ಕ್ರಿಕೆಟ್ ಆಡಿದ ತೆಲಂಗಾಣ ಸಚಿವ... ಕೆಟಿಆರ್‌ ಸೂಪರ್‌ ಶಾಟ್‌ಗೆ ಅಭಿಮಾನಿಗಳು ಕ್ಲೀನ್‌ಬೌಲ್ಡ್

Published : Jan 27, 2022, 04:50 PM IST
ಕ್ರಿಕೆಟ್ ಆಡಿದ ತೆಲಂಗಾಣ ಸಚಿವ... ಕೆಟಿಆರ್‌ ಸೂಪರ್‌ ಶಾಟ್‌ಗೆ ಅಭಿಮಾನಿಗಳು ಕ್ಲೀನ್‌ಬೌಲ್ಡ್

ಸಾರಾಂಶ

ಕ್ರೀಡಾ ಥೀಮ್ ಪಾರ್ಕ್‌ನ ಉದ್ಘಾಟನಾ ಕಾರ್ಯಕ್ರಮ ಕ್ರಿಕೆಟ್ ಆಡಿದ ಸಚಿವ  ಕೆ ಟಿ ರಾಮರಾವ್  ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌

ಹೈದರಾಬಾದ್‌(ಜ.27): ತೆಲಂಗಾಣ ಸಚಿವ ಕೆ ಟಿ ರಾಮರಾವ್ ಅವರು ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಶೇರ್‌ ಆಗಿ ವೈರಲ್‌ ಆಗಿದ್ದು, ನೆಟ್ಟಿಗರು ಸಚಿವರ ಸೂಪರ್ ಶಾಟ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿಡಿಯೋದಲ್ಲಿ ಕೆಟಿಆರ್ ಎಂದೇ ಜನಪ್ರಿಯವಾಗಿರುವ ತೆಲಂಗಾಣದ ಸಚಿವ 45 ವರ್ಷದ  ಕೆ ಟಿ ರಾಮರಾವ್ ಅವರು  ಸಖತ್‌ ಆಗಿ ಬ್ಯಾಟಿಂಗ್ ಮಾಡಿದ್ದು, ಈ ವೇಳೆ  ನೆರೆದ ಜನರು ರಾವ್ ಅವರ ಕ್ರೀಡಾಸ್ಪೂರ್ತಿಯನ್ನು ಶ್ಲಾಘಿಸಿದರು. 

ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಪಕ್ಷದ ಗ್ರಾಮವೊಂದರ ಯುವ ಅಧ್ಯಕ್ಷರಾಗಿರುವ ರಘು ವರ್ಧನ್ ರೆಡ್ಡಿ(Raghu Vardhan Reddy) ಅವರು ಟ್ವಿಟರ್‌ನಲ್ಲಿ ಈ ವಿಡಿಯೋ ಪೋಸ್ಟ್ ಮಾಡಿದ್ದಾರೆ. ನೀವು ಇಷ್ಟು ಚೆನ್ನಾಗಿ ಆಡುತ್ತೀರಿ ಎಂದು ನಿರೀಕ್ಷಿಸಿರಲಿಲ್ಲ.  ಚೆನ್ನಾಗಿ ಆಡಿದ್ದೀರಿ. ನಿಜಕ್ಕೂ ಚೆನ್ನಾಗಿ ಆಡಿದ್ದೀರಿ ಎಂದು ಬರೆದು ಈ ವೀಡಿಯೊವನ್ನು ಟ್ವಿಟ್ ಮಾಡಿದ್ದಾರೆ. ಈ ಟ್ವಿಟ್‌ ಅನ್ನು ಸ್ವತ: ರಾಮರಾವ್‌ ಕೂಡ ಶೇರ್ ಮಾಡಿದ್ದಾರೆ. ರಾಮರಾವ್‌ ತೆಲಂಗಾಣ ಸರ್ಕಾರದಲ್ಲಿ ಐಟಿ, ಕೈಗಾರಿಕೆ ಮತ್ತು ವಾಣಿಜ್ಯ ಮತ್ತು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿದ್ದಾರೆ.

