RapidX ಪ್ರಾದೇಶಿಕ ರೈಲು ಸೇವೆ ಅಕ್ಟೋಬರ್ 20 ರಂದು ಉದ್ಘಾಟನೆಗೊಳ್ಳುತ್ತಿದೆ. ಭಾರತದ ಮೊದಲ ಪ್ರಾದೇಶಿಕ ರೈಲು ಸೇವೆ ಇದಾಗಿದೆ. ಈ ರೈಲು ಸೇವೆಗೆ ನಮೋ ಭಾರತ್ ಎಂದು ನಾಮಕರಣ ಮಾಡಲಾಗಿದೆ.
ನವದೆಹಲಿ(ಅ.19) ವಂದೇ ಭಾರತ್, ಅಮೃತ ಭಾರತ್ ರೈಲು ನಿಲ್ದಾಣದ ಬಳಿಕ ಇದೀಗ RRTS ರೈಲಿಗೆ ನಮೋ ಭಾರತ್ ಎಂದು ನಾಮಕರಣ ಮಾಡಲಾಗಿದೆ. ಭಾರತದ ಮೊದಲ ಸೆಮಿ ಹೈಸ್ಪೀಡ್ ಪ್ರಾದೇಶಿಕ ರೈಲು ಸೇವೆ ಇದಾಗಿದೆ. ಅಕ್ಟೋಬರ್ 20 ರಂದು ಪ್ರಧಾನಿ ನರೇಂದ್ರ ಮೋದಿ ಈ ರೈಲು ಸೇವೆಯನ್ನು ಉದ್ಘಾಟಿಸಲಿದ್ದಾರೆ.
ದೆಹಲಿ, ಮೇರಠ್ ಮತ್ತು ಗಾಜಿಯಾಬಾದ್ ನಡುವೆ ನಿರ್ಮಾಣ ಮಾಡಲಾಗುತ್ತಿರುವ ಆರ್‌ಆರ್‌ಟಿಎಸ್ ರೈಲು ಸೇವೆಯ ಮೊದಲ 17 ಕಿ.ಮೀ. ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಅ.20ರಂದು ಚಾಲನೆ ನೀಡಲಿದ್ದಾರೆ. ಇದು ಪ್ರಮುಖ ನಗರಗಳನ್ನು ಸೇರಿಸುವ ರೈಲು ಯೋಜನೆಯಾಗಿದ್ದು, ಇಲ್ಲಿ ರೈಲುಗಳು ಗಂಟೆಗೆ 160 ಕಿ.ಮೀ. ವೇಗದಲ್ಲಿ ಚಲಿಸುವ ಮೂಲಕ ತ್ವರಿತವಾಗಿ ಪ್ರಯಾಣಿಕರನ್ನು ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಕೊಂಡೊಯ್ಯಲಿವೆ. ದೆಹಲಿ ಮತ್ತು ಗಾಜಿಯಾಬಾದ್ ನಡುವಿನ 17 ಕಿ.ಮೀ. ಮಾರ್ಗವನ್ನು ಉದ್ಘಾಟಿಸಲಾಗುತ್ತಿದ್ದು, ಇದರಲ್ಲಿ ಶಹೀಬಾಬಾದ್, ಗಾಜಿಯಾಬಾದ್, ಗುಲ್ದಾರ್, ದುಹೈ ಮತ್ತು ದುಹೈ ಡಿಪೋದಲ್ಲಿ ನಿಲ್ದಾಣಗಳನ್ನು ನಿರ್ಮಾಣ ಮಾಡಲಾಗಿದೆ.
ಹುಬ್ಬಳ್ಳಿ ಮಂಗಳೂರು ನಡುವೆ ದಸರಾ ಸ್ಪೆಷಲ್ ಟ್ರೇನ್, Via ಬೆಂಗಳೂರು!
ಈ ರೈಲು ಮೆಟ್ರೋ ವ್ಯವಸ್ಥೆಗೆ ಪರ್ಯಾಯವಾಗಲಿದ್ದು, ಅದಕ್ಕಿಂತಲೂ ಹೆಚ್ಚಿನ ಗ್ರಾಹಕ ಸ್ನೇಹಿ ಸೌಕರ್ಯಗಳನ್ನು ಒಳಗೊಂಡಿರಲಿದೆ. ರೈಲಿನಲ್ಲಿ ದಿವ್ಯಾಂಗರಿಗೆ, ರೋಗಿಗಳಿಗೆ ಅನುಕೂಲವಾಗುವಂತೆ ಸ್ಟ್ರೆಚರ್ ಇಡಲು ಸ್ಥಳಾವಕಾಶ, ವೈಫೈ, ಲ್ಯಾಪ್‌ಟಾಪ್ ಚಾರ್ಜಿಂಗ್ ವ್ಯವಸ್ಥೆ, ಅಗಲವಾದ ಆಸನಗಳು, ಕಾಲುಗಳನ್ನು ನೀಡಿಕೊಳ್ಳಲು ವಿಶಾಲ ಸ್ಥಳಾವಕಾಶ, ಲಗೇಜ್ ಕ್ಯಾರಿಯರ್‌ಗಳು ಹಾಗೂ ಅಂತಾರಾಷ್ಟ್ರೀಯ ಗುಣಮಟ್ಟದ ಭದ್ರತಾ ಸೌಕರ್ಯಗಳನ್ನು ಒಳಗೊಂಡಿರಲಿದೆ.
ಮೊದಲ ಹಂತದ ಅಂದರೆ ದೆಹಲಿ ಮೀರತ್ ನಡುವಿನ 17 ಕಿಲೋಮೀಟರ್ ದೂರದ ರೈಲು ಮಾರ್ಗದ ಸೇವೆಗೆಳು ಅಕ್ಟೋಬರ್ 21 ರಿಂದ ಸಾರ್ವಜನಿಕರಿಗೆ ಮುಕ್ತವಾಗಲಿದೆ. ಅಂದಾಜು 82 ಕಿ.ಮೀ ಉದ್ದದ ಮಾರ್ಗವನ್ನು 2025ರ ಜೂನ್ ವೇಳೆಗೆ ಸಾರ್ವಜನಿಕ ಸಂಚಾರಕ್ಕೆ ಸಂಪೂರ್ಣವಾಗಿ ಮುಕ್ತ ಮಾಡುವ ನಿರೀಕ್ಷೆಯಿದೆ.
ದಸರಾಕ್ಕೆ ಬೆಂಗಳೂರು-ಬೀದರ್‌ಗೆ 3 ವಿಶೇಷ ರೈಲು ಸೇವೆ: ಕೇಂದ್ರ ಸಚಿವ ಭಗವಂತ ಖೂಬಾ
ದೆಹಲಿ ಘಾಜಿಯಾಬಾದ್ ಹಾಗೂ ಮೀರತ್ ನಡುವಿನ ಪ್ರಾದೇಶಿಕ ಸೆಮಿ ಹೈಸ್ಪೀಡ್ ರೈಲು ಸೇವೆಯನ್ನು ಬರೋಬ್ಬರಿ 30,000 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ. ಪ್ರಾದೇಶಿದ ಸೆಮಿ ಹೈಸ್ಪೀಡ್ ರೈಲು ಸೇವೆಯಿಂದ ದೆಹಲಿ ಹಾಗೂ ಮೀರತ್ ನಡುವಿನ ಪ್ರಯಾಣ ಸಮಯ 1 ಗಂಟೆಗೆ ಇಳಿಕೆಯಾಗಲಿದೆ.