ಪ್ರವಾದಿ ನಿಂದನೆ ಆರೋಪ, ಜಾಮೀನು ಪಡೆದ ಎರಡನೇ ದಿನದಲ್ಲಿ ಮತ್ತೆ ರಾಜಾ ಸಿಂಗ್ ಬಂಧನ!

Published : Aug 25, 2022, 05:09 PM IST
ಪ್ರವಾದಿ ನಿಂದನೆ ಆರೋಪ, ಜಾಮೀನು ಪಡೆದ ಎರಡನೇ ದಿನದಲ್ಲಿ ಮತ್ತೆ ರಾಜಾ ಸಿಂಗ್ ಬಂಧನ!

ಸಾರಾಂಶ

ಪ್ರವಾದಿ ಮೊಹಮ್ಮದ್ ವಿರುದ್ದ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಬಂಧನಕ್ಕೊಳಗಾಗಿದ್ದ ಬಿಜೆಪಿ ನಾಯಕ ಟಿ ರಾಜಾ ಸಿಂಗ್ ಇದೀಗ ಎರಡನೇ ಬಾರಿಗೆ ಅರೆಸ್ಟ್ ಆಗಿದ್ದಾರೆ.

ಹೈದರಾಬಾದ್(ಆ.25): ಪ್ರವಾದಿ ಮೊಹಮ್ಮದ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಅರೆಸ್ಟ್ ಆಗಿದ್ದ ಬಿಜೆಪಿ ನಾಯಕ ರಾಜಾ ಸಿಂಗ್ ಇದೀಗ ಮತ್ತೆ ಬಂಧನಕ್ಕೊಳಗಾಗಿದ್ದಾರೆ. ಪ್ರವಾದಿ ವಿರುದ್ಧ ಹೇಳಿಕೆ ನೀಡಿದ ಅರೆಸ್ಟ್ ಆದ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದಿದ್ದ ಟಿ ರಾಜಾ ಸಿಂಗ್‌ರನ್ನು ಹೈದರಾಬಾದ್ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಎರಡನೇ ಬಾರಿ ರಾಜಾ ಸಿಂಗ್ ಬಂಧವನ್ನು ವಕೀಲ ಕೌನಾ ಸಾಗರ್ ಖಚಿತಪಡಿಸಿದ್ದಾರೆ. ಆದರೆ ಈ ಬಾರಿ ಫೆಬ್ರವರಿ ಹಾಗೂ ಎಪ್ರಿಲ್ ತಿಂಗಳಲ್ಲಿನ ಪ್ರಕರಣ ಸಂಬಂಧ ರಾಜಾ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಆಗಸ್ಟ್ 24 ರಂದು ರಾಜಾ ಸಿಂಗ್‌ಗೆ ನೋಟಿಸ್ ನೀಡಿತ್ತು.  ಎಪ್ರಿಲ್ ತಿಂಗಳಲ್ಲಿ ರಾಜಾ ಸಿಂಗ್ ವಿಡಿಯೋ ಮೂಲಕ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಎಪ್ರಿಲ್ ತಿಂಗಳಲ್ಲಿ ಟಿ ರಾಜಾ ಸಿಂಗ್ ವಿರುದ್ಧ ಎರಡು ಪ್ರಕರಣಗಳು ದಾಖಲಾಗಿತ್ತು. ಎರಡೂ ವಿವಾದಾತ್ಮಕ ಹೇಳಿಕೆಗೆ ಪ್ರಕರಣ ದಾಖಲಾಗಿತ್ತು.

ಎಪ್ರಿಲ್ ತಿಂಗಳಲ್ಲಿ ನಡೆದ ಶೋಭ ಯಾತ್ರೆ ವೇಳೆ ವಿವಾದಾತ್ಮ ಹೇಳಿಕೆ ನೀಡಿದ ಕಾರಣಕ್ಕೆ ಎರಡನೇ ಪ್ರಕರಣ ದಾಖಲಾಗಿತ್ತು. ಈ ವೇಳೆ ಧರ್ಮ ಕುರಿತು ಅವಹೇಳನ ಹೇಳಿಕೆ ನೀಡಿದ್ದರು. ಈ ಎರಡು ಪ್ರಕರಣ ಕುರಿತು ಇದೀಗ ಟಿ ರಾಜಾ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.  ಪ್ರವಾದಿ ಮೊಹಮ್ಮದ್ ಹೇಳಿಕೆಗೆ ಬಂಧನಕ್ಕೊಳಗಾಗಿ ಕೆಲವೇ ಗಂಟೆಗಳಲ್ಲಿ ಜಾಮೀನು ಪಡೆದಿದ್ದರು. 

ಪ್ರವಾದಿ ಪೈಗಂಬರ್‌ ಕುರಿತಾಗಿ ಹೇಳಿಕೆ, ಬಿಜೆಪಿ ಶಾಸಕ ಟಿ.ರಾಜಾ ಸಿಂಗ್‌ ಬಂಧನ, ಪಕ್ಷದಿಂದ ಅಮಾನತು!