30 ಸೆಕೆಂಡುಗಳ ಈ ವಿಡಿಯೋವನ್ನು ಇಲ್ಲಿಯವರೆಗೆ 37,000 ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ.  ನೆಟ್ಟಿಗರು ಈ ವಿಡಿಯೋಗೆ ಪ್ರಶಂಸೆ ವ್ಯಕ್ತಪಡಿಸಿದ್ದು, 'ಯಂಗ್ ಡೈನಾಮಿಕ್ ಲೀಡರ್ ಕೆಟಿಆರ್ ಗಾರು' ಎಂದು ಟ್ವಿಟ್ಟರ್‌ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಈ ವಿಡಿಯೋ ಕುತ್ಬುಲ್ಲಾಪುರದ ( Quthbullapur) ಟಿಎಸ್‌ಐಐಸಿ ಕಾಲೋನಿಯಲ್ಲಿ ಕ್ರೀಡಾ ಥೀಮ್ ಪಾರ್ಕ್‌ನ ಉದ್ಘಾಟನಾ ಕಾರ್ಯಕ್ರಮದಲ್ಲಿ ಸೆರೆ ಹಿಡಿದ ದೃಶ್ಯವಾಗಿದೆ.  ರಾವ್ ಅವರು ಕಾರ್ಮಿಕ ಮತ್ತು ಉದ್ಯೋಗ ಸಚಿವ ಚಾಮಕೂರ ಮಲ್ಲಾ ರೆಡ್ಡಿ (Chamakura Malla Reddy) ಅವರೊಂದಿಗೆ ಜನವರಿ 25 ರಂದು ಕ್ರೀಡಾ ಥೀಮ್ ಪಾರ್ಕ್ ಅನ್ನು ಉದ್ಘಾಟಿಸಿದರು. ವಿಧಾನಸಭಾ ಸದಸ್ಯ (ಎಂಎಲ್‌ಎ) ವಿವೇಕಾನಂದ ಕೆ.ಪಿ (Vivekanand KP), ವಿಧಾನ ಪರಿಷತ್ ಸದಸ್ಯೆ (ಎಂಎಲ್‌ಸಿ) ಸುರಭಿ ವಾಣಿ ದೇವಿ (Surabhi Vani Devi), ಎಂಎಲ್‌ಸಿ ಶಂಬಿಪುರ ರಾಜು (Shambipur Raju), ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಜಿಎಚ್‌ಎಂಸಿ) ಮೇಯರ್ ವಿಜಯಲಕ್ಷ್ಮಿ ಗದ್ವಾಲ್ (Vijayalaxmi Gadwal) ಮತ್ತು ಉಪಮೇಯರ್ ಮೋತೆ ಶ್ರೀಲತಾ ಶೋಬನ್ ರೆಡ್ಡಿ (Mothe Srilatha Shoban Reddy) ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Ind vs WI : ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಭಾರತ ತಂಡ ಪ್ರಕಟ, ದೀಪಕ್ ಹೂಡಾ ಅಚ್ಚರಿಯ ಆಯ್ಕೆ

2019 ರಲ್ಲಿ ತೆಲಂಗಾಣ ಸಂಪುಟಕ್ಕೆ ಮರು ಸೇರ್ಪಡೆಗೊಂಡ ನಂತರ, ರಾವ್ ಅವರು ಐಟಿ, ಕೈಗಾರಿಕೆಗಳು ಮತ್ತು ವಾಣಿಜ್ಯ ಮತ್ತು ಪೌರಾಡಳಿತ ಮತ್ತು ನಗರಾಭಿವೃದ್ಧಿ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿರ್ಸಿಲ್ಲಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುವ ರಾವ್ ಅವರು 2006 ರಲ್ಲಿ ಪೂರ್ಣಾವಧಿ ರಾಜಕೀಯ ಪ್ರವೇಶ ಮಾಡಿದ್ದರು.

Ball-Tampering: ಚೆಂಡು ವಿರೂಪಗೊಳಿಸಿ 4 ಪಂದ್ಯಕ್ಕೆ ನಿಷೇಧಕ್ಕೊಳಗಾದ ಬೌಲರ್..!

ತೆಲಂಗಾಣದ ಸಿದ್ದಿಪೇಟೆಯವರಾದ ಕೆ.ಟಿ. ರಾಮರಾವ್‌ ಹೈದರಾಬಾದ್‌ನ ನಿಜಾಮ್ ಕಾಲೇಜಿನಲ್ಲಿ ಮೈಕ್ರೋಬಯಾಲಜಿಯಲ್ಲಿ ಬ್ಯಾಚುಲರ್ ಪದವಿಯನ್ನು ಗಳಿಸಿದ್ದಾರೆ. ಜೊತೆಗೆ ಎರಡು ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ದಕ್ಷಿಣ ಆಫ್ರಿಕಾ ಎದುರಿನ ನಿರ್ಣಾಯಕ ಪಂದ್ಯಕ್ಕೆ ಭಾರತ ತಂಡದಲ್ಲಿ ಒಂದು ಮೇಜರ್ ಚೇಂಜ್?