ತಮಿಳ್ನಾಡಲ್ಲಿ ಐಟಿ ದಾಳಿ ವೇಳೆ 400 ಕೋಟಿ ಕಪ್ಪುಹಣ ಪತ್ತೆ!

By Kannadaprabha NewsFirst Published Mar 18, 2021, 7:53 AM IST
Highlights

ತಮಿಳ್ನಾಡಲ್ಲಿ ಐಟಿ ದಾಳಿ ವೇಳೆ 400 ಕೋಟಿ ಕಪ್ಪುಹಣ ಪತ್ತೆ| 50 ಲಕ್ಷ ನಗದು, 3 ಕೋಟಿ ಆಭರಣ, 12.5 ಕೋಟಿ ಮೌಲ್ಯದ ಐಷಾರಾಮಿ ವಾಹನ ಪತ್ತೆ

ನವದೆಹಲಿ(ಮಾ.18): ಮಾ.11ರಂದು ತಮಿಳುನಾಡಿನ ವಿವಿಧ ನಗರಗಳಲ್ಲಿ ಕೆಲ ವ್ಯಕ್ತಿಗಳ ಮನೆ ಮತ್ತು ಕಚೇರಿ ಮೇಲೆ ನಡೆಸಲಾದ ಆದಾಯ ತೆರಿಗೆ ದಾಳಿ ವೇಳೆ 400 ಕೋಟಿ ರು.ಗೂ ಹೆಚ್ಚಿನ ಕಪ್ಪುಹಣ ಪತ್ತೆಯಾಗಿದೆ ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಬುಧವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.

ಮಾ.11ರಂದು 20 ಸ್ಥಳಗಳ ಮೇಲೆ ನಡೆದ ದಾಳಿ ವೇಳೆ 50 ಲಕ್ಷ ರು. ನಗದು, 3 ಕೋಟಿ ಮೌಲ್ಯದ ಆಭರಣ ಮತ್ತು 12.5 ಕೋಟಿ ರು.ಮೌಲ್ಯದ 9 ಐಷಾರಾಮಿ ವಾಹನಗಳು ಪತ್ತೆಯಾಗಿತ್ತು. ಇದೇ ವೇಳೆ ಅವರ ಬ್ಯಾಂಕ್‌ ಖಾತೆಗಳನ್ನು ತಪಾಸಣೆ ಮಾಡಿದಾಗ ಅದರಲ್ಲಿ 100 ಕೋಟಿ ಠೇವಣಿ ಪತ್ತೆಯಾಗಿತ್ತು.

1000 ಕೋಟಿ ರೂ. ಕಪ್ಪು ಹಣ ಪತ್ತೆ: ಚಿನ್ನದ ವಹಿವಾಟು ಕಂಪನಿಗಳ ಧೋಖಾ!

ಪರಿಶೀಲನೆ ವೇಳೆ ಆರೋಪಿಗಳು ಕೃಷಿ ಉತ್ಪನ್ನಗಳನ್ನು ವಿದೇಶಕ್ಕೆ ರಫ್ತು ಮಾಡಿದ ಮತ್ತು ಖರೀದಿ ಮಾಡಿದ ಲೆಕ್ಕ ತೋರಿಸಿ ಭಾರೀ ಪ್ರಮಾಣದ ಕಪ್ಪುಹಣ ಜಮೆ ಮಾಡಿದ್ದರು. ಆದರೆ ವಾಸ್ತವವಾಗಿ ಅಂಥ ಯಾವುದೇ ವ್ಯವಹಾರವನ್ನೇ ಅವರು ನಡೆಸಿಲ್ಲ. ಸಂಸ್ಥೆಯ ಸಿಬ್ಬಂದಿಗಳೇ ನಕಲಿ ಇನ್ವಾಯ್‌್ಸಗಳನ್ನು ಸೃಷ್ಟಿಸಿ ಈ ವ್ಯವಹಾರದ ಲೆಕ್ಕ ಸೃಷ್ಟಿಸಿದ್ದಾರೆ. ಬ್ಯಾಂಕ್‌ ಸಾಲವನ್ನು ಪಡೆಯುವ ಸಲುವಾಗಿ ಸಂಸ್ಥೆಯ ಇಂಥ ಗೋಲ್‌ಮಾಲ್‌ ಲೆಕ್ಕಾಚಾರ ನಡೆಸಿದ್ದು ಕಂಡುಬಂದಿದೆ. ಅಲ್ಲದೆ ಆರೋಪಿಗಳು ವಿದೇಶದಲ್ಲೂ ಅಘೋಷಿತ ಬ್ಯಾಂಕ್‌ ಖಾತೆ ಹೊಂದಿರುವುದು, ವಿದೇಶಿ ಕ್ರೆಡಿಡ್‌ ಕಾರ್ಡ್‌ ಹೊಂದಿರುವುದು, ವಿದೇಶಿ ಸಂಸ್ಥೆಗಳಲ್ಲಿ ಹೂಡಿಕೆ ಮಾಡಿರುವುದು ಕಂಡುಬಂದಿದೆ ಎಂದು ಸಿಬಿಡಿಟಿ ತಿಳಿಸಿದೆ.

click me!