
ಹೈದ್ರಾಬಾದ್: ತಿಂಗಳಿಗೆ ಹೆಚ್ಚೆಂದರೆ 1.25 ಲಕ್ಷ ರು. ಪಡೆಯುವ ಸಾರಿಗೆ ಇಲಾಖೆಯ ಅಧಿಕಾರಿಯೊಬ್ಬರ ಬಳಿ 100 ಕೋಟಿ ರು.ಗೂ ಅಧಿಕ ಮೌಲ್ಯದ ಆಸ್ತಿಯಿರುವುದನ್ನು ತೆಲಂಗಾಣದ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.
ಈ ಸಂಬಂಧ ಬುಧವಾರ ಅವರ ಮನೆ, ಕಚೇರಿ ಸೇರಿದಂತೆ ಹಲವು ಸ್ಥಳಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಮೆಹಬೂಬ್‌ನಗರ ಜಿಲ್ಲೆಯ ಉಪ ಸಾರಿಗೆ ಆಯುಕ್ತ ಮುದ್ ಕೃಷ್ಣಗೆ ಸೇರಿದ 11 ಸ್ಥಳಗಳ ಮೇಲೆ ನಡೆಸಿದ ದಾಳಿ ವೇಳೆ, ಸಂಗಾರೆಡ್ಡಿ ಜಿಲ್ಲೆಯಲ್ಲಿ 31 ಎಕರೆ ಕೃಷಿಭೂಮಿ, ನಿಜಾಮಾಬಾದ್ ಪುರಸಭೆಯ ವ್ಯಾಪ್ತಿಯಲ್ಲಿ 10 ಎಕರೆ ವಾಣಿಜ್ಯ ಭೂಮಿ, ಲಹರಿ ಅಂತಾರಾಷ್ಟ್ರೀಯ ಹೋಟೆಲ್‌ನ ಶೇ.50ರಷ್ಟು ಷೇರು, ನಿಜಾಮಾಬಾದ್‌ನಲ್ಲಿ 3,000 ಚದರಡಿ ಪ್ರೀಮಿಯಂ ಪೀಠೋಪಕರಣಗಳ ಶೋ ರೂಂ, 1.37 ಕೋಟಿ ರು. ಬ್ಯಾಂಕ್ ಬ್ಯಾಲೆನ್ಸ್, 1 ಕೆ.ಜಿ. ಚಿನ್ನಾಭರಣ, ಇನ್ನೋವಾ ಕ್ರಿಸ್ಟಾ ಮತ್ತು ಹೋಂಡಾ ಸಿಟಿ ಸೇರಿದಂತೆ ಹಲವು ಐಷಾರಾಮಿ ವಾಹನ, 1 ಮನೆ, 1 ನರ್ಸರಿ ಇರುವುದು ಪತ್ತೆಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