ಮೋದಿ ಸರ್ಕಾರಕ್ಕೆ ಹೊಸ ಸವಾಲು, ಇದೀಗ ಗಲ್ವಾನ್ ರೀತಿ ಗಡಿಯಲ್ಲಿ ಘರ್ಷಣೆ ಆರಂಭಿಸಿದ ಚೀನಾ ಸೇನೆ

Published : Oct 23, 2026, 11:41 AM IST
ITBP DG Shatrujeet Kapur said confrontations with Chinese troops ongoing along Arunachal Pradesh

ಸಾರಾಂಶ

ಫ್ರಾನ್ಸ್ ಸೇರಿದಂತೆ ಯೂರೋಪ್‌ನಲ್ಲಿ ದಂಗೆ , ಹಿಂಸಾಚಾರಕ್ಕೆ ದೇಶಗಳೇ ಹೊತ್ತಿ ಉರಿಯುತ್ತಿದೆ. ಭಾರತದಲ್ಲಿ ಬಾಂಗ್ಲಾದೇಶ ಮಾದರಿಯಾಗಿಟ್ಟುಕೊಂಡು ಹೋರಾಟಗಳು ಫಲ ನೀಡಲಿಲ್ಲ. ಇದರ ಬೆನ್ನಲ್ಲೇ ಭಾರತ ಚೀನಾ ಗಡಿಯಲ್ಲಿ ಘರ್ಷಣೆ ಶುರುವಾಗಿದೆ.

ನವದೆಹಲಿ(ಅ.23) ಭಾರತದೊಳಗೆ ಬಾಂಗ್ಲಾದೇಶ ಮಾದರಿಯಲ್ಲಿ ಗಲಭೆ ಎಬ್ಬಿಸಲು, ಆಡಳಿತ ಬದಲಾವಣೆ ಪ್ರಯತ್ನಗಳು ವಿಫಲಗೊಂಡಿದೆ. ಕಮ್ಯೂನಿಸ್ಟ್ ಪಾರ್ಟಿ ಆಫ್ ಇಂಡಿಯಾ ಮಾರ್ಕ್ಸಿಸ್ಟ್-ಲೆನಿನ್ ಪಕ್ಷದ ವಿದ್ಯಾರ್ಥಿ ಸಂಘಟನೆ ಅಧ್ಯಕ್ಷೆ ನೇಹಾ ಬೋರಾ ಬಹಿರಂಗವಾಗಿ, ಬಾಂಗ್ಲಾದೇಶದಿಂದ ಪ್ರೇರಿತವಾಗಿ ಈ ಹೋರಾಟ ಎಂದಿದ್ದರು. ಅದೇ ಮಾದರಿಯಲ್ಲಿ ಹೋರಾಟಕ್ಕೆ ಭಾರಿ ಪ್ಲಾನ್ ಮಾಡಲಾಗಿತ್ತು. ಆದರೆ ಯಾವುದೂ ಕೈಗೂಡಲಿಲ್ಲ. ಇದರ ಬೆನ್ನಲ್ಲೇ ಭಾರತದ ಗಡಿಯಲ್ಲಿ ಗರ್ಷಣೆಗಳು, ಚಕಮಕಿಗಳು ಆರಂಭಗೊಂಡಿದೆ. ಇದೀಗ ಅರುಣಾಚಲ ಪ್ರದೇಶದಲ್ಲಿ ಚೀನಾ ಅತಿಕ್ರಮಣಕ್ಕೆ ಮುಂದಾಗಿದ್ದು,ಘರ್ಷಣೆ ಶುರುವಾಗಿದೆ. ಈ ಕುರಿತು ಇಂಡೋ ಟಿಬೆಟಿಯನ್ ಬಾರ್ಡರ್ ಪೊಲೀಸ್ (ITBP) ನೀಡಿದ ಹೇಳಿಕೆ ಇದೀಗ ದೇಶದಲ್ಲಿ ಕೋಲಾಹಲಕ್ಕೆ ಕಾರಣವಾಗಿದೆ.

ಭಾರತ ಹಾಗೂ ಚೀನಾ ನಡುವಿನ ಸೇನಾ ಘರ್ಷಣೆ ಅರುಣಾಚಲ ಪ್ರದೇಶ ಗಡಿಯುದ್ದಕ್ಕೂ ಹಲವೆಡೆ ನಡೆಯುತ್ತಿದೆ. ITBP ಸೇನೆ ತಕ್ಕ ಉತ್ತರ ನೀಡಿದೆ. ಅರುಣಾಚಲ ಗಡಿಯಲ್ಲಿ ಚೀನಾ ಸೇನೆ ವಿನಾಕರಾಣ ಕಾಲು ಕೆರೆದು ಬರುತ್ತಿದೆ. ಈ ಘರ್ಷಣೆಯನ್ನು ITBP ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ITBP ಡಿಜಿ ಶತ್ರುಜಿತ್ ಸಿಂಗ್ ಕಪೂರ್ ಹೇಳಿದ್ದಾರೆ. 65ನೇ ರೈಸಿಂಗ್ ಡೇಗೂ ಮುನ್ನ ಆಯೋಜಿಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಶತ್ರುಜಿತ್ ಕಪೂರ್, ಅರುಣಾಚಲ ಪ್ರದೇಶ ಘರ್ಷಣೆ ಕುರಿತು ಮಾಹಿತಿ ನೀಡಿದ್ದಾರೆ.

