ಗಂಡ ಕೂಲಿ ಕೆಲಸ, ಕುಟುಂಬಕ್ಕೆ ಆರ್ಥಿಕ ಸಂಕಷ್ಟ; ₹7ರ ಟಿಕೆಟ್‌ನಿಂದಲೇ ಒಲಿಯಿತು ಕೋಟಿ ಕೋಟಿ ಅದೃಷ್ಟ!

Published : Oct 23, 2026, 10:09 AM IST
Punjab Woman Wins Rupees 1 Crore Lottery With Just a 7 Rupee Ticket

ಸಾರಾಂಶ

ಪಂಜಾಬ್‌ನ ಕೋಟ್ಕಪುರದ ಕೂಲಿ ಕಾರ್ಮಿಕನ ಪತ್ನಿ ಬಿಮ್ಲಾ ದೇವಿ ಕೇವಲ 7 ರೂಪಾಯಿ ನೀಡಿ ಖರೀದಿಸಿದ ಸಿಕ್ಕಿಂ ಸರ್ಕಾರಿ ಲಾಟರಿ ಟಿಕೆಟ್‌ನಿಂದ ಬರೋಬ್ಬರಿ 1 ಕೋಟಿ ರೂ. ಜಾಕ್‌ಪಾಟ್ ಗೆದ್ದಿದ್ದಾರೆ.

ನವದೆಹಲಿ: ಪಂಜಾಬ್‌ನ ಕುಟುಂಬ ಒಂದು ಕೇವಲ 7 ರೂಪಾಯಿ ನೀಡಿ ಖರೀದಿಸಿದ್ದ ಲಾಟರಿ ಟಿಕೆಟ್‌ ಅದೃಷ್ಟವನ್ನು ತಂದುಕೊಟ್ಟಿದೆ. ಬಡತನದಲ್ಲಿದ್ದ ಕುಟುಂಬಕ್ಕೆ ಈಗ ಸಂಕಷ್ಟ ನಿವಾರಣೆ ಆಗಿದ್ದು, ಬರೋಬ್ಬರಿ ಒಂದು ಕೋಟಿ ರೂಪಾಯಿ ಜಾಕ್‌ಪಾಟ್‌ ಹೊಡೆದಿದೆ! ಪಂಜಾಬ್‌ನ ಫರೀದ್‌ಕೋಟ್ ಜಿಲ್ಲೆಯ ಕೋಟ್ಕಪುರದ ಕೂಲಿ ಕಾರ್ಮಿಕನ ಪತ್ನಿ ಲಾಟರಿ ಗೆದ್ದಿದ್ದಾಳೆ. ಕೋಟ್ಕಪುರ ರೈಲ್ವೆ ನಿಲ್ದಾಣದ ಬಳಿಯಿರುವ ಸ್ಟಾರ್ ಲಾಟರಿ ಅಂಗಡಿಯಲ್ಲಿ ಲಾಟರಿ ಖರೀದಿಸಿದ್ದರು.

