ಚಾ ತೋಟದಲ್ಲಿ ಕೆಲಸಕ್ಕೆ ಬಂದ ಮಹಿಳೆಯರ ಕ್ರಿಕೆಟ್... ವಿಡಿಯೋ ವೈರಲ್

Suvarna News   | Asianet News
Published : Jan 16, 2022, 01:41 PM IST
ಚಾ ತೋಟದಲ್ಲಿ ಕೆಲಸಕ್ಕೆ ಬಂದ ಮಹಿಳೆಯರ ಕ್ರಿಕೆಟ್... ವಿಡಿಯೋ ವೈರಲ್

ಸಾರಾಂಶ

ಟೀ ಎಸ್ಟೇಟ್‌ನಲ್ಲಿ ಮಹಿಳೆಯರ ಕ್ರಿಕೆಟ್ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್  

ನವದೆಹಲಿ(ಜ.16): ಕ್ರಿಕೆಟ್‌ ಎಂದರೆ  ಭಾರತದ ಜನರ ಪಾಲಿಗೆ ಕ್ರೀಡೆ ಅಲ್ಲ, ಅದೊಂತರ ಎಮೋಷನ್‌, ಅದೊಂತರ ರಿಲಿಜಿಯನ್‌, ದೇಶ, ಭಾಷೆ, ಬಡವ ಬಲ್ಲಿದ ಎಂಬ ಬೇದವಿಲ್ಲದೇ ಭಾರತದಲ್ಲಿ ಕ್ರಿಕೆಟ್‌ಗೆ ಕೋಟ್ಯಾಂತರ ರೂ. ಅಭಿಮಾನಿಗಳಿದ್ದಾರೆ. ಕ್ರಿಕೆಟ್‌ ಮೇಲೆ ಭಾರತೀಯರ ಪ್ರೀತಿ ಎಷ್ಟಿದೆ ಎಂದರೆ ಅವರು ಕೆಲಸದ ಸ್ಥಳವನ್ನು ಕೂಡ ಕ್ಷಣಮಾತ್ರದಲ್ಲಿ ಕ್ರಿಕೆಟ್ ಮೈದಾನವಾಗಿ ಮಾಡಬಲ್ಲರು.  ಅದಕ್ಕೆ ಈ ಚಾ ತೋಟದ ಮಹಿಳೆಯರೇ ಉದಾಹರಣೆ. 

ಉದ್ಯಮಿ ಹರ್ಷ ಗೊಯೆಂಕಾ ಅವರು ಚಾ ತೋಟಕ್ಕೆ ಕೆಲಸಕ್ಕೆ ಬಂದ ಮಹಿಳೆಯರು ಕ್ರಿಕೆಟ್ ಆಡುತ್ತಿರುವ ವಿಡಿಯೋವೊಂದನ್ನು ಟ್ವಿಟ್ಟರ್‌ನಲ್ಲಿ ಶೇರ್‌ ಮಾಡಿದ್ದು, ಸಾವಿರಾರು ಮಂದಿ ಈ ವಿಡಿಯೋವನ್ನು ವೀಕ್ಷಿಸಿದ್ದಾರೆ.  ಇದು ಕೇರಳದ ವಯನಾಡಿನ ಟೀ ತೋಟವೊಂದರ ವಿಡಿಯೋ ಆಗಿದ್ದು,  ಮಹಿಳೆಯರು ತಮ್ಮ ಕೆಲಸದ ಬಟ್ಟೆಯಲ್ಲೇ  ಆಟಕ್ಕೆ ಸಿದ್ಧವಾಗಿದ್ದು, ಒಬ್ಬರು ಮಹಿಳೆ ಬೌಲಿಂಗ್‌ ಮಾಡುತ್ತಿದ್ದರೆ. ಇನ್ನೊಬ್ಬರು ಮಹಿಳೆ ಬ್ಯಾಟಿಂಗ್‌ ಮಾಡುತ್ತಿದ್ದಾರೆ. ಇತರ ಮಹಿಳೆಯರು ಸುತ್ತನಿಂತು ಫೀಲ್ಡಿಂಗ್‌ ಮಾಡುತ್ತಿದ್ದಾರೆ. 

