Asianet Suvarna News Asianet Suvarna News

TATA Groups : ಟಾಟಾ ಸಂಸ್ಥೆಯ 1300 ಎಕರೆ ಟೀ ಎಸ್ಟೇಟ್ ಸರ್ಕಾರದ ವಶಕ್ಕೆ

  • ಟಾಟಾ ಸಂಸ್ಥೆಯ ಅಧೀನದಲ್ಲಿರುವ ದಕ್ಷಿಣ ಕೊಡಗಿನಲ್ಲಿ ಟೀ ಬೆಳೆ
  • ಸುಮಾರು 1300ಕ್ಕೂ ಅಧಿಕ ಎಕರೆ ಜಾಗವನ್ನು ಟಾಟಾ ಸಂಸ್ಥೆಯಿಂದ ಸರ್ಕಾರದ ವಶಕ್ಕೆ
Virajapete Civil court Historical  order On Tata firms 1300 acre tea estate snr
Author
Bengaluru, First Published Dec 7, 2021, 8:11 AM IST

 ವಿರಾಜಪೇಟೆ (ಡಿ.07):  ಟಾಟಾ ಸಂಸ್ಥೆಯ ಅಧೀನದಲ್ಲಿರುವ ದಕ್ಷಿಣ ಕೊಡಗಿನಲ್ಲಿ ಟೀ ಬೆಳೆಯಲಾಗುತ್ತಿರುವ ಸುಮಾರು 1300ಕ್ಕೂ ಅಧಿಕ ಎಕರೆ ಜಾಗವನ್ನು ಆ ಸಂಸ್ಥೆಯಿಂದ ಸರ್ಕಾರದ ವಶಕ್ಕೆ ಪಡೆಯುವಂತೆ ವಿರಾಜಪೇಟೆ ಸಿವಿಲ್‌ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ನ್ಯಾಯಾಲಯ ತೀರ್ಪು ಪ್ರಕಟಿಸಿದ್ದು, ಪ್ರತಿಷ್ಠಿತ ಟಾಟಾ ಸಂಸ್ಥೆ ಹಾಗೂ ಸರ್ಕಾರದ ನಡುವೆ ಹಲವು ವರ್ಷಗಳಿಂದ ನಡೆಯುತ್ತಿದ್ದ ಈ ವಿವಾದಕ್ಕೆ ಈಗ ತೆರೆ ಬಿದ್ದಂತಾಗಿದೆ.

ವಿರಾಜಪೇಟೆ (virajapete) ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಜಿ. ಲೋಕೇಶ್‌  ಅವರು ಡಿ.3ರಂದು ತೀರ್ಪು ಪ್ರಕಟಿಸಿದ್ದು, ಟಾಟಾ ಸಂಸ್ಥೆ (TATA) ಹಾಗೂ ಗ್ಲೆನ್‌ ಲೋರ್ನಾ ಕಂಪನಿ ಹೂಡಿದ್ದ ಎರಡು ದಾವೆಗಳನ್ನು ವಜಾ ಗೊಳಿಸಿದ್ದಾರೆ. ಈ ಜಾಗಕ್ಕೆ ಸಂಬಂಧಿಸಿದಂತೆ ಮುಂದೆ ಸೂಕ್ತ ಕ್ರಮ ವಹಿಸುವಂತೆ ಜಿಲ್ಲಾಧಿಕಾರಿ ಹಾಗೂ ಸಂಬಂಧಿಸಿದ ತಹಸೀಲ್ದಾರರಿಗೆ ನ್ಯಾಯಾಲಯ ಸೂಚನೆ ನೀಡಿದೆ.

