Tehseen Poonawalla ಭಾರತದ ಅಗ್ರ ಉದ್ಯಮಿಯ ಪತ್ನಿಯ ಜೊತೆ ಸೆಕ್ಸ್ ಮಾಡಿದ್ದೆ!

Suvarna News   | Asianet News
Published : Mar 13, 2022, 06:50 PM ISTUpdated : Mar 13, 2022, 07:01 PM IST
Tehseen Poonawalla ಭಾರತದ ಅಗ್ರ ಉದ್ಯಮಿಯ ಪತ್ನಿಯ ಜೊತೆ ಸೆಕ್ಸ್ ಮಾಡಿದ್ದೆ!

ಸಾರಾಂಶ

ಪ್ರಿಯಾಂಕಾ ಗಾಂಧಿ ಪತಿ ರಾಬರ್ಟ್ ವಾದ್ರಾ ಸಂಬಂಧಿಯ ಬಿಗ್ ಸೀಕ್ರೆಟ್ ಲಾಕ್ ಅಪ್ ಟಿವಿ ರಿಯಾಲಿಟಿ ಶೋ ನಲ್ಲಿ ಬಹಿರಂಗ ಮಾಡಿದ ತಹಸೀನ್ ಪೂನವಾಲಾ ನಾವು ಸೆಕ್ಸ್ ಮಾಡಿದ್ದನ್ನು ಉದ್ಯಮಿ ವೀಕ್ಷಣೆ ಮಾಡಿದ್ದರು ಎಂದ ಪೊನವಾಲಾ

ನವದೆಹಲಿ (ಮಾ.13): ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿಯ (Priyanka Gandhi ) ಪತಿ ರಾಬರ್ಟ್ ವಾಧ್ರಾ (Robert Vadra) ಅವರ ಸೋದರಳಿಯ ತಹಸೀನ್ ಪೊನವಾಲಾ (Tehseen Poonawalla ), ಟಿವಿ ರಿಯಾಲಿಟಿ ಶೋ ಲಾಕ್ ಅಪ್ ನಲ್ಲಿ (Lock Upp) ವಿವಾದಾತ್ಮಕ ಸೀಕ್ರೆಟ್ ಒಂದನ್ನು ಬಹಿರಂಗ ಮಾಡಿದ್ದಾರೆ. ಇದು ಎಷ್ಟು ಸತ್ಯವೋ, ಸುಳ್ಳೋ ಎನ್ನುವುದು ಗೊತ್ತಿಲ್ಲ. ಆದರೆ, ಬಾಲಿವುಡ್ ನಟಿ ಕಂಗನಾ ರಾಣಾವತ್ (host Kangana Ranaut) ನಿರೂಪಕಿಯಾಗಿರುವ ಲಾಕ್ ಅಪ್ ರಿಯಾಲಿಟಿ ಶೋನಿಂದ ಹೊರಬರುವ ವೇಳೆ, ತಮ್ಮ ಸಹವರ್ತಿಯನ್ನು ರಕ್ಷಣೆ ಮಾಡಲು ಈವರೆಗೂ ಯಾರಿಗೂ ತಿಳಿಯದ ಒಂದು ರಹಸ್ಯವನ್ನು ಅವರು ಜನರಿಗೆ ಹೇಳಬೇಕಿತ್ತು.

ಈ ಹಂತದಲ್ಲಿ ಅವರು, ತಾವು ಭಾರತದ ಪ್ರಸಿದ್ಧ ಕೈಗಾರಿಕೋದ್ಯಮಿಯೊಬ್ಬರ ಪತ್ನಿಯೊಂದಿಗೆ ಸೆಕ್ಸ್ ಮಾಡಿದ್ದೆ ಎಂದಿದ್ದಾರೆ. ಪತ್ನಿಯೊಂದಿಗೆ ಇನ್ನೊಬ್ಬ ವ್ಯಕ್ತಿ ಸೆಕ್ಸ್ ಮಾಡುವುದನ್ನು ನೋಡುವುದು ಅವರ ಲೈಂಗಿಕ ಕಾಮನೆಗಳಲ್ಲಿ ಒಂದಾಗಿತ್ತು. ಅದರಂತೆ ಅವರು ನಮ್ಮಿಬ್ಬರ ಸೆಕ್ಸ್ ಅನ್ನು ವೀಕ್ಷೆಣೆಯೂ ಮಾಡಿದ್ದರು ಎಂದು ಹೇಳಿದ್ದಾರೆ.

