
ನವದೆಹಲಿ(ಮೇ.03): ಪ್ರತಿ ದಿನ ದಾಖಲಾಗುತ್ತಿರುವ ಕೊರೋನಾ ವೈರಸ್ ಪ್ರಕರಣಗಳು ಸಂಖ್ಯೆ ಇದೀಗ ಮತ್ತಷ್ಟು ಆತಂಕ ತರುತ್ತಿದೆ. ಕಾರಣ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವ ಮಹಾರಾಷ್ಟ್ರ, ಕರ್ನಾಟಕ ಸೇರಿದಂತೆ ಪ್ರಮುಖ ರಾಜ್ಯಗಳಲ್ಲಿ ಲಾಕ್‌ಡೌನ್, ಕರ್ಫ್ಯೂ ಸೇರಿದಂತೆ ಹಲವು ಕಠಿಣ ಕ್ರಮಗಳು ಜಾರಿಯಲ್ಲಿದೆ. ಆದರೂ ಸಂಖ್ಯೆ ಇಳಿಯುತ್ತಿಲ್ಲ. ಹೀಗಾಗಿ ಭಾರತವನ್ನು ಮತ್ತೆ ಲಾಕ್‌ಡೌನ್ ಮಾಡಲು ಸಾಧಕ ಬಾಧಕಗಳನ್ನು ಕೇಂದ್ರ ಸರ್ಕಾರ ಚರ್ಚೆ ನಡೆಸುತ್ತಿದೆ.
ದೇಶಾದ್ಯಂತ ಮತ್ತೆ ಲಾಕ್‌ಡೌನ್ ಆಗುತ್ತಾ? ಕೇಂದ್ರ ಸಚಿವ ಜೋಶಿ ಹೇಳಿದ್ದು ಹೀಗೆ..?.
ಸೋಮವಾರ(ಮೇ.03) ಬಿಡುಗಡೆಯಾಗಿರುವ ಕೊರೋನಾ ರಿಪೋರ್ಟ್‌ನಲ್ಲಿ ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 3,68,147 ಪ್ರಕರಣಗಳು ದಾಖಲಾಗಿದೆ. ಪ್ರತಿ ದಿನ ಸರಿಸುಮಾರು 4 ಲಕ್ಷ ಗಡಿ ತಲುಪುತ್ತಿರುವ ಕಾರಣ ಕೊರೋನಾ ಟಾಸ್ಕ್ ಫೋರ್ಸ್ ತಂಡ ಕೇಂದ್ರ ಸರ್ಕಾರಕ್ಕೆ ವರದಿ ನೀಡಿದೆ. ಈ ವರದಿಯಲ್ಲಿ ಸಂಪೂರ್ಣ ಭಾರತ ಲಾಕ್‌ಡೌನ್ ಮಾಡುವುದು ಅನಿವಾರ್ಯವಾಗಿದೆ ಎಂದಿದೆ.
ಭಾರತದ ಪ್ರಮುಖ ಆರೋಗ್ಯ ಸಂಸ್ಥೆಗಳಾದ ಏಮ್ಸ್ ಮತ್ತು ಇಂಡಿಯನ್ ಕೌನ್ಸಿಲ್ ಫಾರ್ ಮೆಡಿಕಲ್ ರಿಸರ್ಚ್‌ನ ಸದಸ್ಯರನ್ನು ಒಳಗೊಂಡಿರುವ ಟಾಸ್ಕ್ ಫೋರ್ಸ್ ತಂಡ ಇದೀಗ ಭಾರತದ ಕೊರೋನಾ ಪ್ರಕರಣಗಳ ಏರಿಕೆ ಕುರಿತು ತೀವ್ರ ತಲೆಕೆಡೆಸಿಕೊಂಡಿದೆ.
ಜನತಾ ಕರ್ಫ್ಯೂ ಸಡಿಲಿಕೆ: ಇಂದಿನಿಂದಲೇ ಜಾರಿ!
ಕೇಂದ್ರಕ್ಕೆ ನೀಡಿರುವ ವರದಿಯಲ್ಲಿ ಸದ್ಯ ಭಾರತದಲ್ಲಿರುವ ಡಬಲ್ ರೂಪಾಂತರಿ ವೈರಸ್ ಹೆಚ್ಚು ಮಾರಕವಾಗಿದ್ದು, ಅತೀ ವೇಗವಾಗಿ ಹರಡುತ್ತಿದೆ. ಹೀಗಾಗಿ ಇದರ ನಿಯಂತ್ರಣ ಅತೀ ಅಗತ್ಯವಾಗಿದ್ದು, ಸರ್ಕಾರ ಈ ಕುರಿತು ಗಮನಹರಿಸಬೇಕು ಎಂದು ವರದಿ ನೀಡಿದೆ.
ಕೊರೋನಾ ವೈರಸ್‌ನಿಂದ ಭಾರತವನ್ನು ಕಾಪಾಡಲು ಕಳೆದ ವರ್ಷ ಲಾಕ್‌ಡೌನ್ ಹೇರಲಾಗಿತ್ತು. ಅದರ ಪರಿಣಾಣ ಇನ್ನೂ ಇದೆ. ಹೀಗಾಗಿ ಕೇಂದ್ರ ಸರ್ಕಾರ ಲಾಕ್‌ಡೌನ್ ಹೊರತು ಪಡಿಸಿ ಉಳಿದ ದಾರಿಗಳನ್ನು ಚಿಂತಿಸುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