ತೆಲಂಗಾಣ ಕಾಂಗ್ರೆಸ್ ಸರ್ಕಾರದಿಂದ ರಾಷ್ಟ್ರಧ್ವಜಕ್ಕೆ ಅವಮಾನ, ತಲೆಕೆಳಗಾದ ತ್ರಿವರ್ಣ!

Published : Jan 26, 2025, 12:34 PM ISTUpdated : Jan 26, 2025, 12:52 PM IST
ತೆಲಂಗಾಣ ಕಾಂಗ್ರೆಸ್ ಸರ್ಕಾರದಿಂದ ರಾಷ್ಟ್ರಧ್ವಜಕ್ಕೆ ಅವಮಾನ, ತಲೆಕೆಳಗಾದ ತ್ರಿವರ್ಣ!

ಸಾರಾಂಶ

.

ಹೈದರಾಬಾದ್ (ಜ.26): ತೆಲಂಗಾಣ ಡಿಜಿಟಲ್ ಮೀಡಿಯಾ ವಿಭಾಗವು ತನ್ನ ಗಣರಾಜ್ಯೋತ್ಸವದ ಪೋಸ್ಟ್ ಅನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದು, ಭಾರತದ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾರಿಸಿರುವುದು ವಿವಾದಕ್ಕೆ ಕಾರಣವಾಗಿದೆ.

ರಾಷ್ಟ್ರಧ್ವಜದ ಮೇಲ್ಭಾಗದಲ್ಲಿ ಕೇಸರಿ ಬಣ್ಣದ ಬದಲು ಹಸಿರು ಬಣ್ಣವನ್ನು ಹೊಂದಿರುವ ಚಿತ್ರವು ಭಾರತದ ಧ್ವಜ ಸಂಹಿತೆ 2002 ರ ಸ್ಪಷ್ಟ ಉಲ್ಲಂಘನೆಯಾಗಿದೆ.

ಹೈದರಾಬಾದ್: ಸಿಎಂ ರೇವಂತ್ ರೆಡ್ಡಿ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಹಾಗೂ ರಾಷ್ಟ್ರಧ್ವಜಕ್ಕೆ ಅವಮಾನ ಮಾಡಿದೆ. ಗಣರಾಜ್ಯೋತ್ಸವದಂದು ಸೆಕ್ರೆಟರಿಯೇಟ್‌ನಲ್ಲಿರುವ ಬಾಬಾಸಾಹೇಬರ ಪ್ರತಿಮೆಗೆ ಮಾಲಾರ್ಪಣೆ ಮಾಡದ ಕಾಂಗ್ರೆಸ್ ಸರ್ಕಾರ, ಅಲ್ಲದೆ ಗಣರಾಜ್ಯೋತ್ಸವದ ಶುಭಾಶಯ ಕೋರಿ ಮಾಡಿದ ಜಾಹೀರಾತುಗಳಲ್ಲಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಪೋಸ್ಟ್ ಮಾಡಲಾಗಿದೆ. ಇದು ಉದ್ದೇಶಪೂರ್ವಕವೋ, ಅಚಾನಕ್ಕಾಗಿ ಆಗಿರುವುದೋ ತಿಳಿದಿಲ್ಲ.

ಇದನ್ನೂ ಓದಿ: ಈ ಬಾರಿಯ ಗಣರಾಜ್ಯೋತ್ಸವದ ವಿಶೇಷತೆಯೇನು ಗೊತ್ತಾ? | Republic Day 2025 | Kannada News | Suvarna News 

 

ಆದರೆ ಪೋಸ್ಟ್ ಮಾಡಲಾಗಿರುವ ಚಿತ್ರದಲ್ಲಿ ರಾಷ್ಟ್ರಧ್ವಜವು ಮೇಲೆ ಕೇಸರಿ ಬದಲಾಗಿ ಹಸಿರು ಮತ್ತು ಮಧ್ಯದಲ್ಲಿ ಬಿಳಿ ಕೆಳಗಡೆ ಕೇಸರಿ ಬಣ್ಣವನ್ನು ಹೊಂದಿರುವ ಧ್ವಜವನ್ನು ಪ್ರಕಟಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಪ್ರಕಟಿಸಲಾದ ಚಿತ್ರದಲ್ಲಿ ಐಟಿ ಕೈಗಾರಿಕೆ ಸಚಿವ ಶ್ರೀಧರ್ ಬಾಬು, ರೇವಂತ್ ರೆಡ್ಡಿ ಮತ್ತು ಅಂಬೇಡ್ಕರ್ ಅವರ ಚಿತ್ರಗಳಿವೆ. ಐಟಿ ಇಲಾಖೆಯ ಅಧೀನದಲ್ಲಿರುವ ತೆಲಂಗಾಣ ಡಿಜಿಟಲ್ ಮೀಡಿಯಾ ವಿಂಗ್ ತನ್ನ ಎಕ್ಸ್ ಖಾತೆಯಲ್ಲಿ ತಪ್ಪಾದ ಫೋಟೊದ ಜೊತೆಗೆ "ತೆಲಂಗಾಣದ ಸಮಸ್ತ ಜನತೆಗೆ ಗಣರಾಜ್ಯೋತ್ಸವದ ಶುಭಾಶಯಗಳು' ಎಂದು ಪೋಸ್ಟ್ ಮಾಡಿದೆ. ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾದ ಬಳಿಕ ಪೋಸ್ಟ್ ಅನ್ನು ಅಳಿಸಲಾಗಿದೆ.