ಮಾರ್ಚ್ 12 ರಂದು ಪ್ರಸಾರವಾದ ಎಪಿಸೋಡ್ ನಲ್ಲಿ ಪೊನವಾಲಾ "ಲಾಕ್ ಅಪ್" ಶೋನಿಂದ ಹೊರಬಿದ್ದಿದ್ದಾರೆ. ಕಾರ್ಯಕ್ರಮದ ನಿಯಮದ ಪ್ರಕಾರ,  ವೈಯಕ್ತಿಕ ರಹಸ್ಯವನ್ನು ಬಹಿರಂಗಪಡಿಸುವ ಮೂಲಕ ಸ್ಪರ್ಧಿಗಳಲ್ಲಿ ಒಬ್ಬರನ್ನು ಎಲಿಮಿನೇಟ್ ಆಗದಂತೆ ರಕ್ಷಿಸುವ ಅವಕಾಶವನ್ನು ತಹಸೀನ್ ಪೂನವಾಲಾ ಅವರಿಗೆ ನೀಡಲಾಯಿತು. ಆಗ ರಾಬರ್ಟ್ ವಾದ್ರಾ ಅವರ ಸೋದರಳಿಯ ತನ್ನ ಟ್ರಾನ್ಸ್ ಫ್ರೆಂಡ್ ಸೈಶಾ ಶಿಂಧೆ (Saisha Shinde ) (ಹಿಂದೆ ಸ್ವಪ್ನಿಲ್ ಎಂದು ಕರೆಯಲಾಗುತ್ತಿತ್ತು) ಅನ್ನು ಬಚಾವ್ ಮಾಡಲು ನಿರ್ಧರಿಸಿದರು.

"ಭಾರತದ ಉನ್ನತ ಕೈಗಾರಿಕೋದ್ಯಮಿಯೊಬ್ಬರು ತಮ್ಮ ಪತ್ನಿಯೊಂದಿಗೆ ಮಲಗಲು ನನಗೆ ಪ್ರಸ್ತಾಪವನ್ನು ನೀಡಿದರು. ಅದಕ್ಕಾಗಿ ಅವರು ವೀಕೆಂಟ್ ನಲ್ಲಿ ನೈಟ್ ಕ್ಲಬ್ ವೊಂದನ್ನು ಸಂಪೂರ್ಣವಾಗಿ ಬುಕ್ ಮಾಡಿದ್ದರು. ನಾನು ಅವರ ಪತ್ನಿಯೊಂದಿಗೆ ಸೆಕ್ಸ್ ಮಾಡುವುದನ್ನು ವೀಕ್ಷಿಸಬೇಕು ಅನ್ನೋದೊಂದೆ ಅವರ ಷರತ್ತಾಗಿತ್ತು' ಎಂದು ತಹಸೀನ್ ಪೊನವಾಲಾ ಹೇಳಿದ್ದಾರೆ.
ಶೋ ಹೋಸ್ಟ್ ಕಂಗನಾ ರಣಾವತ್ ಅವರ ಸೆಕ್ಸ್ ನ ಬಗ್ಗೆ ಕೇಳಿದಾಗ, "ನಾನು ಅದನ್ನು ಸಂಪೂರ್ಣವಾಗಿ ಆನಂದಿಸಿದೆ. ಕೈಗಾರಿಕೋದ್ಯಮಿ ದೂರದಿಂದ ಇದನ್ನು ನೋಡುತ್ತಿದ್ದರು. ಅವರ ಕೆಲಸ ನೋಡುವುದು ಮಾತ್ರವೇ ಆಗಿತ್ತು. ಯಾವುದೇ ಕಾರಣಕ್ಕೂ ನನ್ನನ್ನು ಮುಟ್ಟಬಾರದು ಹಾಗೂ ಮಧ್ಯಪ್ರವೇಶ ಮಾಡಬಾರದು ಎನ್ನುವುದು ನನ್ನ ಷರತ್ತಾಗಿತ್ತು. ಇದು ಮೂವರು ವ್ಯಕ್ತಿಗಳ ಸೆಕ್ಸ್ ಆಗಿರಲಿಲ್ಲ. ಹಾಗಾಗಿ ಅವರು ದೂರದಿಂದ ಮಾತ್ರ ಇದನ್ನು ನೋಡುತ್ತಿದ್ದರು' ಎಂದು ಹೇಳಿದ್ದಾರೆ.