ಅದೃಷ್ಟ ಬದಲಾಯಿಸಿದ ಲಾಟರಿ

ಹೌದು, ಸಿಕ್ಕಿಂ ಸರ್ಕಾರಿ ಲಾಟರಿಯನ್ನ ಗೆಲ್ಲುವಲ್ಲಿ ಆ ಕುಟುಂಬ ಯಶಸ್ವಿಯಾಗಿದೆ. ಇದೀಗ ಆ ಬಡ ಕುಟುಂಬದ ಆರ್ಥಿಕ ಸ್ಥಿತಿ ಸುಧಾರಿಸುವ ಮತ್ತು ಮಕ್ಕಳಿಗೆ ಉತ್ತಮ ಭವಿಷ್ಯ ಭದ್ರಪಡಿಸುವ ಭರವಸೆಯನ್ನು ಹುಟ್ಟುಹಾಕಿದೆ. ಸ್ಟ್ರಿಂಗ್ ಕೆಲಸ ಮಾಡುವ ಕಾರ್ಮಿಕನ ಪತ್ನಿ ಬಿಮ್ಲಾ ದೇವಿ ಅನ್ನೋರು ಇತ್ತೀಚೆಗೆ ಮನೆಗೆ ಬೇಕಾಗಿದ್ದ ಅಗತ್ಯ ವಸ್ತುಗಳನ್ನ ಖರೀದಿಸಿಲು ಸಿಟಿಗೆ ಹೋಗಿದ್ದರು. ಈ ವೇಳೆ ಅವರಿಗೆ ಇದ್ದಕ್ಕಿದ್ದಂತೆ ಲಾಟರಿ ಟಿಕೆಟ್ ಖರೀದಿಸಬೇಕೆಂಬ ಆಸೆ ಬಂತು. ಅಂತೆಯೇ ಕೇವಲ 7 ರೂ.ಗೆ ಲಾಟರಿ ಟಿಕೆಟ್ ಖರೀದಿಸಿದ್ದರು.

ಮಾಹಿತಿಗಳ ಪ್ರಕಾರ ಲಾಟರಿ ಡ್ರಾ ಮಾಡುವ ಒಂದು ದಿನದ ಮೊದಲು ಟಿಕೆಟ್‌ ಖರೀದಿಸಿದ್ದರು. ಮಾರನೇಯ ದಿನ ಸಂಜೆ ಲಾಟರಿ ಫಲಿತಾಂಶ ಪ್ರಕಟವಾದಾಗ.. ತನ್ನ ಟಿಕೆಟ್‌ಗೆ 1 ಕೋಟಿ ರೂಪಾಯಿ ಬಹುಮಾನ ಬಂದಿದೆ ಎಂಬ ವಿಷಯ ಸಿಕ್ಕಿದೆ. ಅನಿರೀಕ್ಷಿತವಾಗಿ ಸಂತೋಷದ ಸುದ್ದಿ ತಿಳಿದ ಕುಟುಂಬ, ಈಗ ಬದುಕಿಗೆ ಹೊಸ ಕನಸುಗಳನ್ನ ಕಾಣ್ತಿದೆ. ಲಾಟರಿ ಗೆದ್ದ ಸುದ್ದಿ ತಿಳಿಯುತ್ತಿದ್ದಂತೆಯೇ ಕುಟಂಬ ಲಾಟರಿ ಖರೀದಿಸಿದ್ದ ಅಂಗಡಿಗೆ ದೌಡಾಯಿಸಿ ವಿಚಾರಿಸಿದೆ.

ಅಂಗಡಿ ಮಾಲೀಕ ನರೇಶ್ ಮೋಂಗಾಗೆ ಸಿಹಿತಿಂಡಿಗಳನ್ನು ನೀಡಿ ಗೆಲುವನ್ನು ಸಂಭ್ರಮಿಸಿದ್ದಾರೆ. ಜೊತೆಗೆ ಅಲ್ಲೇ ಭಾಂಗ್ರಾ ಪ್ರದರ್ಶಿಸಿ ಸಂಭ್ರಮಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಮ್ಲಾ ದೇವಿ.. ಕುಟುಂಬದ ಆರ್ಥಿಕ ತೊಂದರೆ ನಿವಾರಿಸಲು ಇದು ಸಹಕಾರಿ ಆಗಲಿದೆ. ಇನ್ಮುಂದೆ ನಾವು ನಮ್ಮ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಬಹುದು. ಅವರಿಗೆ ಒಳ್ಳೆಯ ವಿದ್ಯಾಭ್ಯಾಸವನ್ನ ನೀಡುತ್ತೇವೆ. ಒಟ್ಟಾರೆ ಹೇಳಬೇಕು ಅಂದರೆ ನಮ್ಮ ಅದೃಷ್ಟ ಇಂದು ಬದಲಾಗಿದೆ. ಆದರೆ ಅಷ್ಟೊಂದು ಹಣವನ್ನು ಹೇಗೆ ಬಳಸಿಕೊಳ್ಳಬೇಕು ಎಂಬುದು ಗೊತ್ತಿಲ್ಲ. ಸ್ವಲ್ಪ ಭಯವೂ ಇದೆ ಎಂದಿದ್ದಾರೆ.

