
ಹೈದರಾಬಾದ್ (ಸೆ.18) ಟೆಕ್ಕಿಗಳ ಕೈಯಲ್ಲಿ ಲ್ಯಾಪ್‌ಟಾಪ್ ಹಾಗೂ ಫೋನ್ ಇದ್ದೇ ಇರುತ್ತೆ. ಮನೆ, ಕಚೇರಿ, ಪ್ರಯಾಣದ ನಡುವೆಯೂ ಟೆಕ್ಕಿಗಳು ಕೆಲಸ ಮಾಡುತ್ತಾರೆ. ಟೆಕ್ಕಿಗಳು ಕಚೇರಿಗೆ ಹಾಜರಾಗುವುದು, ಕಚೇರಿಯಿಂದ ತೆರಳುವಾಗ ಲ್ಯಾಪ್‌ಟಾಪ್ ಇದ್ದೇ ಇರುತ್ತೆ. ಆದರೆ ಇಲ್ಲೊಬ್ಬ ಟೆಕ್ಕಿ, ತೋಳಿನಲ್ಲಿ ಲ್ಯಾಪ್‌ಟಾಪ್ ಹಾಕುವ ಬದಲು ದೈತ್ಯ ಹೆಬ್ಬಾವನ್ನು ಹಾಕಿಕೊಂಡು ತೆರಳಿದದಾನೆ. ಅದು ಕೂಡ ಸ್ಕೂಟರ್‌ನಲ್ಲಿ ಸಾಗಿದ್ದಾನೆ. ಲ್ಯಾಪ್‌ಟಾಪ್ ರೀತಿ ಈತ ಹೆಬ್ಬಾವನ್ನು ಕೈಯಲ್ಲಿ ಹಿಡಿದು ಹೋಗುತ್ತಿರುವುದು ನೋಡಿದ ಜನ, ಇದು ಪೈಥಾನ್ ಪ್ರೋಗ್ರಾಂ ಎಂದು ನೆಟ್ಟಿಗರು ಕಮೆಂಟ್ ಮಾಡಿದ್ದಾರೆ.
ಹೈದರಾಬಾದ್‌ನ ದುರ್ಗಂ ಚೆರುವು ಪ್ರದೇಶದಲ್ಲಿರುವ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಟೆಕ್ಕಿ ಅಚಾನಕ್ಕಾಗಿ ಕೈಯಲ್ಲಿ ಹೆಬ್ಬಾವು ಹಿಡಿದು ತೆರಳಿದ ಘಟನೆ ದೃಶ್ಯಗಳು ಭಾರಿ ಸದ್ದು ಮಾಡುತ್ತಿದೆ. ದುರ್ಗಂ ಚೆರುವು ಐಟಿ ಹಬ್ ಬಳಿ ದೊಡ್ಡ ಹೆಬ್ಬಾವು ಕಾಣಿಸಿಕೊಂಡಿದೆ. ಟೆಕ್ಕಿಗಳು, ಸಿಬ್ಬಂದಿಗಳು ತಮ್ಮ ಕೆಲಸದಲ್ಲಿ ತೊಡಗಿರುವಾಗ ಹೊರ ಭಾಗದಲ್ಲಿ ಹೆಬ್ಬಾವು ಕಾಣಿಸಿಕೊಂಡಿದೆ. ಗಾತ್ರದಲ್ಲಿ ದೊಡ್ಡದಿದ್ದ ಕಾರಣ ಜನರು ಭಯಭೀತರಾಗಿದ್ದಾರೆ. ನಿಧನವಾಗಿ ಸಂಚರಿಸುತ್ತಿದ್ದ ಹೆಬ್ಬಾವುನ್ನು ನೋಡಲು ಜನ ಸೇರಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತಂ ಹಲವರು ಕಚೇರಿಯಿಂದ ಹೊರಬಂದಿದ್ದಾರೆ.
ಟೆಕ್ ಹಬ್‌ನಲ್ಲಿ ಹಾವಿನ ಸುದ್ದಿ ಹರಿದಾಡಿತ್ತು. ಹೀಗಾಗಿ ಹಲವು ಟೆಕ್ಕಿಗಳು ಹಾವು ನೋಡಲು ಹೊರಗೆ ಆಗಮಿಸಿದ್ದಾರೆ. ಈ ಗುಂಪಿನಲ್ಲಿ ಸ್ನೇಕ್ ಟೆಕ್ಕಿ ಕೂಡ ಇದ್ದ. ಎಲ್ಲರು ದೂರದಿಂದ ಹಾವು ನೋಡುತ್ತಿದ್ದರು. ಮತ್ತೆ ಕೆಲವರು ಫೋನ್ ಮೂಲಕ ವಿಡಿಯೋ ಸೆರೆ ಹಿಡಿಯುತ್ತಿದ್ದರು. ಎಲ್ಲರು ನೋಡುತ್ತಿದ್ದಂತೆ ಈ ಟೆಕ್ಕಿ ನೇರವಾಗಿ ಹೆಬ್ಬಾವಿನ ಬಳಿ ತೆರಳಿದ್ದಾರೆ.