ಸರ್ಕಾರದ (Karnataka Govt) ಪರವಾಗಿ ಅಪರ ಸರ್ಕಾರಿ ವಕೀಲರಾದ ಕಂಜಿತಂಡ ಅನಿತಾ ದೇವಯ್ಯ ವಾದ ಮಂಡಿಸಿದ್ದಾರೆ. ವಿವಾದಕ್ಕೆ ಸಂಬಂಧಿಸಿದಂತೆ ವಿರಾಜಪೇಟೆ ತಹಸೀಲ್ದಾರ್‌ ಡಾ. ಯೋಗಾನಂದ ಅವರು ಸಾಕಷ್ಟುಆಧಾರಗಳ ಸಹಿತವಾಗಿ ಸಾಕ್ಷಿದಾರಾಗಿ ಹೇಳಿಕೆ ನೀಡಿದ್ದಾರೆ. ಸಾಕ್ಷಿ ಹಾಗೂ ವಕೀಲರ ವಾದವನ್ನು ಎತ್ತಿಹಿಡಿದ ನ್ಯಾಯಾಲಯ ಐತಿಹಾಸಿಕ ತೀರ್ಪನ್ನು ನೀಡಿದ್ದು, ಸಾವಿರಗಟ್ಟಲೆ ಜಾಗವನ್ನು ವಶಕ್ಕೆ ಪಡೆಯಲು ಆದೇಶ ನೀಡಿದೆ.

ಏನಿದು ಪ್ರಕರಣ?: ಈ ಹಿಂದಿನ ದಾಖಲೆಯಲ್ಲಿದ್ದ ಪೈಸಾರಿ ಮೀಸಲು ಅರಣ್ಯ ಎಂಬುದನ್ನು ಸಂಸ್ಥೆಯು ಟಾಟಾ ರೇಡಿಂ ಸಾಗು ಎಂದು ಬದಲಿಸಿಕೊಂಡಿತ್ತು. 2006ರ ಏಪ್ರಿಲ್‌ 7ರಂದು ಕರ್ನಾಟಕ ಸರ್ಕಾರದ ಅರಣ್ಯ (ForestDepartment) ಮತ್ತು ಜೀವಶಾಸ್ತ್ರ ಇಲಾಖೆ ಇದನ್ನು ಒಪ್ಪದೆ, ಕಾನೂನು ಬಾಹಿರವಾಗಿ ಆರ್‌ಟಿಸಿಯಲ್ಲಿ ನಿಬಂಧನೆಯನ್ನು ರೇಡಿಂ ಸಾಗು ಎಂದು ಮಾಡಿದೆ ಮತ್ತು ಮೂಲವಾಗಿ 1914ರ ಸಂದರ್ಭ ಗೇಣಿ ಕೊಡುವಾಗ ಇದ್ದಂತೆ ಸರಿಪಡಿಸಿ ಅರಣ್ಯ ಮತ್ತು ಮೀಸಲು ಅರಣ್ಯ ಎಂದು ಸರಿಪಡಿಸುವಂತೆ ಸೂಚಿಸಿದೆ. ಅದನ್ನು ಕಂದಾಯ ದಾಖಲೆಗಳಲ್ಲಿ ಅದೇ ರೀತಿ ಸರಿಪಡಿಸಲಾಗಿತ್ತು. ಇದನ್ನು ಪ್ರಶ್ನಿಸಿ ಟಾಟಾ ಹಾಗೂ ಗ್ಲೆನ್‌ ಲೋರ್ನಾ ಸಂಸ್ಥೆಯವರು ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಸದರಿ ತಿದ್ದುಪಡಿ ಆದೇಶವನ್ನು ರದ್ದುಪಡಿಸುವಂತೆ ಕೋರಿದ್ದರು. ರಾಜ್ಯ ಉಚ್ಚ ನ್ಯಾಯಾಲಯ ಈ ಪ್ರಕರಣವನ್ನು ವಿರಾಜಪೇಟೆ ನ್ಯಾಯಾಲಯಕ್ಕೆ ವರ್ಗಾಯಿಸಿತ್ತು.

1904-15ರ ಸಂದರ್ಭದಲ್ಲಿ ಆಗಿನ ಬ್ರಿಟಿಷ್‌ (British) ಸರ್ಕಾರ ಮೆಕ್‌ ಡೋಗಲ್‌ ಗ್ಲೆನ್‌ ಲೋರ್ನಾ ಲಿಮಿಟೆಡ್‌ಗೆ ಸುಮಾರು 1300ಕ್ಕೂ ಅಧಿಕ ಎಕರೆ ಪೈಸಾರಿ ಜಾಗವನ್ನು ಟೀ ಬೆಳೆಯಲು 999 ವರ್ಷ ಲೀಸ್‌ ಆಧಾರಲ್ಲಿ ಒಪ್ಪಂದಂತೆ ಬಿಟ್ಟುಕೊಟ್ಟಿತ್ತು.