ಹೀಗಾಗಿ ಬಿಮ್ಲಾ ದೇವಿ.. ಕುಟುಂಬಸ್ಥರ ಜೊತೆ ಒಟ್ಟಿಗೆ ಕೂತು ಚರ್ಚಿಸಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇವೆ. ಮಕ್ಕಳ ಭವಿಷ್ಯವನ್ನು ಭದ್ರಪಡಿಸಿಕೊಳ್ಳವುದೇ ನಮ್ಮ ಮೊದಲ ಆದ್ಯತೆ. ಹೀಗಾಗಿ ಚಿಕ್ಕದಾಗಿ ಒಂದು ಬ್ಯುಸಿನೆಸ್‌ ಶುರುಮಾಡಲು ಪ್ಲಾನ್‌ ಮಾಡುತ್ತೇವೆ ಎಂದಿದ್ದಾರೆ ಬಿಮ್ಲಾ ದೇವಿ.

ಇನ್ನು ಲಾಟರಿ ಅಂಗಡಿಯ ಮಾಲೀಕ ನರೇಶ್ ಮೋಂಗಾ ಕಳೆದ ಆರು ತಿಂಗಳಿನಿಂದ ವ್ಯವಹಾರ ನಡೆಸುತ್ತಿದ್ದರು. ಇತ್ತೀಚೆಗೆ ತಮ್ಮ ಅಂಗಡಿಯನ್ನು ರೈಲ್ವೆ ನಿಲ್ದಾಣದ ಬಳಿ ಸ್ಥಳಾಂತರಿಸಿದ್ದರು ಎಂದು ಹೇಳಿದರು. ತಮ್ಮ ಅಂಗಡಿಯಲ್ಲಿ ಮಾರಾಟವಾದ ಟಿಕೆಟ್‌ಗಳ ಮೂಲಕ ಈ ಹಿಂದೆ ಲಕ್ಷಾಂತರ ರೂಪಾಯಿ ಮೌಲ್ಯದ ಹಲವಾರು ಬಹುಮಾನಗಳನ್ನು ಗೆದ್ದಿದ್ದಾರೆ. ತಮ್ಮ ಸ್ಟಾಲ್‌ನಿಂದ 1 ಕೋಟಿ ರೂಪಾಯಿ ಬಹುಮಾನ ಗೆದ್ದಿರುವುದು ಇದೇ ಮೊದಲು. ಮೋಂಗಾ ಕುಟುಂಬದ ಈ ಗೆಲುವಿಗೆ ತುಂಬಾ ಖುಷಿ ಆಗಿದೆ ಎಂದು ಲಾಟರಿ ಸ್ಟಾಲ್‌ ಮಾಲೀಕ ನರೇಶ್‌ ಹೇಳಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕೇರಳದಲ್ಲಿ ಭೂಕುಸಿತ: ಹಳಿ ತಪ್ಪಿದ ರೈಲು, ಸಂಚಾರ ವ್ಯತ್ಯಯ, 6 ಪ್ರಯಾಣಿಕ ರೈಲುಗಳು ರದ್ದು
ಗರ್ಭಿಣಿಯಾಗಿದ್ದಾಗ ನೆರವಾಗಿದ್ದ ಭಾರತೀಯ ವ್ಯಕ್ತಿ… 10 ವರ್ಷಗಳ ಬಳಿಕ ಆತನನ್ನು ಹುಡುಕಿಕೊಂಡು ಬಂದ ವಿದೇಶಿ ಮಹಿಳೆ!