
— Shashi Tharoor (@ShashiTharoor)
On International Day of Yoga, we thank Pt. Nehru, who was instrumental in popularising Yoga & even made it a part of national policy.
Let us appreciate the importance of the ancient art & philosophy in our physical & mental wellbeing & take steps to incorporate it in our lives. pic.twitter.com/XqOyMwgock