Tata Group: ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಪ್ರವೇಶ :   ಟಾಟಾ ಸಮೂಹ ಸಂಸ್ಥೆ (Tata group) 300 ಮಿಲಿಯನ್ ಡಾಲರ್ ವೆಚ್ಚದಲ್ಲಿ ಅರೆವಾಹಕ ( semiconductor) ಜೋಡಣೆ ( assembly) ಹಾಗೂ ಪರೀಕ್ಷಾ (test) ಘಟಕ ಸ್ಥಾಪಿಸೋ ಬಗ್ಗೆ ಮೂರು ರಾಜ್ಯಗಳೊಂದಿಗೆ ಮಾತುಕತೆಯಲ್ಲಿ ತೊಡಗಿದೆ ಎಂದು ಎರಡು ಆಪ್ತಮೂಲಗಳು ತಿಳಿಸಿವೆ. ಉನ್ನತ ತಂತ್ರಜ್ಞಾನ(high-tech) ಉತ್ಪಾದನಾ ಕ್ಷೇತ್ರದಲ್ಲಿ ಮುನ್ನುಗುವ ಸಂಘಟಿತ ಪ್ರಯತ್ನದ ಭಾಗವಾಗಿ ಈ ಯೋಜನೆಯನ್ನು ಕೈಗೆತ್ತಿಕೊಳ್ಳಲು ಟಾಟಾ ಸಮೂಹ ನಿರ್ಧರಿಸಿದೆ ಎಂಬುದು ತಿಳಿದು ಬಂದಿದೆ.

ಅರೆವಾಹಕ ಜೋಡಣೆ ಹಾಗೂ ಪರೀಕ್ಷಾ ಹೊರಗುತ್ತಿಗೆ ಘಟಕ (outsourced semiconductor assembly and test) ನಿರ್ಮಾಣಕ್ಕೆ ಸ್ಥಳ ಹುಡುಕೋ ಬಗ್ಗೆ ಟಾಟಾ ಗ್ರೂಪ್ ದಕ್ಷಿಣ ರಾಜ್ಯಗಳಾದ ಕರ್ನಾಟಕ(Karnataka), ತಮಿಳುನಾಡು(Tamil Nadu) ಹಾಗೂ ತೆಲಂಗಣದೊಂದಿಗೆ(Telangana) ಈಗಾಗಲೇ ಮಾತುಕತೆ ಆರಂಭಿಸಿದೆ ಎಂದು ಮೂಲಗಳು ತಿಳಿಸಿವೆ. ಆದ್ರೆ ಈ ವಿಷಯವನ್ನುಈಗಲೇ ಬಹಿರಂಗಪಡಿಸಲು ಟಾಟಾ ಸಂಸ್ಥೆ ನಿರಾಕರಿಸಿದೆ. ಈ ಹಿಂದೆ ಕೂಡ ಸೆಮಿಕಂಡಕ್ಟರ್ ಉದ್ಯಮಕ್ಕೆ ಪ್ರವೇಶಿಸಲು ಆಸಕ್ತಿ ಹೊಂದಿರೋದಾಗಿ ಅದು ತಿಳಿಸಿತ್ತು. ಆದ್ರೆ ಸೆಮಿಕಂಡಕ್ಟರ್ ಕ್ಷೇತ್ರಕ್ಕೆ ಟಾಟಾ ಕಾಲಿಟ್ಟಿರೋದು ಹಾಗೂ ಅದರ ಗಾತ್ರದ ಬಗ್ಗೆ ಸುದ್ದಿಯಾಗಿರೋದು ಮಾತ್ರ ಇದೇ ಮೊದಲು.