ಗಲ್ವಾನ್ ರೀತಿಯ ಗರ್ಷಣೆಗೆ ಚೀನಾ ಪ್ಲಾನ್

ಗಲ್ವಾನ್ ಕಣಿವೆಯಲ್ಲಿ ಚೀನಾ ಯೋಧರು ನೆಡೆಸಿದ ಘರ್ಷಣೆಯಲ್ಲಿ ಭಾರತೀಯ ಕರ್ನಲ್ ಸಂತೋಶ್ ಬಾಬು ಸೇರಿದಂತೆ 20 ಯೋಧರು ಹುತಾತ್ಮರಾಗಿದ್ದರು. 76 ಯೋಧರು ಗಾಯಗೊಂಡಿದ್ದರು. ಈ ರೀತಿಯ ಘರ್ಷಣೆಗೆ ಚೀನಾ ಇದೀಗ ಅರುಣಾಚಲ ಪ್ರದೇಶದಲ್ಲಿ ಪ್ಲಾನ್ ಮಾಡಿದೆ. ಇದಕ್ಕೆ ITBP ಸರ್ವ ಸನ್ನದ್ಧವಾಗಿದೆ ಎಂದು ಶತ್ರುಜಿತ್ ಸಿಂಗ್ ಕಪೂರ್ ಹೇಳಿದ್ದಾರೆ.

ಮೋದಿ ವಿರುದ್ಧ ಕಾಂಗ್ರೆಸ್ ವಾಗ್ದಾಳಿ

ಅರುಣಾಚಲ ಪ್ರದೇಶದಲ್ಲಿ ಚೀನಾ ಸೇನೆ ನಿರಂತರ ಘರ್ಷಣೆಗೆ ಮುಂದಾಗುತ್ತಿದೆ ಎಂದು ITBP ಡಿಜಿ ಹೇಳಿಕೆ ನೀಡುತ್ತಿದ್ದಂತೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಚೀನಾ ಗಡಿಯಲ್ಲಿ ಚೀನಿ ಸೈನಿಕರು ಘರ್ಷಣೆ ಮಾಡುತ್ತಿದ್ದರೆ, ಪ್ರಧಾನಿ ಮೋದಿ ಸುಮ್ಮನೆ ಕುಳಿತಿದ್ದಾರೆ. ಚೀನಾ ವಿರುದ್ಧ, ಗಡಿ ಪರಿಸ್ಥಿತಿ ಕುರಿತು ಒಂದು ಮಾತು ಆಡಿಲ್ಲ. ಚೀನಾ ಆಕ್ರಮಣ ಮಾಡುತ್ತಲೇ ಇದೆ. ಆದರೆ ಪ್ರಧಾನಿ ಮೋದಿ ಮೌನಕ್ಕೆ ಜಾರಿದ್ದಾರೆ. ಅರುಣಾಚಲ ಪ್ರದೇಶದಲ್ಲಿ ಚೀನಾ ಹಲವು ಗ್ರಾಮಗಳ ಹೆಸರು ಬದಲಿಸಿದೆ. ಇದೀಗ ಸೈನಿಕರ ಜೊತೆ ಘರ್ಷಣೆ ನಡೆಸುತ್ತಿದೆ. ಮೋದಿ ಸರ್ಕಾರ ಕೈಕಟ್ಟಿ ಕುಳಿತಿದೆ ಎಂದು ಕಾಂಗ್ರೆಸ್ ಜನರಲ್ ಸೆಕ್ರಟರಿ ಜೈರಾಂ ರಮೇಶ್ ಹೇಳಿದ್ದಾರೆ.

ಭಾರತೀಯ ITBP ನಡೆಸುತ್ತಿದ್ದ ಪ್ಯಾಟ್ರೋಲಿಂಗ್ ಪಾಯಿಂಟ್ ಕೂಡ ಇದೀಗ ಚೀನಾ ವಶವಾಗಿದೆ ಎಂದು ಜೈರಾಂ ರಮೇಶ್ ಆರೋಪಿಸಿದ್ದಾರೆ. ಭಾರತದ ಪ್ರಮುಖ ಭಾಗವಾಗಿರುವ ಅರುಣಾಚಲ ಪ್ರದೇಶದ ಹಲವು ಪ್ಯಾಟ್ರೋಲಿಂಗ್ ಪಾಯಿಂಟ್, ಗ್ರಾಮಗಳು ಚೀನಾ ಕೈವಶ ಮಾಡುತ್ತಿದ್ದರೂ, ಮೋದಿ ಸರ್ಕಾರ ತಮ್ಮ ವ್ಯಾಪ್ತಿಗೆ ಬರದ ಪ್ರದೇಶದ ರೀತಿ ವರ್ತಿಸುತ್ತಿದೆ ಎಂದು ಜೈರಾಂ ರಮೇಶ್ ಎಕ್ಸ್ ಪೋಸ್ಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕರೆ ಇಲ್ಲ, ವಿಡಿಯೋ ಕಾಲ್ ಇಲ್ಲ; ATMನಿಂದ ₹100 ಡ್ರಾ ಮಾಡಿ ಪತ್ನಿಗೆ ಸುರಕ್ಷಿತವಾಗಿರುವ ಸಂದೇಶ ನೀಡಿದ ಸೈನಿಕ!
Tibet earthquake: ಟಿಬೆಟ್‌ನಲ್ಲಿ ಭೀಕರ ಭೂಕಂಪ; ಕೆಲವೇ ಸೆಕೆಂಡ್‌ಗಳಲ್ಲಿ 300ಕ್ಕೂ ಹೆಚ್ಚು ಮನೆಗಳು ನಾಶ!