ನವದೆಹಲಿ(ಏ.27): ಮಹಾರಾಜ ಮತ್ತೆ ಅರಮನೆಗೆ ಮರಳುತ್ತಿದ್ದಂತೆ ಸ್ವರ್ಣಯುಗ ಆರಂಭಗೊಂಡಿದೆ. ಹೌದು ಏರ್ ಇಂಡಿಯಾ ಸಂಸ್ಥೆಯನ್ನು 18,000 ಕೋಟಿ ರೂಪಾಯಿ ಪಾವತಿಸಿ ಖರೀದಿಸಿದ ಟಾಟಾ ಸನ್ಸ್ ಕೆಲವೇ ದಿನಗಳಲ್ಲಿ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ದಿದೆ. ಇದೀಗ ಮುಂದುವರಿದ ಭಾಗವಾಗಿ ಏರ್ ಏಷಿಯಾದ ಸಂಪೂರ್ಣ ಪಾಲು ಖರೀದಿಗೆ ಏರ್ ಇಂಡಿಯಾ ಮುಂದಾಗಿದೆ. ಇದಕ್ಕಾಗಿ ಭಾರತದ ಸ್ಪರ್ಧಾ ಆಯೋಗದ ಬಳಿ ಅನುಮತಿ ಕೇಳಿದೆ.
ಏರ್ ಏಷಿಯಾ ಪ್ರವೈಟ್ ಲಿಮಿಟೆಡ್ ವಿಮಾನಯಾನ ಸಂಸ್ಥೆಯಲ್ಲಿ ಟಾಟಾ ಸನ್ಸ್ ಶೇಕಡಾ 83.67ರಷ್ಟು ಪಾಲು ಹೊಂದಿದ. ಇನ್ನುಳಿದ ಶೇಕಡಾ 16.33 ರಷ್ಟು ಪಾಲನ್ನು ಖರೀದಿಸಲು ಟಾಟಾ ಸನ್ಸ್ CCI ಬಳಿ ಅನುಮತಿ ಕೇಳಿದೆ.
ಟಾಟಾ ಗ್ರೂಪ್ ತೆಕ್ಕೆಗೆ ಜಾರುತ್ತಿದ್ದಂತೆಯೇ ಬದಲಾಯ್ತು ಸಿಬ್ಬಂದಿಯ ಅದೃಷ್ಟ!
ಏರ್ ಏಷಿಯಾ ಭಾರತದಲ್ಲಿ ದೇಶಿಯ ವಾಯ ಸಾರಿಗೆ ಸೇವೆ ನೀಡುತ್ತಿದೆ. ಜೊತೆಗೆ ಕಾರ್ಗೋ, ಚಾರ್ಟರ್ ಫ್ಲೈಟ್ ಸೇವೆಗಳನ್ನು ನೀಡುತ್ತಿದೆ. ಏರ್ ಏಷಿಯಾದಲ್ಲಿ ಬಹುಪಾಲು ಟಾಟಾ ಅಧಿಪತ್ಯ ಹೊಂದಿದೆ. ಇದೀಗ ಶೇಕಡಾ 100 ರಷ್ಟು ಪಾಲು ಹೊಂದಲು ಟಾಟಾ ಸನ್ಸ್ ನಿರ್ಧರಿಸಿದೆ.
ಟಾಟಾ ಸನ್ಸ್ ಪ್ರೈವೇಟ್ ಲಿಮಿಟೆಡ್ ಅಂಗ ಸಂಸ್ಥೆಯಾದ ಏರ್ ಇಂಡಿಯಾ ನಿಂದ ಇದೀಗ ಏರ್ ಏಷ್ಯಾ ಇಂಡಿಯಾ ಪ್ರವೇಟ್ ಲಿಮಿಟೆಡ್‌ನ ಸಂಪೂರ್ಣ ಇಕ್ವಿಟಿ ಷೇರು ಸ್ವಾಧೀನಪಡಿಸಿಕೊಳ್ಳಲು ಸ್ಪರ್ಧಾತ್ಮಕ ಆಯೋಗದ ಅನುಮತಿ ಕೇಳಿದೆ. ಆಯೋಗ ಕೂಡ ಸಕರಾತ್ಮವಾಗಿ ಸ್ಪಂದಿಸಿದೆ.