ನೆಟಿಜೆನ್ಸ್ ಕಿಡಿ:

ರಾಷ್ಟ್ರಧ್ವಜ ತೆಲಕೆಳಗಾಗಿ ಪ್ರದರ್ಶಿಸಿರುವ ಚಿತ್ರವನ್ನು ಪೋಸ್ಟ್ ಮಾಡಿರುವ ತೆಲಂಗಾಣ ಡಿಜಿಟಲ್ ಮೀಡಿಯಾ ವಿರುದ್ಧ ನೆಟಿಜೆನ್ಸ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಕ್ಷಮಿಸಲಾಗದ್ದು. ತೆಲಂಗಾಣ ಸರ್ಕಾರದ ಅಧಿಕೃತ ಖಾತೆಯಲ್ಲೇ ನಮ್ಮ ರಾಷ್ಟ್ರಧ್ವಜಕ್ಕೆ ಅವಮಾನವಾಗಿದೆ. ಇದನ್ನ ಪ್ರಕಟಿಸುವ ಮುಂಚೆ ಗಮನಿಸಲಿಲ್ಲವೇ? ರಾಷ್ಟ್ರಧ್ವಜವನ್ನು ಈ ರೀತಿ ಕ್ರಿಯೆಟ್ ಮಾಡಿದವರು ಯಾರು? ಅವನು ಭಾರತೀಯನೋ ವಿದೇಶಿಯನೋ? ಕೇಸರಿ ಮೇಲ್ಭಾದಲ್ಲಿರುತ್ತದೆ ಎಂದು ತಿಳಿಯಲಿಲ್ಲವೇ? ಸರ್ಕಾರದ ಅಧಿಕೃತ ಡಿಜಿಟಲ್ ಮೀಡಿಯಾ ಎಕ್ಸ್ ಹ್ಯಾಂಡಲ್ ಮಾಡುವವರು ಗಮನಿಸಲಿಲ್ಲವೆ? ಇದೊಂದು ಉದ್ದೇಶಪೂರ್ವಕ ಪ್ರಮಾದ ಕ್ಷಮಿಸಲಾಗದು ತಪ್ಪಿತಸ್ಥರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದಾರೆ. 

ಧ್ವಜ ಸಂಹಿತೆ:

ಭಾರತದ ರಾಷ್ಟ್ರಧ್ವಜ ದೇಶಕ್ಕೆ ಹೆಮ್ಮೆಯ ವಿಚಾರ. ಎಲ್ಲಾ ಭಾರತೀಯರು ರಾಷ್ಟ್ರಧ್ವಜವನ್ನು ಗೌರವಿಸುವುದು, ಕಾಪಾಡಿಕೊಳ್ಳುವುದು ವಿಶೇಷ ಜವಾಬ್ದಾರಿಯಾಗಿದೆ. ರಾಷ್ಟ್ರೀಯ ದಿನಗಳು ಮತ್ತು ಸರ್ಕಾರಿ ಆಚರಣೆಗಳಲ್ಲಿ ರಾಷ್ಟ್ರಧ್ವಜವನ್ನು ಹಾರಿಸಲಾಗುತ್ತದೆ. ಆದಾಗ್ಯೂ, ರಾಷ್ಟ್ರಧ್ವಜವನ್ನು ಬಳಸುವಾಗ ಅನುಸರಿಸುವ ಕಾರ್ಯವಿಧಾನಗಳಲ್ಲಿ ತಪ್ಪುಗಳು, ದೋಷಗಳು ಮತ್ತು ಉಲ್ಲಂಘನೆಗಳಾಗದಂತೆ ಎಚ್ಚರವಹಿಸಬೇಕು. ಕಾನೂನು ಉಲ್ಲಂಟಿಸಿದರೆ ಶಿಕ್ಷೆಯೂ ಬಗ್ಗೆಯೂ ತಿಳಿಸಿದೆ. ಧ್ವಜ ವಂದನೆಯ ಸಂದರ್ಭದಲ್ಲಿ ಮಾಡಬೇಕಾದ ಮತ್ತು ಮಾಡಬಾರದ ವಿಷಯಗಳನ್ನು ಸದಾ ನೆನಪಿನಲ್ಲಿಟ್ಟುಕೊಳ್ಳಬೇಕು. ಅದಕ್ಕಾಗಿಯೇ 2002ರಲ್ಲಿ ಕೇಂದ್ರ ಸರ್ಕಾರ ರಾಷ್ಟ್ರ ಧ್ವಜಾರೋಹಣವನ್ನು ಗೆಜೆಟ್ ಮಾಡಿದೆ.

ತ್ರಿವರ್ಣ ಧ್ವಜವು ಮೇಲಿನಿಂದ ಕೆಳಕ್ಕೆ ಸಮಾನ ಪ್ರಮಾಣದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಹೊಂದಿರಬೇಕು. ಧ್ವಜದ ಬಿಳಿ ಬಣ್ಣದ ಮಧ್ಯದಲ್ಲಿ ಅಶೋಕ ಧರ್ಮಚಕ್ರ (24 ಗೆರೆ) ನೀಲಿಯಾಗಿರಬೇಕು. ಧ್ವಜದ ಮೇಲೆ ಯಾವುದೇ ಬರಹಗಳು, ಸಹಿಗಳು ಅಥವಾ ಮುದ್ರಣಗಳು ಇರಬಾರದು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪಶ್ಚಿಮ ಬಂಗಾಳದಲ್ಲಿ ಬಾಬ್ರಿ ಮಸೀದಿಗೆ ಅಡಿಗಲ್ಲು ಹಾಕಿದ ಟಿಎಂಸಿ ಶಾಸಕ
ಇಡಿಯಿಂದ ಮತ್ತೆ ಅನಿಲ್ ಅಂಬಾನಿ 1120 ಕೋಟಿ ಹೆಚ್ಚುವರಿ ಆಸ್ತಿ ಮುಟ್ಟುಗೋಲು