ಕೊರೋನಾ ವೈರಸ್ 2ನೇ ಅಲೆಗೆ ತತ್ತರಿಸುವ ಭಾರತಕ್ಕೆ 40ಕ್ಕೂ ಹೆಚ್ಚು ರಾಷ್ಟ್ರಗಳು ನೆರವು ನೀಡಿದೆ. ಇದರ ಬೆನ್ನಲ್ಲೇ ಭಾರತ ನಿಯಂತ್ರಣಕ್ಕೆ ಅವಿರತ ಪ್ರಯತ್ನ ಮಾಡುತ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ ಕೊರೋನಾ ನಿಯಂತ್ರಣ ಸೇರಿದಂತೆ ದೇಶದ ತುರ್ತು ಪರಿಸ್ಥಿತಿ ಕುರಿತು ಯೂರೋಪಿಯನ್ ಕಮಿಷನ್ ಅಧ್ಯಕ್ಷರ ಜೊತೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ನವಹೆಲಿ(ಮೇ.03): ದೇಶದಲ್ಲಿ ಎದುರಾಗಿರುವ ಕೊರೋನಾ ಸಮಸ್ಯೆಗೆ ಅಂತ್ಯಹಾಡಲು ಕೇಂದ್ರ ಸರ್ಕಾರ ತನ್ನೆಲ್ಲಾ ಶಕ್ತಿಬಳಸುತ್ತಿದೆ. ದೇಶ ವಿದೇಶಗಳಿಂದ ನೆರವು ಪಡೆದಿರುವ ಭಾರತ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿದೆ. ಇದರ ನಡುವೆ ಪ್ರಧಾನಿ ನರೇಂದ್ರ ಮೋದಿ ಇಂದು(ಮೇ.03) ಯುರೋಪಿಯನ್ ಕಮಿಷನ್ ಅಧ್ಯಕ್ಷರಾದ ಉರ್ಸುಲಾ ವಾನ್ ಡೆರ್ ಲೇಯನ್ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ.
PM ಕೇರ್ಸ್ ಫಂಡ್ ಮೂಲಕ 1 ಲಕ್ಷ ಪೊರ್ಟೇಬಲ್ ಆಕ್ಸಿಜನ್ ಸಾಂದ್ರಕ ಖರೀದಿಗೆ ಕೇಂದ್ರ ನಿರ್ಧಾರ.
undefined
ಕೊರೋನಾ 2ನೇ ಅಲೆ ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ. ಭಾರತದಲ್ಲಿ ಪರಿಸ್ಥಿತಿ ಹಾಗೂ ನಿಯಂತ್ರಣಕ್ಕೆ ತೆಗೆದುಕೊಂಡಿರುವ ಕ್ರಮಗಳು ಸೇರಿದಂತೆ ಮಹತ್ವದ ಮಾತುಕತೆ ನಡೆಸಿದ್ದಾರೆ. ಈ ವೇಳೆ ಕೊರೋನಾ ವಿರುದ್ಧದ ಹೋರಾಟಕ್ಕೆ ತ್ವರಿತ ಯುರೋಪಿಯನ್ ಕಮಿಷನ್ ತ್ವರಿತ ಬೆಂಬಲವನ್ನು ನೀಡಿದ್ದಕ್ಕೆ ಪ್ರಧಾನಿ ಮೋದಿ ಧನ್ಯವಾದ ಹೇಳಿದ್ದಾರೆ.
ಕೊರೋನಾ ಎದುರಿಸಲು ಸೇನಾ ಪಡೆ ಸಿದ್ಧತೆ ಪರಿಶೀಲಿಸಿದ ಪ್ರಧಾನಿ ಮೋದಿ!
ಇದೇ ವೇಳೆ ಭಾರತ ಹಾಗೂ ಯೂರೋಪಿಯನ್ ಯೂನಿಯನ್(EU) ಒಕ್ಕೂಟ ಸಭೆ ಕುರಿತು ಚರ್ಚೆ ನಡೆಸಿದ್ದಾರೆ. ಭಾರತ- ಯುರೋಪಿಯನ್ ಯೂನಿಯನ್ ಸಹಭಾಗಿತ್ವವು ಕಳೆದ ಜುಲೈನಿಂದ ಹೊಸ ವೇಗ ಪಡೆದುಕೊಂಡಿದೆ. ಶೃಂಗಸಭೆ ಬಳಿಕ ಮತ್ತಷ್ಟು ಒಗ್ಗಟ್ಟಾಗಿ ಪಿಡುಗು ಎದುರಿಸಲು ಸಜ್ಜಾಗಿದೆ. ಮುಂಬರುವ ಭಾರತ-EU ನಾಯಕರ ಸಭೆ 8 ಮೇ 2021 ರಂದು ವರ್ಚುವಲ್ ಸ್ವರೂಪದಲ್ಲಿ ನಡೆಯಲಿದೆ