ಹಸಿದವರಿಗೆ ಊಟ ನೀಡುವುದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ| ಆರು ಲಕ್ಷ ಮಂದಿಗೆ ಊಟ, 120 ದಿನ, ಎರಡು ಕೋಟಿ ರೂ, ಖರ್ಚು| ಆಂಧ್ರ ಪ್ರದೇಶದ ಈ ಕುಟುಂಬದ ಮಾನವೀಯ ನಡೆಗೆ ಸಲಾಂ
ಅಮರಾವತಿ(ಜ.04): ಹಸಿದವರಿಗೆ ಊಟ ನೀಡುವುದಕ್ಕಿಂತ ದೊಡ್ಡ ಕೆಲಸ ಯಾವುದೂ ಇಲ್ಲ. ಇಂದಿಗೂ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವುದನ್ನು ನೋಡಬಹುದು. ಹೀಗಿರುವಾಗ ಶ್ರೀ ಚಂದ್ರಶೇಖರ ಗುರು ಪಾದುಕಾ ಪೀಠ ಹಾಗೂ ಶ್ರೀ ರಾಮಾಯಣ ನವಾನ್ನಿಕ ಯಜ್ಞ ಟ್ರಸ್ಟ್ ಆಂಧ್ರ ಪ್ರದೇಶದ ತೆನ್ನಾಲಿಯಲ್ಲಿ ಎಲ್ಲರಿಗೂ ಮಾರ್ಗದರ್ಶನವಾಗುವ ಕಾರ್ಯ ಮಾಡಿದೆ.
ವಿಷ್ಣುಭಟಲಾ ಅಂಜನಿಯಾ ಚ್ಯಾನುಲ್ ಹೆಸರಿನ ವ್ಯಕ್ತಿ ಕಳೆದ ಇಪ್ಪತ್ತೇಳು ವರ್ಷದ ಹಿಂದೆ ಈ ಟ್ರಸ್ಟ್ ಆರಂಭಿಸಿದ್ದರು. ಬಡವರಿಗೆ ಸಹಾಯ ಮಾಡಲು ಅವರಿದನ್ನು ಆರಂಭಿಸಿದ್ದರು. ಲಾಕ್‌ಡೌನ್ ಸಂದರ್ಭದಲ್ಲೂ ಅವರಿದನ್ನು ಮುಂದುವರೆಸಿದ್ದರು.
ಕಾಯಿಲೆಯಿಂದ ಪ್ರಾಣ ಬಿಟ್ಟ ಮಗಳು, ಮನೆ ಬಿಟ್ಟೋದ ಮಗ; ಬಿಗ್ ಬಾಸ್ ಗಂಗವ್ವ ಕಣ್ಣೀರ ಕಥೆ
ಕೊಳಗೇರಿ ನಿವಾಸಿಗಳ ಹಸಿವು ನಿವಾರಿಸಿದ್ರು
ವಿಷ್ಣುಭಟಲಾ ಯಜ್ಞ ನಾಯಾರಣ ಅವಧಾನಿ ಈ ಬಗ್ಗೆ ಮಾತನಾಡುತ್ತಾ ಆರಂಭದಲ್ಲಿ ಐವತ್ತು ಕಿಲೋ ಅಕ್ಕಿಯ ಊಟ ಜನರಿಗೆ ಹಂಚಿದೆವು. ಇದನ್ನು ಕೊಳಗೇರಿ ನಿವಾಸಿಗಳಿಗೆ ಹಂಚಿದ್ದೆ. ಆದರೆ ಇದರಿಂದ ಅಷ್ಟೇನೂ ಖುಷಿಯಾಗಲಿಲ್ಲ. ಯಾಕರೆಂದರೆ ಅಲ್ಲಿದ್ದ ಎಲ್ಲರಿಗೂ ಊಟ ನೀಡಲು ನಮಗೆ ಸಾಧ್ಯವಾಗಿರಲಿಲ್ಲ. ಹೀಗಿರುವಾಗ ನಾನು ಹಾಗೂ ನನ್ನ ಸಹೋದರ ಸುಮಾರು ಹದಿನೈದು ಕ್ಷೇತ್ರಗಳಲ್ಲಿ ಸುತ್ತಾಡಿ ಜನರ ಪರಿಚಯ ಮಾಡಿಕೊಂಡೆವು. ಇಲ್ಲಿ ಸುಮಾರು 6,000 ಮಂದಿ ಈ ಮಹಾಮಾರಿಯಿಂದಾಗಿ ತಮ್ಮ ನಿತ್ಯದ ಊಟ ಕಳೆದುಕೊಂಡಿದ್ದರು.
15 ಕ್ಷೇತ್ರಗಳಲ್ಲಿ ಊಟ ಹಂಚಲು ಆರಂಭಿಸಿದೆವು
ಅಲ್ಲದೇ ಹೀಗಿರುವಾಗ ನಾವು ಲಾಕ್‌ಡೌನ್ ವೇಳೆ ಕೆಲಸ ಕಳೆದುಕೊಂಡ ಕೆಲ ಸ್ಥಳೀಯ ಅಡುಗೆ ಮಾಡುವವರನ್ನು ಸಂಪರ್ಕಿಸಿದೆವು. ಅವರು ಕೆಲಸ ಮಾಡಲು ಮುಂದಾದರು. ಹೀಗಾಗಿ ನಾವು ಅವರಿಗೆ ಸಂಬಳ ನೀಡಿದೆವು ಹಾಗೂ ಆ ಹದಿನೈದು ಕ್ಷೇತ್ರದಲ್ಲಿದ್ದವರಿಗೆ ಊಟ ಹಂಚಲು ಆರಂಭಿಸಿದೆವು ಎಂದು ತಿಳಿಸಿದ್ದಾರೆ.
ಜೀವನ್ಮರಣ ಸ್ಥಿತಿಯಲ್ಲಿದ್ದ 3 ಚೀನಿ ನಾಗರಿಕರಿಗೆ ಸೇನೆ ನೆರವು!
10,000 ಮಂದಿಗೆ ನಿತ್ಯ ಆಹಾರ
ಅವರ ತಂಡ ನಿತ್ಯ ಒಂದು ಸಾವಿರ ಕೆಜಿ ಪಲ್ಯ ಹಾಗೂ ಸಾಂಬಾರ್ ಮಾಡಿ ಎಂಟರಿಂದ ಹತ್ತು ಸಾವಿರ ಮಂದಿಗೆ ಹಂಚುತ್ತಾರೆ. 62 ದಿನಗಳಲ್ಲಿ ಸುಮಾರು ಒಂದು ಲಕ್ಷ ಊಟ ಸಾಗಿಸಲು ಹಾಗೂ ಇನ್ನಿತರ ದಿನಸಿ ಸಾಗಿಸಲು ಖರ್ಚಾಯ್ತು. ಅಲ್ಲದೇ ಕಳೆದ 120 ದಿನಗಳಲ್ಲಿ ಸುಮಾರು 6 ಲಕ್ಷ ಮಂದಿಯ ಹಸಿವು ನಿವಾರಿಸಿದ್ದು, ಸುಮಾರು ಎರಡು ಕೋಟಿ ಮೊತ್ತ ಖರ್ಚು ಮಾಡಿದ್ದಾರೆ.