Yogi visit Delhi ವೆಂಕಯ್ಯ ನಾಯ್ಡು, ಬಿಎಲ್ ಸಂತೋಷ್ ಸೇರಿ ಪ್ರಮುಖರ ಭೇಟಿಯಾದ ಯೋಗಿ, ಸಂಪುಟ ರಚನೆ ಚರ್ಚೆ!
"ಲೈಂಗಿಕತೆಯ ಕುರಿತಾಗಿ ಅವರಲ್ಲಿ ಕೆಲವೊಂದು ಕಾಮನೆಗಳು, ಕಲ್ಪನೆಗಳು ಇದ್ದವು. ಇದನ್ನು ನಾನು ಆತನ ಪತ್ನಿಯೊಂದಿಗೆ ಮಾಡಿದೆ. ಇಲ್ಲಿ ಹೇಳಲು ನನಗೆ ಯಾವುದೇ ಮುಜುಗರವಿಲ್ಲ. ಯಾಕೆಂದರೆ ಇದು ತಪ್ಪಲ್ಲ ಎಂದು ನನ್ನ ಭಾವನೆ. ಆತನ ಪತ್ನಿಯನ್ನು ನನ್ನ ಆಸ್ತಿ ಎಂದು ಭಾವಿಸಿಕೊಂಡು ಸೆಕ್ಸ್ ಮಾಡುವಂತೆ ಹೇಳಿದ್ದ ಇದನ್ನು ನೋಡಿ ಎಂಜಾಯ್ ಮಾಡುವುದಾಗಿ ತಿಳಿಸಿದ್ದರು. ಹಾಗಾಗಿ ನಾನು ಹೆಚ್ಚಾಗಿ ತಲೆಕೆಡಿಸಿಕೊಳ್ಳಲಿಲ್ಲ' ಎಂದು ತಾವು ಮಾಡಿದ ಕೆಲಸವನ್ನು ಅವರು ಸಮರ್ಥನೆ ಮಾಡಿಕೊಂಡರು.

Himveers 12,500 ಫೀಟ್ ಎತ್ತರದಲ್ಲಿ ಕಬಡ್ಡಿ ಆಡಿದ ಐಟಿಬಿಪಿ ಯೋಧರು!
ಕೈಗಾರಿಕೋದ್ಯಮಿಯ ಪತ್ನಿಯೊಂದಿಗಿನ ಸೆಕ್ಸ್,  ಆಭರಣ ಕ್ಯುರೇಟರ್ ಮೋನಿಕಾ ವಡೇರಾ (Monicka Vadera) ಅವರನ್ನು ಮದುವೆಯಾಗುವ ಮೊದಲು ನಡೆದಿತ್ತು ಎಂದು ಅವರು ಹೇಳಿದ್ದಾರೆ. ಮೋನಿಕಾ ವಡೇರಾ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ಅಳಿಯ ರಾಬರ್ಟ್ ವಾದ್ರಾ ಅವರ ಸೋದರಸಂಬಂಧಿ. ಮೋನಿಕಾ ವಡೇರಾ ಅವರೊಂದಿಗೆ ಡೇಟಿಂಗ್ ನಲ್ಲಿದ್ದಾಗ ಈ ವಿಷಯವನ್ನು ನಾನು ಅವರಿಗೆ ತಿಳಿಸಿದ್ದೆ ಎಂದು ಕಾಂಗ್ರೆಸ್ ಪಕ್ಷದ ನಿಷ್ಠನಾಗಿರುವ ಪೊನವಾಲಾ ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