'ಆಶೀರ್ವಾದ್ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ, ಗೆಳೆಯ ರಾಮ್‌ವಿಲಾಸ್‌ ನೆನೆದ ಪಿಎಂ!

By Suvarna NewsFirst Published Jul 5, 2021, 2:54 PM IST
Highlights

* ಗೆಳೆಯ ರಾಮ್‌ ವಿಮಾಸ್‌ ಪಪಾಸ್ವಾನ್ ನೆನಪಿಸಿಕೊಂಡ ಪಿಎಂ ಮೋದಿ

* ಚಿರಾಗ್ ಆರಂಭಿಸಿದ 'ಆಶೀರ್ವಾದ ಯಾತ್ರೆ'ಗೆ ಸಿಕ್ತು ಮೋದಿ ಆಶೀರ್ವಾದ

* ಆಶೀರ್ವಾದ್ ಯಾತ್ರೆ ಮೂಲಕ ಚಿರಾಗ್‌ ಶಕ್ತಿ ಅಂದಾಜಿಸಲಿದೆ ಬಿಜೆಪಿ

ಲಕ್ನೋ(ಜು.05): ರಾಮ್‌ ವಿಲಾಸ್‌ ಪಾಸ್ವಾನ್ ನಿಧನದ ಬಳಿಕ ಎಲ್‌ಜೆಪಿಯಲ್ಲಿ ಭಿನ್ನಮತ ತಲೆದೋರಿದೆ. ಈ ಬಿರುಕಿನ ಬಳಿಕ ಅವರ ಪುತ್ರ ಸಂಸದ ಚಿರಾಗ್‌ ಪಾಸ್ವಾನ್ ಮೊದಲ ಬಾರಿಒ ತಮ್ಮ ಶಕ್ತಿ ಪ್ರದರ್ಶನಕ್ಕೆ ಯಾತ್ರೆ ಆರಂಭಿಸಿದ್ದಾರೆ. ಇದಕ್ಕೂ ಮುನ್ನ ಪಿಎಂ ಮೋದಿ ಮಾಡಿದ ಟ್ವೀಟ್‌ ಅವರ ಬಲವನ್ನು ಮತ್ತಷ್ಟು ಹೆಚ್ಚಿಸಿದೆ. ಪಿಎಂ ಮೋದಿ ರಾಮ್‌ ವಿಲಾಸ್‌ ಪಾಸ್ವಾನ್‌ರನ್ನು ಅವರ ಜನ್ಮ ದಿನದಂದು ನೆನಪಿಸಿಕೊಳ್ಳುತ್ತಾ ಟ್ವೀಟ್ ಮಾಡಿದ್ದು, ಇಂದು ನನ್ನ ಗೆಳೆಯ ಸ್ವರ್ಗೀಯ ರಾಮ್‌ ವಿಲಾಸ್‌ ಪಾಸ್ವಾನ್ ಜಯಂತಿ. ಅವರ ಅನುಪಸ್ಥಿತಿ ಬಹಳಷ್ಟು ಕಾಡುತ್ತದೆ. ಅವರು ಭಾರತದ ಅತ್ಯಂತ ಅನುಭವಿ ಶಾಸಕ ಹಾಗೂ ಸಚಿವರಲ್ಲಿ ಒಬ್ಬರಾಗಿದ್ದರು. ಜನಸೇವೆ ಹಾಗೂ ದಲಿತರನ್ನು ಮೇಲೆತ್ತುವಲ್ಲಿ ಅವರ ಕೊಡುಗೆ ಮರೆಯಲಸಾಧ್ಯ ಎಂದಿದ್ದಾರೆ.

