ಮೂಕ ಯುವಕನ ಹಸ್ತಾಂತರ ವಿಫಲ: ಭಜರಂಗಿ ಭಾಯಿಜಾನ್‌ ನಿರಾಸೆಯಿಂದ ವಾಪಾಸ್‌!

By Kannadaprabha News  |  First Published Jan 29, 2020, 10:24 AM IST

ಭಜರಂಗಿ ಭಾಯಿಜಾನ್‌ ನಿರಾಸೆಯಿಂದ ವಾಪಾಸ್‌| ಬಾಂಗ್ಲಾದಿಂದ ಬಂದಿದ್ದ ಆರಿಫ್‌, ಅನಾಥ ಬಾಲಕನ ಪತ್ತೆಗೆ ವಿಫಲ| ನೋವಿನೊಂದಿಗೆ ಬಾಲಕನ ಜೊತೆ ತವರಿಗೆ ಮರಳಿದ ವಾತ್ಸಲ್ಯಮಯಿ


ಕೃಷ್ಣಾನಗರ[ಜ.29]: ಸಲ್ಮಾನ್‌ ಖಾನ್‌ ಅಭಿನಯದ ಭಜರಂಗಿ ಭಾಯಿಜಾನ್‌ ಚಿತ್ರದ ರೀತಿಯಲ್ಲೇ, ಬಾಂಗ್ಲಾದೇಶದ ವ್ಯಕ್ತಿಯೊಬ್ಬ ತಾನು 14 ವರ್ಷದ ಹಿಂದೆ ಅಂತಾರಾಷ್ಟ್ರೀಯ ಗಡಿಯಲ್ಲಿ ರಕ್ಷಿಸಿದ್ದ ಮಾತು ಬಾರದ ಯುವಕನೊಬ್ಬನನ್ನು ಆತನ ಕುಟುಂಬಕ್ಕೆ ಹಸ್ತಾಂತರಿಸಲು ಭಾರತಕ್ಕೆ ಬಂದು ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯಲ್ಲಿ ಹುಡುಕಾಡಿದ ನೈಜ ಘಟನೆಯಂದು ಜರುಗಿದೆ.

ಆದರೆ ಬಾಲಿವುಡ್‌ ಚಿತ್ರದಂತೆ ಮೂಕ ಬಾಲಕಿಯನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲು ಬಾಂಗ್ಲಾದೇಶದ ವ್ಯಕ್ತಿಗೆ ಸಾಧ್ಯವಾಗಿಲ್ಲ. ಜೊತೆಗೆ 2 ದಿನಗಳ ವೀಸಾ ಅವಧಿ ಮುಗಿದಿದ್ದರಿಂದ ಆತ ಬಂದ ಕೆಲಸ ಪೂರ್ಣಗೊಳ್ಳದೇ ಹಿಂದಿರುಗಿದ್ದಾನೆ.

Tap to resize

Latest Videos

undefined

ಮುಸ್ಲಿಮರಿಗೆ ತೊಂದರೆ ಆದರೆ ಬಿಜೆಪಿ ಹೋರಾಟ: ರಕ್ಷಣಾ ಸಚಿವ ರಾಜನಾಥ್ ಅಭಯ!

ಬಾಂಗ್ಲಾದೇಶದ ಚುವಾಡಂಗ ಜಿಲ್ಲೆಯ ನಿವಾಸಿ ಆರೀಫ್‌ ಉಲ್‌ ಇಸ್ಲಾಂ ಎಂಬಾತ 14 ವರ್ಷದ ಹಿಂದೆ ಭಾರತ- ಬಾಂಗ್ಲಾ ಗಡಿಯಲ್ಲಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಬಾಲಕನೊಬ್ಬ ಭಾರತದ ಗಡಿಯಲ್ಲಿ ಏಕಾಂಗಿಯಾಗಿ ಅಳುತ್ತಾ ನಿಂತಿದ್ದನ್ನು ಗಮನಿಸಿದ್ದ. ಆಗ ಗಡಿಗೆ ಇನ್ನೂ ಬೇಲಿ ಹಾಕಿರಲಿಲ್ಲ. ಹೀಗಾಗಿ ಆತನನ್ನು ರಕ್ಷಿಸಿ ಮನೆಗೆ ಕರೆದುಕೊಂಡು ಬಂದಿದ್ದ. ಆ ಬಳಿಕ ಆತ ಒಬ್ಬ ಹಿಂದು ಹಾಗೂ ಆತನಿಗೆ ಮಾತನಾಡಲು ಬರುವುದಿಲ್ಲ ಎಂದು ತಿಳಿಸಿದೆ. ಹೀಗಾಗಿ ಆರೀಫ್‌ ಆ ಬಾಲಕನನ್ನು ತಮ್ಮ ಮನೆಯ ಒಬ್ಬ ಸದಸ್ಯನಂತೆ ನೋಡಿಕೊಂಡಿದ್ದರು. ಆದರೆ, ವೀಸಾಕ್ಕೆ ಹಣ ಹೊಂದಿಸಲು ಸಾಧ್ಯವಾಗದೇ ಇದ್ದಿದ್ದರಿಂದ ಪಶ್ಚಿಮ ಬಂಗಾಳಕ್ಕೆ ಬಂದು ಬಾಲಕ ಪೋಷಕರನ್ನು ಹುಡುಕಲು ಸಾಧ್ಯವಾಗಿರಲ್ಲ. ಈ ಪ್ರಯತ್ನದಲ್ಲಿ 14 ವರ್ಷಗಳೇ ಕಳೆದಿವೆ.

ಪಾಕ್, ಬಾಂಗ್ಲಾ ಮುಸ್ಲಿಮರನ್ನು ದೇಶದಿಂದ ಹೊರಗಟ್ಟಿ: ಶಿವಸೇನಾ ಅಭಿಮತ

ಇದೀಗ ಆರೀಫ್‌, ಪಶ್ಚಿಮ ಬಂಗಾಳದ ನಡ್ಡಾ ಜಿಲ್ಲೆಯ ಗಡಿ ಗ್ರಾಮದಲ್ಲಿ ಯುವಕನ ಫೋಟೊ ಹಿಡಿದು ವಿಚಾರಿಸಿದ್ದಾರೆ. ಆದರೆ, ಯಾರಿಗೂ ಆ ಯುವಕನ ಗುರುತು ಪತ್ತೆ ಆಗಿಲ್ಲ. 14 ವರ್ಷದ ಹಿಂದೆ ನಮ್ಮ ಊರಿನಿಂದ ಬಾಲಕನೊಬ್ಬ ನಾಪತ್ತೆ ಆಗಿದ್ದ ಎಂದು ಕೆಲವರು ಹೇಳಿದ್ದಾರೆ. ಆದರೆ ಕುಟುಂಬದವರು ಫೋಟೋವನ್ನು ನೋಡಿ ಯುವಕನ ಗುರುತು ಹಿಡಿಯಲು ವಿಫಲರಾಗಿದ್ದಾರೆ. ಹೀಗಾಗಿ ಆರೀಫ್‌ ಗ್ರಾಮಸ್ಥರಿಗೆ ತಮ್ಮ ಫೋನ್‌ನಂಬರ್‌ ಹಾಗೂ ಫೋಟೋಗಳನ್ನು ಕೊಟ್ಟು ಯುವಕನ ಕುರಿತು ಮಾಹಿತಿ ಲಭ್ಯವಾದರೆ ತಿಳಿಸಿ ಎಂದು ಹೇಳಿ ಬಂದಿದ್ದಾರೆ.

ಜನವರಿ 29ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!