
ನವದೆಹಲಿ : ‘ದೇವರಿಗೆಂದು ಭಕ್ತರು ನೀಡುವ ಕಾಣಿಕೆಯನ್ನು ದೇವಸ್ಥಾನದ ಕಾರ್ಯಗಳಿಗಷ್ಟೇ ಬಳಸಬೇಕು. ದೇವಾಲಯಗಳ ದುಡ್ಡನ್ನು ಅನ್ಯ ಕಾರ್ಯಕ್ಕೆ ಬಳಸುವ ಕ್ರಮ ಅಕ್ರಮ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕರ್ನಾಟಕ ಗಡಿಯಲ್ಲಿರುವ ಕೇರಳದ ತಿರುನೆಲ್ಲಿ ದೇವಾಲಯದ ಪ್ರಕರಣವೊಂದರಲ್ಲಿ ಈ ಮಹತ್ವದ ಆದೇಶವನ್ನು ಕೋರ್ಟ್ ನೀಡಿದೆ.
‘ಸಹಕಾರಿ ಬ್ಯಾಂಕುಗಳನ್ನು ಉಳಿಸಲು ದೇವಸ್ಥಾನಕ್ಕೆ ಸೇರಿದ ಹಣ ಬಳಸಲಾಗಿದೆ’ ಎಂಬ ಅರ್ಜಿ ವಿಚಾರಣೆನ ನಡೆಸಿದ ಪೀಠ ಈ ಆದೇಶ ಹೊರಡಿಸಿದೆ.
ಈ ಹಿಂದೆ 5 ಸಹಕಾರಿ ಬ್ಯಾಂಕ್‌ಗಳಲ್ಲಿ ಎಫ್‌ಡಿ ರೂಪದಲ್ಲಿದ್ದ ಠೇವಣಿಯನ್ನು ಮರಳಿಸಲು ಅವುಗಳು ಹಿಂದೇಟು ಹಾಕಿದ್ದನ್ನು ಗಮನಿಸಿದ್ದ ಕೇರಳ ಹೈಕೋರ್ಟ್, 2 ತಿಂಗಳಲ್ಲಿ ಅದನ್ನು ತಿರುನೆಲ್ಲಿ ದೇವಸ್ಥಾನ ದೇವಸ್ವಂಗೆ ಹಿಂದಿರುಗಿಸುವಂತೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಮಾನಂತವಾಡಿ ಕೋ-ಆಪರೇಟಿವ್ ಅರ್ಬನ್ ಸೊಸೈಟಿ ಲಿ. ಮತ್ತು ತಿರುನೆಲ್ಲಿ ಸರ್ವಿಸ್ ಕೋ-ಆಪರೇಟಿವ್ ಬ್ಯಾಂಕ್ ಲಿ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದವು.
ಈ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಸಿಜೆಐ ನ್ಯಾ। ಸೂರ್ಯಕಾಂತ್ ಮತ್ತು ನ್ಯಾ। ಜಯಮಾಲ್ಯ ಬಾಗ್ಚಿ ಅವರ ಪೀಠ, ‘ದೇವರಿಗೆ ಸೇರಿದ ಹಣವನ್ನು ದೇವಸ್ಥಾನದ ಕೆಲಸಗಳಿಗಾಗಿ ಉಳಿಸಿ, ಬಳಸಬೇಕು. ಬೇಕಿದ್ದರೆ ಹಣ ಮರಳಿಸುವ ಅವಧಿಯನ್ನು ವಿಸ್ತರಿಸುವಂತೆ ಹೈಕೋರ್ಟ್‌ಗೆ ಮನವಿ ಮಾಡಿ’ ಎಂದು ನಿರ್ದೇಶಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