Sensexಗೂ ಹೊಸ ಸೋಂಕಿನ ಶಾಕ್‌ : ಜಗತ್ತಿನೆಲ್ಲೆಡೆ ಷೇರುಗಳ ಬೆಲೆ ಕುಸಿತ!

OSAT ಘಟಕದಲ್ಲಿ ಎರಕ ಹೊಯ್ದ ಸಿಲಿಕಾನ್(silicon) ಬಿಲ್ಲೆಗಳನ್ನು(wafers) ಪ್ಯಾಕ್(pack), ಜೋಡಣೆ (assemble) ಹಾಗೂ ಪರೀಕ್ಷೆ( test) ಮಾಡಿ ಅವುಗಳನ್ನು ಸೆಮಿಕಂಡಕ್ಟರ್ ಚಿಪ್ ಗಳನ್ನಾಗಿ ಮಾರ್ಪಡಿಸಲಾಗುತ್ತದೆ.ಟಾಟಾ ಸಂಸ್ಥೆ ಈಗಾಗಲೇ ಘಟಕ(plant) ನಿರ್ಮಾಣಕ್ಕೆಕೆಲವು ಸ್ಥಳಗಳನ್ನು ಪರಿಶೀಲಿಸಿದ್ದು, ಮುಂದಿನ ತಿಂಗಳು ಅಂತಿಮಗೊಳಿಸೋ ನಿರೀಕ್ಷೆಯಿದೆ ಎಂದು ಮೂಲವೊಂದು ಮಾಹಿತಿ ನೀಡಿದೆ. 'ಟಾಟಾ ಸಂಸ್ಥೆ ಸಾಫ್ಟವೇರ್ ವಿಷಯದಲ್ಲಿ ತುಂಬಾ ಬಲಿಷ್ಠವಾಗಿದ್ದು, ಹಾರ್ಡ್ ವೇರ್ ಗೆ ಸಂಬಂಧಿಸಿ ಒಂದಿಷ್ಟು ಹೊಸತನವನ್ನು ಸೃಷ್ಟಿಸಲು ಬಯಸುತ್ತಿದ್ದು, ದೀರ್ಘಾವಧಿಯಲ್ಲಿ ಅದು ಸಂಸ್ಥೆಯ ಬೆಳವಣಿಗೆಗೆ ಅತ್ಯವಶ್ಯಕವಾಗಿದೆ ಕೂಡ' ಎಂದು ಮೂಲವೊಂದು ತಿಳಿಸಿದೆ. ಆದ್ರೆ ಈ ಸುದ್ದಿಗೆ ಸಂಬಂಧಿಸಿ ಟಾಟಾ ಸಂಸ್ಥೆಯಾಗಲಿ ಅಥವಾ ಸಂಬಂಧಿಸಿದ ಮೂರು ರಾಜ್ಯಗಳಾಗಲೀ ಇಲ್ಲಿಯ ತನಕ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಟಾಟಾದ ಈ ಹೊಸ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರ 'ಮೇಕ್ ಇನ್ ಇಂಡಿಯಾ' ಯೋಜನೆಯಡಿಯಲ್ಲಿ ಎಲೆಕ್ಟ್ರಾನಿಕ್ಸ್ ಉತ್ಪಾದನೆ ಹೆಚ್ಚಿಸೋ ಪ್ರಯತ್ನದ ಭಾಗವೇ ಆಗಿದೆ. ಎಲೆಕ್ಟ್ರಾನಿಕ್ಸ್ ಉತ್ಪಾದನೆಗೆ ಮೇಕ್ ಇನ್ ಇಂಡಿಯಾ ಯೋಜನೆಯಡಿಯಲ್ಲಿ ನೀಡುತ್ತಿರೋ ಪ್ರೋತ್ಸಾಹದಿಂದಲೇ ಇಂದು ಭಾರತ ವಿಶ್ವದ ಎರಡನೇ ಅತೀದೊಡ್ಡ ಸ್ಮಾರ್ಟ್ ಫೋನ್ ಉತ್ಪಾದನಾ ರಾಷ್ಟ್ರವಾಗಿ ಬೆಳೆದಿರೋದು.

Follow Us:
Download App:
  • android
  • ios