ನಷ್ಟದಲ್ಲಿದ್ದ ಏರ್ ಇಂಡಿಯಾ ಸಂಸ್ಥೆಯನ್ನು ಟಾಟಾ ಬರೋಬ್ಬರಿ 18,000 ಕೋಟಿ ರೂಪಾಯಿ ನೀಡಿ ಖರೀದಿಸಿತ್ತು. ಬಳಿಕ ಕಲವೇ ತಿಂಗಳಲ್ಲಿ ಟಾಟಾ ಸನ್ಸ್ ವಿಮಾಯಾನ ಸಂಸ್ಥೆಯನ್ನು ಲಾಭದತ್ತ ಕೊಂಡೊಯ್ದಿದೆ. 90 ವರ್ಷಗಳ ಹಿಂದೆ ಟಾಟಾ ಸಮೂಹದಿಂದಲೇ ಸ್ಥಾಪನೆಯಾಗಿ ನಂತರ ಭಾರತ ಸರ್ಕಾರದ ಪಾಲಾಗಿದ್ದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆ ಇದೀಗ ಮರಳಿ ಟಾಟಾ ಸಮೂಹಕ್ಕೆ ಸೇರ್ಪಡೆಯಾಗಿದೆ. ಇದೆ. ಇದೀಗ ಖರೀದಿಸಿದ ಏರ್ ಇಂಡಿಯಾ ಜೊತೆಗೆ, ಟಾಟಾ ಸಮೂಹವು ಈಗಾಗಲೇ ಇತರೆ ಸಂಸ್ಥೆಗಳ ಪಾಲುದಾರಿಕೆಯಲ್ಲಿ ಎರಡು ವಿಮಾನಯಾನ ಕಂಪನಿಗಳನ್ನು ಹೊಂದಿದೆ. ಏರ್ ಏಷ್ಯಾ ಮತ್ತು ವಿಸ್ತಾರಾ ಆ ಎರಡು ಕಂಪನಿಗಳು. ಸದ್ಯಕ್ಕೆ ಇವೂ ಲಾಭ ಗಳಿಸುತ್ತಿಲ್ಲ. ಈ ಎರಡು ಕಂಪನಿಗಳ ಪಾಲುದಾರಿಕೆಯಲ್ಲಿ ಕೆಲವು ಸಮಸ್ಯೆಗಳಿವೆ. ಹೀಗಾಗಿ ಏರ್ ಇಂಡಿಯಾವನ್ನೂ ಖರೀದಿಸಿ ಮೂರನ್ನೂ ವಿಲೀನ ಮಾಡುವ ಸಾಧ್ಯತೆ ಇದೆ.
ಏರ್ ಇಂಡಿಯಾ ಮುಖ್ಯಸ್ಥನಾಗಿ ಟಾಟಾ ಸನ್ಸ್ ಚೀಫ್ ಎನ್ ಚಂದ್ರಶೇಖರನ್ ನೇಮಕ!
ಏರ್‌ಇಂಡಿಯಾ ನಷ್ಟಎಷ್ಟು?
ಸುಮಾರು 60 ಸಾವಿರ ಕೋಟಿಗಳಷ್ಟುನಷ್ಟದಲ್ಲಿ ಇರುವ ಸಂಸ್ಥೆ ಆರ್ಥಿಕ ಸ್ಥಿತಿ ಸುಧಾರಿಸಲಾಗದ ಮಟ್ಟತಲುಪಿದ ನಂತರದಲ್ಲಿ ಖಾಸಗೀಕರಣ ಮಾಡುವಂತೆ ನೀತಿ ಆಯೋಗವು ಶಿಫಾರಸು ಮಾಡಿತ್ತು. ಅಲ್ಲದೆ ನಿರಂತರ ನಷ್ಟದಿಂದ ದಿವಾಳಿಯತ್ತ ಸಾಗುತ್ತಿರುವ ಸಂಸ್ಥೆಗೆ ಸರ್ಕಾರದ ನೆರವು ಮಂದುವರೆಸುವುದು ಲಾಭದಾಯಕವಲ್ಲ ಎಂದು ಸಲಹೆ ನೀಡಿತ್ತು. ಅನಂತರದಲ್ಲಿ ನೀತಿ ಆಯೋಗದ ಸಲಹೆಗೆ ಮಣಿದ ಕೇಂದ್ರ ಸರ್ಕಾರ 2017 ಜು.28ರಂದು ಖಾಸಗೀಕರಣಕ್ಕೆ ಸಮ್ಮತಿಸಿತ್ತು. 2007ರಿಂದಲೂ ಏರ್ ಇಂಡಿಯಾ ನಷ್ಟದಲ್ಲಿದೆ. ಅದರ ಪುನಶ್ಚೇತನಕ್ಕೆ 2012ರಲ್ಲಿ ಅಂದಿನ ಯುಪಿಎ ಸರ್ಕಾರ 32 ಸಾವಿರ ರು.ಕೋಟಿ ನೆರವು ನೀಡಿತ್ತು. ಆದರೂ ಕಂಪನಿಯ ವ್ಯವಹಾರ ಸುಧಾರಿಸಿರಲಿಲ್ಲ.