ಚುನಾವಣೆ ಹೊತ್ತಲ್ಲೇ ತೆಲಂಗಾಣದಲ್ಲಿ 750 ಕೋಟಿ ರು. ತುಂಬಿದ್ದ ಟ್ರಕ್‌ ಪತ್ತೆ

By Kannadaprabha News  |  First Published Oct 20, 2023, 7:06 AM IST

ವಿಧಾನಸಭೆ ಚುನಾವಣೆ ನಡೆಯುತ್ತಿರುವ ತೆಲಂಗಾಣದಲ್ಲಿ ಯಥೇಚ್ಛವಾಗಿ ಮತದಾರರಿಗೆ ಹಣ ಹಂಚಿಕೆ ಯತ್ನಗಳು ನಡೆಯುತ್ತಿದ್ದು, ಇದರ ನಡುವೆ 750 ಕೋಟಿ ರು. ನಗದು ತುಂಬಿದ್ದ ಟ್ರಕ್‌ ಒಂದು ಪತ್ತೆಯಾಗಿ ಸಂಚಲನ ಮೂಡಿಸಿದ ಘಟನೆ ಗುರುವಾರ ನಡೆದಿದೆ.


ಹೈದರಾಬಾದ್: ವಿಧಾನಸಭೆ ಚುನಾವಣೆ ನಡೆಯುತ್ತಿರುವ ತೆಲಂಗಾಣದಲ್ಲಿ ಯಥೇಚ್ಛವಾಗಿ ಮತದಾರರಿಗೆ ಹಣ ಹಂಚಿಕೆ ಯತ್ನಗಳು ನಡೆಯುತ್ತಿದ್ದು, ಇದರ ನಡುವೆ 750 ಕೋಟಿ ರು. ನಗದು ತುಂಬಿದ್ದ ಟ್ರಕ್‌ ಒಂದು ಪತ್ತೆಯಾಗಿ ಸಂಚಲನ ಮೂಡಿಸಿದ ಘಟನೆ ಗುರುವಾರ ನಡೆದಿದೆ. ಆದರೆ ಸಾಕಷ್ಟು ಪರಿಶೀಲನೆ ನಂತರ ಇದು ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ಹಣವಲ್ಲ. ಕೇಂದ್ರ ಸರ್ಕಾರದ ಅಧೀನದ ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇರಿದ ಹಣ ಎಂದು ಗೊತ್ತಾಗಿ ಸಂದೇಹಗಳಿಗೆ ತೆರೆ ಬಿದ್ದಿದೆ.

ತೆಲಂಗಾಣದ (Telangana) kಗದ್ವಾಲ್‌ನ ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಕ್ಕನ್ನು ಚುನಾವಣಾ ಸಿಬ್ಬಂದಿ ತಡೆದಿದ್ದರು. ಆಗ ಅದರಲ್ಲಿ 750 ಕೋಟಿ ರು.ಪತ್ತೆಯಾಯಿತು. ಕೂಡಲೇ ಚುನಾವಣಾ ಸಿಬ್ಬಂದಿಯು ಪೊಲೀಸರು, ಬ್ಯಾಂಕ್‌ ಸಿಬ್ಬಂದಿ ಹಾಗೂ ಇತರ ಸಂಬಂಧಿಸಿದ ಸಿಬ್ಬಂದಿಯನ್ನು ಕರೆದರು. ಈ ವಿಷಯ ರಾಜ್ಯಾದ್ಯಂತ ಸಂಚಲನ ಮೂಡಿಸಿ ನಾನಾ ಊಹಾಪೋಹಕ್ಕೆ ನಾಂದಿ ಹಾಡಿತು.

Tap to resize

Latest Videos

ಬಳಿಕ ವಿಚಾರಣೆ ನಡೆಸಿದಾಗ, ಇದು ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ ಸೇರಿದ ಹಣ. ಕೇರಳದಿಂದ ಹೈದರಾಬಾದ್‌ಗೆ ಸಾಗಿಸಲಾಗುತ್ತಿತ್ತು ಎಂದು ಎಂದು ದೃಢಪಟ್ಟಿತು. ನಂತರ ಪೊಲೀಸರು ಟ್ರಕ್‌ಗೆ ಪ್ರಯಾಣವನ್ನು ಮುಂದುವರಿಸಲು ಅವಕಾಶ ಮಾಡಿಕೊಟ್ಟರು.

ಏತನ್ಮಧ್ಯೆ, ರಾಜ್ಯಾದ್ಯಂತ ಚುನಾವಣೆ ಘೋಷಿಸಿದ ಬಳಿಕ ಈವರೆಗೆ ನಗದು ಸೇರಿ ಒಟ್ಟು 165 ಕೋಟಿ ರು. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಇದರಲ್ಲಿ ನಗದು, ಮದ್ಯ, ಡ್ರಗ್ಸ್, ಚಿನ್ನ ಮತ್ತು ಅಮೂಲ್ಯ ರತ್ನಗಳು ಸೇರಿವೆ. ವಶಪಡಿಸಿಕೊಂಡ ಚಿನ್ನ, ವಜ್ರ ಮತ್ತು ಅಮೂಲ್ಯ ಲೋಹಗಳ ಮೌಲ್ಯ 62 ಕೋಟಿ ರು.ಗಳಾಗಿದ್ದು, ನಗದು ಮೊತ್ತ 77 ಕೋಟು ರು. ಆಗಿದೆ.

ಡಾಬರ್‌ ಉತ್ಪನ್ನದಲ್ಲಿ ಕ್ಯಾನ್ಸರ್ ಕಾರಕ ಅಂಶ: ಅಮೆರಿಕಾ ಕೆನಡಾದಲ್ಲಿ ಕೇಸ್

click me!