ಆಶೀರ್ವಾದ್ ಯಾತ್ರೆ ಮೂಲಕ ಚಿರಾಗ್‌ ಶಕ್ತಿ ಅಂದಾಜಿಸಲಿದೆ ಬಿಜೆಪಿ 

ಎಲ್ಲಾ ಪಕ್ಷಗಳು ಚಿರಾಗ್ ಪಾಸ್ವಾನ್ ಅವರ ಆಶೀರ್ವಾದ್ ಯಾತ್ರೆ ಮೇಲೆ ಕಣ್ಣಿಟ್ಟಿವೆ. ಆದರೆ ಬಿಜೆಪಿ ಇದರ ಬಗ್ಗೆ ವಿಶೇಷ ಗಮನ ಹರಿಸುತ್ತಿದೆ. ಈ ಮೂಲಕ ಚಿರಾಗ್‌ ರಾಜಕೀಯ ಶಕ್ತಿಯ ಬಗ್ಗೆ ಒಂದು ಕಲ್ಪನೆ ಸಿಗಲಿದೆ. ಅವರ ಅತ್ತ ಚಿಕ್ಕಪ್ಪ ಪಶುಪತಿ ಪರಾಸ್ ಅವರು 5 ಸಂಸದರೊಂದಿಗೆ ಚಿರಾಗ್‌ನಿಂದ ಬೇರ್ಪಟ್ಟಿದ್ದು, ಎಲ್‌ಜೆಪಿ ಮೇಲೆ ಹಕ್ಕು ಸಾಧಿಸಲು ಮುಂದಾಗಿದ್ದಾರೆಂಬುವುದು ಉಲ್ಲೇಖನೀಯ. ಈ ವಿಷಯಕ್ಕೆ ಸಂಬಂಧಿಸಿದಂತೆ ಚಿರಾಗ್ ಚುನಾವಣಾ ಆಯೋಗದ ಆಶ್ರಯದಲ್ಲಿದ್ದಾರೆ. ಈ ಯಾತ್ರೆ ಬಳಿಕ, ಚಿರಾಗ್ ಅವರೊಂದಿಗೆ ಇರುತ್ತಾರಾ? ಬೇರ್ಪಡುತ್ತಾರಾ ಎಂಬುವುದು ನಿರ್ಧಾರವಾಗಲಿದೆ. ಹೀಗಿರುವಾಗ, ಚುನಾವಣಾ ಆಯೋಗವು ಎಲ್ಜೆಪಿ ಮೇಲೆ- ಚಿರಾಗ್ ಅಥವಾ ಪಶುಪತಿ ಇವರಿಬ್ಬರಲ್ಲಿ ಯಾರಿಗೆ ಹಕ್ಕಿದೆ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬಹುದು.

Today is the birth anniversary of my friend, late Ram Vilas Paswan Ji. I miss his presence greatly. He was one of India’s most experienced Parliamentarians and administrators. His contributions to public service and empowering the downtrodden will always be remembered.

— Narendra Modi (@narendramodi)

ಮೋದಿ ಆಪ್ತನನ್ನು ಭೇಟಿಯಾಗಿದ್ದಾರೆ ಚಿರಾಗ್

ಇದಕ್ಕೂ ಮುನ್ನ, ಚಿರಾಗ್ ಪಾಸ್ವಾನ್ ಅವರು ಕಳೆದ ವಾರ ಏಕಾಏಕಿ ಅಹಮದಾಬಾದ್‌ಗೆ ಭೇಟಿ ನೀಡಿದ್ದರು, ಮೋದಿಯವರ ಆಪ್ತರಾದ ಪರಿಂದು ಭಗತ್ ಅವರನ್ನು ಭೇಟಿಯಾಗಿದ್ದರು. ಭಗತ್ ಅವರನ್ನು ಬಿಜೆಪಿಯಲ್ಲಿ ಚುನಾವಣಾ ಬಿಕ್ಕಟ್ಟು ನಿರ್ವಹಣೆಯಲ್ಲಿ ಪರಿಣಿತರೆಂದು ಪರಿಗಣಿಸಲಾಗಿದೆ.

click me!