ಮೊನ್ನೆಯಷ್ಟೇ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಭಾರತ ಸೋಲು ಕಂಡಿತ್ತು. ಈ ಬಗ್ಗೆಬೇಸರವಾಗಿತ್ತು. ಆದರೆ ಈ ವಿಡಿಯೋ ಆ ಬೇಸರವನ್ನು ಹೋಗಲಾಡಿಸಿತು, ಎಂದು ಬರೆದುಕೊಂಡು ಗೋಯೆಂಕಾ ಈ ವಿಡಿಯೋವನ್ನು ಪೋಸ್ಟ್‌ ಮಾಡಿದ್ದಾರೆ. ಇದು  ಕೇವಲ ಹರ್ಷ ಗೋಯೆಂಕಾ ಅವರಿಗೆ ಮಾತ್ರವಲ್ಲ, ಭಾರತದ ಸೋಲಿನಿಂದ ದುಃಖಿತರಾಗಿರುವ ಎಲ್ಲಾ ಅಭಿಮಾನಿಗಳಿಗೂ ಈ ವಿಡಿಯೋ ಖುಷಿ ನೀಡಲಿದೆ. ಈ ವಿಡಿಯೋ ಆರ್‌ಪಿಜಿ ಗ್ರೂಪ್‌ಗೆ ಸೇರಿದ ಕೃಷಿ-ವ್ಯಾಪಾರ ನಿಗಮವಾದ ಹ್ಯಾರಿಸನ್ಸ್ ಮಲಯಾಳಮ್‌ನ ವಿಡಿಯೋವಾಗಿದೆ.

TATA Groups : ಟಾಟಾ ಸಂಸ್ಥೆಯ 1300 ಎಕರೆ ಟೀ ಎಸ್ಟೇಟ್ ಸರ್ಕಾರದ ವಶಕ್ಕೆ

ಬಲಿಷ್ಠ ತಂಡಗಳನ್ನು ಬಗ್ಗುಬಡಿದು ಆತ್ಮವಿಶ್ವಾಸದೊಂದಿಗೆ ದಕ್ಷಿಣ ಆಫ್ರಿಕಾ ಪ್ರವಾಸ ಕೈಗೊಂಡಿದ್ದ ವಿರಾಟ್ ಕೊಹ್ಲಿ ಪಡೆ ಹರಿಣಗಳೆದರು ಮೂರು ಪಂದ್ಯಗಳ ಫ್ರೀಡಂ ಟ್ರೋಫಿ ಟೆಸ್ಟ್ ಸರಣಿಯನ್ನು 1-2 ಅಂತರದಲ್ಲಿ ಕೈಚೆಲ್ಲಿತ್ತು. ಸಾಕಷ್ಟು ರೋಚಕತೆಯಿಂದ ಕೂಡಿದ್ದ ಈ ಪಂದ್ಯದ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಚೊಚ್ಚಲ ಟೆಸ್ಟ್ ಸರಣಿ ಗೆಲ್ಲುವ ಭಾರತದ ಕನಸು ಮತ್ತೊಮ್ಮೆ ಭಗ್ನವಾಗಿದೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ (India vs South Africa) ತಂಡಗಳ ನಡುವಿನ ಮೂರು ಪಂದ್ಯಗಳ ಟೆಸ್ಟ್ ಸರಣಿಯು 2-1 ಅಂತರದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾದ ಪಾಲಾಗಿತ್ತು. 1992ರಿಂದ 2022ರವರೆಗೆ ಬರೋಬ್ಬರಿ ಮೂರು ದಶಕಗಳಿಂದ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿರುವ ಟೀಂ ಇಂಡಿಯಾ (Team India) ಹರಿಣಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆಲ್ಲಲು ವಿಫಲವಾಗಿದೆ. ಭಾರತ ತಂಡವು ಈ ಬಾರಿ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಸಾಧ್ಯವಾಗದಿರಲು ಕಾರಣಗಳೇನು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.

Ind vs SA: ಕೇಪ್‌ಟೌನ್ ಟೆಸ್ಟ್‌ನಲ್ಲಿ ಮುಗ್ಗರಿಸಿದ ಭಾರತ, ಟೆಸ್ಟ್ ಸರಣಿ ದಕ್ಷಿಣ ಆಫ್ರಿಕಾ ಪಾಲು..!

ಸರಣಿಯುದ್ದಕ್ಕೂ ಕೈಕೊಟ್ಟ ಮಧ್ಯಮ ಕ್ರಮಾಂಕ
ಕೊನೆಯ ಮೂರು ಇನಿಂಗ್ಸ್‌ಗಳಲ್ಲಿ ಆರಂಭಿಕರ ವೈಫಲ್ಯ
ಕೊನೆಯ ಎರಡು ಟೆಸ್ಟ್‌ನ ಎರಡನೇ ಇನಿಂಗ್ಸ್‌ನಲ್ಲಿ ಬೌಲರ್‌ಗಳ ಸಾಧಾರಣ ಪ್ರದರ್ಶನ
ರವಿಚಂದ್ರನ್ ಅಶ್ವಿನ್‌ಗೆ ಸಿಗದ ಯಶಸ್ಸು
ಪೀಟರ್‌ಸನ್‌, ಬವುಮಾ ಎದುರು ಸಿಗದ ಯಶಸ್ಸು

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಮದುವೆ ನಂತರ ಕಾರಿನ ಸ್ಟೇರಿಂಗ್ ಹಿಡಿದ ವಧು; ದೇವ್ರೇ ಕಾಪಾಡಪ್ಪಾ ಎಂದು ಕೈಮುಗಿದು ಕುಳಿತುಕೊಂಡ ವರ!
ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?