ರಾಜಕೀಯದ ಬದ್ಧ ವೈರಿ, ಇತಿಹಾಸದಲ್ಲಿ ಮೊದಲ ಬಾರಿ ಕಾಂಗ್ರೆಸ್‌ ಬಿಜೆಪಿ ಮೈತ್ರಿ!

By Kannadaprabha News  |  First Published Jan 29, 2020, 11:39 AM IST

ಕಾಂಗ್ರೆಸ್‌ ಬಿಜೆಪಿ ಅಪರೂಪದ ಮೈತ್ರಿ| ಆಡಳಿತರೂಢ ಪಕ್ಷ ಸೋಲಿಸಲು ಸೈದ್ಧಾಂತಿಕವಾಗಿ ಭಿನ್ನವಾಗಿರುವ ಎರಡೂ ಪಕ್ಷಗಳ ಮೈತ್ರಿ


ಹೈದರಾಬಾದ್‌[ಜ.29]: ರಾಜಕೀಯದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ನದ್ದು ಹಾವು- ಮುಂಗುಸಿ ಸಂಬಂಧ. ಸೈದ್ಧಾಂತಿಕವಾಗಿ ಎರಡೂ ಪಕ್ಷಗಳದ್ದು ವಿಭಿನ್ನ ಹಾದಿ. ತೆಲಂಗಾಣದ ಮಣಿಕೊಂಡ ಮುನ್ಸಿಪಲ್‌ ಚುನಾವಣೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಂಡಿವೆ.

ಮುನ್ಸಿಪಲ್‌ಗೆ ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ 8, ಬಿಜೆಪಿ 6 ಮತ್ತು ಟಿಆರ್‌ಎಸ್‌ 5 ಸ್ಥಾನ ಗೆದ್ದಿದ್ದವು. 1 ಸ್ಥಾನ ಪಕ್ಷೇತರರ ಪಾಲಾಗಿತ್ತು. ಫಲಿತಾಂಶದ ಬಳಿಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ, ರಾಜ್ಯದಲ್ಲಿನ ಅಡಳಿತಾರೂಢ ಟಿಆರ್‌ಎಸ್‌ಗೆ ಎರಡು ಸ್ಥಾನ ತಪ್ಪಿಸುವ ನಿಟ್ಟಿನಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಮೈತ್ರಿ ಮಾಡಿಕೊಳ್ಳುವ ಮೂಲಕ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನವನ್ನು ಕೈವಶ ಮಾಡಿಕೊಂಡಿವೆ.

Latest Videos

ಇನ್ನು ಮಕ್ಥಲ್‌ ಚುನಾವಣೆಯಲ್ಲೂ ಉಭಯ ಪಕ್ಷಗಳು ಮೈತ್ರಿ ಮಾಡಿಕೊಳ್ಳಲು ಸಜ್ಜಾಗಿದ್ದವು, ಆದರೆ ಇದು ಸಾಧ್ಯವಾಗಲಿಲ್ಲ ಎಂದು ಸೂತ್ರಗಳು ತಿಳಿಸಿವೆ.

'ರಾಜ್ಯದಲ್ಲಿ ಕಾಂಗ್ರೆಸ್ ಮುಗಿಸುವ ತಂತ್ರ'

ತೆಲಂಗಾಣದ ಇತ್ತೀಚೆಗಷ್ಟೇ TRD ನಿಂದ ಬಿಜೆಪಿಗೆ ಸೇರ್ಪಡೆಗೊಂಡಿರುವ ನಾಯಕ ಜಿತೇಂದ್ರ ರೆಡ್ಡಿ ಈ ಮೈತ್ರಿ ಸಂಬಂಧ ಪ್ರತಿಕ್ರಿಸಿದ್ದು 'ಮಕ್ಥಲ್ ನನ್ನ ಸಂಸದೀಯ ಕ್ಷೇತ್ರಕ್ಕೆ ಬರುತ್ತದೆ. ಹೀಹಿರುವಾಗ ಇಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಮೈತ್ರಿ ಮಾಡುವ ಯಾವುದೇ ಮಾತುಕತೆ ನಡೆದಿರಲಿಲ್ಲ. ಬಿಜೆಪಿ ಬಳಿ ಬಹುಮತವಿತ್ತು. ಬೇರೆ ಕ್ಷೇತ್ರಗಳಲ್ಲಿ ಏನೇ ಆಗಿದ್ದರೂ ಅದೊಂದು ಸ್ಥಳೀಯ ಹಾಗೂ ಆಂತರಿಕ ವಿಚರವಾಗಿದೆ. ಇದು ರಾಜ್ಯದಲ್ಲಿ ಕಾಂಗ್ರೆಸ್ ಅಸ್ತಿತ್ವ ಮುಗಿಸಲು ಬಿಜೆಪಿ ಹೂಡಿರುವ ತಂತ್ರ' ಎಂದಿದ್ದಾರೆ. 

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!