ಪ್ರವಾದಿ ಮೊಹಮ್ಮದರ ಕುರಿತು ಬಿಜೆಪಿ ನಾಯಕಿ ನೂಪುರ್‌ ಶರ್ಮಾ ನೀಡಿದ ಆಕ್ಷೇಪಾರ್ಹ ಹೇಳಿಕೆಯ ವಿವಾದದ ಬೆಂಕಿ ಇನ್ನೂ ಆರಿಲ್ಲದಿರುವಾಗ ಬಿಜೆಪಿ ಶಾಸಕ ಟಿ ರಾಜಾ ಸಿಂಗ್ ಪ್ರವಾದಿ ಮೊಹಮ್ಮದರನ್ನು ಟೀಕಿಸಿ ಇನ್ನೊಂದು ಹೇಳಿಕೆ ನೀಡುವ ಮೂಲಕ ಹೊಸ ವಿವಾದ ಹುಟ್ಟುಹಾಕಿದ್ದಾರೆ. ತೆಲಂಗಾಣದ ಬಿಜೆಪಿ ಶಾಸಕ ರಾಜಾ ಸಿಂಗ್‌ ಎಂಬುವರು ಪ್ರವಾದಿ, ಇಸ್ಲಾಂ ಧರ್ಮ ಹಾಗೂ ಇಸ್ಲಾಂನ ಉಡುಗೆ ತೊಡುಗೆಗಳನ್ನು ಅವಹೇಳನ ಮಾಡಿ ವಿಡಿಯೋ ಬಿಡುಗಡೆ ಮಾಡಿದ್ದು, ಅದು ತೀವ್ರ ವಿವಾದಕ್ಕೆ ಕಾರಣವಾಗಿದೆ. ಅದರ ಬೆನ್ನಲ್ಲೇ ಅವರನ್ನು ತೆಲಂಗಾಣ ಪೊಲೀಸರು ಮಂಗಳವಾರ ಬಂಧಿಸಿ, ಸಂಜೆ ವೇಳೆ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ. ವಿವಾದಿತ ಹೇಳಿಕೆ ನೀಡಿದ ಶಾಸಕನನ್ನು ಬಿಜೆಪಿಯಿಂದ ಅಮಾನತು ಮಾಡಲಾಗಿದ್ದು, ‘ನಿಮ್ಮನ್ನು ಏಕೆ ಉಚ್ಚಾಟಿಸಬಾರದು?’ ಎಂದು ಪ್ರಶ್ನಿಸಿ ಪಕ್ಷದಿಂದ ಶೋಕಾಸ್‌ ನೋಟಿಸ್‌ ನೀಡಿತ್ತು. ಇಷ್ಟೇ ಅಲ್ಲ ಬಿಜೆಪಿ ಪಕ್ಷದಿಂದ ಟಿ ರಾಜಾ ಸಿಂಗ್ ಅವರನ್ನು ಅಮಾನತು ಮಾಡಲಾಗಿದೆ. 

ರಾಜಾ ಸಿಂಗ್‌ನನ್ನು ಕಂಡಲ್ಲಿ ಹೊಡೆಯಿರಿ: ತೆಲಂಗಾಣ ಕಾಂಗ್ರೆಸ್‌ ನಾಯಕ ಕರೆ
ಪ್ರವಾದಿ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಬಿಜೆಪಿಯಿಂದ ವಜಾಗೊಳಿಸಲಾಗಿರುವ ಶಾಸಕ ಟಿ. ರಾಜಾ ಸಿಂಗ್‌ನನ್ನು ಕಂಡಲ್ಲಿ ಹೊಡೆಯಿರಿ ಎಂದು ಕಾಂಗ್ರೆಸ್‌ ನಾಯಕ ಫಿರೋಜ್‌ ಖಾನ್‌ ಮುಸ್ಲಿಮರಿಗೆ ಕರೆಕೊಟ್ಟಿದ್ದಾರೆ. ಹೈದರಾಬಾದ್‌ನಲ್ಲಿ ರಾಜಾ ಸಿಂಗ್‌ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವೇಳೆ ಫಿರೋಜ್‌, ‘ರಾಜಾಸಿಂಗ್‌ ರಾಜಕೀಯ ಧ್ರುವೀಕರಣ ಮಾಡಲು ಬಯಸುತ್ತಾರೆ. ಅವರನ್ನು ಜೈಲಿಗಟ್ಟಿ. ಅವರು ತಮ್ಮ ಹೇಳಿಕೆಗಾಗಿ ಕ್ಷಮಾಪಣೆ ಕೋರಬೇಕು. ಪ್ರವಾದಿ ನಮ್ಮ ಹೀರೊ. ಸಿಂಗ್‌ ಕ್ಷಮೆ ಕೇಳದಿದ್ದರೆ ಅವನನ್ನು ಕಂಡಲೆಲ್ಲ ಹೊಡೆಯಿರಿ ಎಂದು ಹೈದರಾಬಾದಿನ ಪ್ರತಿಯೊಬ್ಬ ಮುಸ್ಲಿಮನಿಗೂ ಕರೆ ನೀಡುತ್ತೇನೆ. ನಾವು ಕಾನೂನನ್ನು ಒಂದಲ್ಲ, ಹಲವಾರು ಬಾರಿ ಕೈಗೆತ್ತಿಗೊಳ್ಳಬಹುದು’ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

 

ಫ್ಯಾಕ್ಟ್ ಚೆಕ್: ಹೈದರಾಬಾದ್‌ ಬಿಜೆಪಿ ಶಾಸಕನ ತಂಗಿ ಇಸ್ಲಾಂಗೆ ಮತಾಂತರ?
 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೋದಿ ಜತೆ ಪ್ರಿಯಾಂಕಾ ಗಾಂಧಿ ಆತ್ಮೀಯ ಮಾತು!
20 ತಿಂಗಳಲ್ಲಿ ಶೇ.55,000ರಷ್ಟು ಏರಿಕೆ ಷೇರು! ಅಚ್ಚರಿ!