ಟೆಕ್ಕಿಯ ಬಳಿ ಹಾವು ಹಿಡಿಯುವ ಯಾವುದೇ ಸಲಕರಣೆ ಇರಲಿಲ್ಲ. ಇಷ್ಟೇ ಅಲ್ಲ ಈತ ಹಾವು ಹಿಡಿಯುವ ಕಲೆ ಕರಗತಾ ಮಾಡಿಕೊಂಡಿದ್ದನಾ ಅನ್ನೋದು ಸ್ಪಷ್ಟವಿಲ್ಲ. ಆತಂದಿಂದ ನೋಡುತ್ತಿರುವಾಗಲೇ ಟೆಕ್ಕಿ ಹಾವಿನ ಬಳಿ ಹೋಗಿ ಯಾವುದೇ ಸಲಕರಣೆ, ಭಯ ಇಲ್ಲದೆ ಹೆಬ್ಬಾವನ್ನು ಕೈಯಲ್ಲಿ ಹಿಡಿದಿದ್ದಾನೆ. ಈತ ಹತ್ತಿರ ಹೋಗುತ್ತಿದ್ದಂತೆ ಹಲವರು ಎಚ್ಚರಿಸಿದ್ದಾರೆ. ಆದರೆ ಯಾವುದೇ ಅಳುಕಿಲ್ಲದೆ, ಆತಂಕವಿಲ್ಲದೆ ಹೆಬ್ಬಾವಿನ ಕಡೆ ತೆರಳಿ ಕೈಯಲ್ಲಿ ಹಿಡಿದು ಬಂದಿದ್ದಾನೆ.
ಕೆಲವೇ ಕ್ಷಣಗಳಲ್ಲಿ ಹೆಬ್ಬಾವನ್ನು ಹಿಡಿದ ಟೆಕ್ಕಿ ಕಾಡಿಗೆ ಬಿಡಲು ಮುಂದಾಗಿದ್ದಾನೆ. ಆದರೆ ಈ ಟೆಕ್ಕಿ ಹತ್ತಿರ ಬರುತ್ತಿದ್ದಂತೆ ಎಲ್ಲರು ದೂರ ತೆರಳಿದ್ದಾರೆ. ಯಾರು ಕೂಡ ಸ್ಕೂಟರ್ ಮೂಲಕ ಡ್ರಾಪ್ ನೀಡಲು ಸಿದ್ಧರಿರಲಿಲ್ಲ. ಕೊನೆಯ ಒಬ್ಬ ಧೈರ್ಯ ಮಾಡಿ ಟೆಕ್ಕಿಯನ್ನು ಸ್ಕೂಟರ್ ಹಿಂಭಾಗದಲ್ಲಿ ಕೂರಿಸಿದ್ದಾರೆ. ಈತ ಸ್ಕೂಟರ್ ಹತ್ತಿ ಹೆಬ್ಬಾವನ್ನು ತೋಳಿನಲ್ಲಿ ಹಾಕಿದ್ದಾನೆ. ಬಳಿಕ ಲ್ಯಾಪ್‌ಟಾಪ್ ಬ್ಯಾಗ್ ಹಿಡಿದು ತೆರಳುವಂತೆ ಸರಾಗವಾಗಿ ತೆರಳಿದ್ದಾನೆ. ಈ ವಿಡಿಯೋ ಇದೀಗ ಭಾರಿ ಸದ್ದು ಮಾಡುತ್ತಿದೆ.
ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಹಲವರು ಪ್ರತಿಕ್ರಿಯಿಸಿದ್ದಾರೆ. ಹೆಬ್ಬಾವನ್ನು ಈತ ಅಷ್ಟು ಸುಲಭವಾಗಿ ಹಿಡಿದಿದ್ದು ಹೇಗೆ? ಈತ ನಿಜಕ್ಕೂ ಟೆಕ್ಕಿಯೋ ಅಥಲಾ ಸ್ನೇಕ್ ತಜ್ಞನೋ ಎಂದು ಹಲವರು ಪ್ರಶ್ನಿಸಿದ್ದಾರೆ. ಇದೇ ವೇಳೆ ಕೆಲವರು ಅಪಾಯದ ಕುರಿತು ಎಚ್ಚರಿಸಿದ್ದಾರೆ. ಬರಿಗೈಯಲ್ಲಿ ಹಿಡಿಯುವ ಸಾಹಸ ಉತ್ತಮವಲ್ಲ ಎಂದು ಸಲಹೆ ನೀಡಿದ್ದಾರೆ. ಇದೇ ವೇಳೆ ಕೆಲವರು ಟೆಕ್ಕಿ ಆಗಿರುವ ಕಾರಣ ಪೈಥಾನ್ ಪ್ರೋಗ್ರಾಂ ಸುಲಭ ಎಂದು ಕಮೆಂಟ್ಸ್ ಮಾಡಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