ಕಸದ ರಾಶಿಯಿಂದ ವ್ಯಾಪಿಸಿದ ಬೆಂಕಿ : ದೆಹಲಿಯಲ್ಲಿ ಶಾಲೆ ಬಂದ್‌

By Anusha Kb  |  First Published Apr 27, 2022, 4:36 PM IST
  • ಕಸದ ರಾಶಿಯಿಂದ ವ್ಯಾಪಿಸಿದ ಬೆಂಕಿ
  • ಉಸಿರಾಡಲು ಪರದಾಡಿದ ವಿದ್ಯಾರ್ಥಿಗಳು, ಶಿಕ್ಷಕರು
  • ಒಂದು ವಾರ ಶಾಲೆ ಬಂದ್‌

ದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಭಾಲಾಸ್ವಾ (Bhalaswa) ಡೈರಿ ಸಮೀಪದಲ್ಲಿ ಬೇಡದ ವಸ್ತುಗಳನ್ನು ಹಾಕಿದ್ದ (landfill site) ಜಾಗವೊಂದರಲ್ಲಿ ಬೆಂಕಿ ಕಾಣಿಸಿಕೊಂಡು ಶಾಲೆಗೂ ವ್ಯಾಪಿಸಿದ ಪರಿಣಾಮ ಶಾಲೆಯೊಂದನ್ನು ಮುಚ್ಚಲಾಗಿದೆ. ಖಾಸಗಿ ಎನ್‌ಜಿಒ ನಡೆಸುತ್ತಿದ್ದ ಪ್ರಾಥಮಿಕ ಶಾಲೆಯನ್ನು ಮುಚ್ಚಲಾಗಿದೆ. ಬೆಂಕಿಯ ಹೊಗೆ, ವಿಷಾನಿಲಗಳು ತರಗತಿಯೊಳಗೆ ಬರಲು ಆರಂಭಿಸಿದ ಪರಿಣಾಮ ಇಲ್ಲಿ ಮಕ್ಕಳು, ಶಾಲಾ ಸಿಬ್ಬಂದಿ ಉಸಿರಾಡಲು ಪರದಾಡುವಂತಾಗಿತ್ತು. ಕೂಡಲೇ ಶಾಲೆಯ ಪ್ರಾಥಮಿಕ ವಿಭಾಗವನ್ನು ಮುಚ್ಚಲು ಶಾಲಾ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು. ಶಾಲಾ ಆಡಳಿತ ಮಂಡಳಿ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಎಲ್ಲಾ ಮಕ್ಕಳನ್ನು ಅವರ ಮನೆಗಳಿಗೆ ಕಳುಹಿಸಲಾಗಿದೆ ಮತ್ತು ತರಗತಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸಮಸ್ಯೆಯ ಕುರಿತು ಈ ಹಿಂದೆಯೇ  ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದ್ದರೂ ಯಾರೂ ಕ್ರಮ ಕೈಗೊಂಡಿಲ್ಲ ಎಂದು ಶಾಲೆಯಲ್ಲಿ ಹಾಜರಿದ್ದ ಶಿಕ್ಷಕ ವೃಂದ ಹಾಗೂ ಶಾಲಾ ಆಡಳಿತ (school Administration)ಸಿಬ್ಬಂದಿ ತಿಳಿಸಿದ್ದಾರೆ. ಇಲ್ಲಿ ವಾಸಿಸುವ ಜನರು ಬಹಳ ಹಿಂದಿನಿಂದಲೂ ವಿಷಕಾರಿ ಹೊಗೆ, ಕಸದ ರಾಶಿ ಮತ್ತು ಸಣ್ಣ ಬೆಂಕಿಯ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಆದರೆ ಈ ಪ್ರಮುಖ ನಾಗರಿಕ ಸಮಸ್ಯೆಯ ಬಗ್ಗೆ ಯಾರೂ ಗಮನ ಹರಿಸಲಿಲ್ಲ. ಹೀಗಾಗಿ ಇಲ್ಲಿನ ನಿವಾಸಿಗಳು ಸೇರಿದಂತೆ ಇತರರಿಗೆ ಸಮಸ್ಯೆ ಹೆಚ್ಚಾಗಿದೆ ಎಂದು ಪ್ರಾಥಮಿಕ ಶಾಲೆಯ ಶಿಕ್ಷಕರೊಬ್ಬರು (Teacher) ತಿಳಿಸಿದರು.

DELHI: SCHOOL SHUT DUE TO LANDFILL FIRE

A primary school run by a private NGO has been shut down after 's landfill fire spreads to the school. reports. pic.twitter.com/AH6UtwybWU

— Mirror Now (@MirrorNow)

Tap to resize

Latest Videos

ಮೂಲಗಳ ಪ್ರಕಾರ, ಏಪ್ರಿಲ್ 26 ರಂದು ಮಧ್ಯಾಹ್ನ 2 ಗಂಟೆಗೆ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿಯ ನಂತರ ಅಗ್ನಿಶಾಮಕ ಇಲಾಖೆಯನ್ನು ಸಂಪರ್ಕಿಸಲು ಹಲವು ಪ್ರಯತ್ನಗಳ ಹೊರತಾಗಿಯೂ ಅಗ್ನಿಶಾಮಕ ಅಧಿಕಾರಿಗಳು ಸಂಜೆ 6 ಗಂಟೆಗೆ  ಕ್ರಮ ಕೈಗೊಳ್ಳಲು ಶುರು ಮಾಡಿದರು. ಶಾಲೆಯ ಎಲ್ಲಾ ಸಿಬ್ಬಂದಿ ಸ್ಥಳದಲ್ಲಿಯೇ ಇದ್ದರು ಎಂದು ಮಿರರ್ ನೌ ವರದಿ ಮಾಡಿದೆ.

ಹರ್ಯಾಣದ ಕೆಮಿಕಲ್‌ ಫ್ಯಾಕ್ಟರಿಯಲ್ಲಿ ಬೆಂಕಿ
ಪ್ರಸ್ತುತ ಪರಿಸ್ಥಿತಿಯನ್ನು ಪರಿಗಣಿಸಿ ಶಾಲೆಯ ಪ್ರಾಥಮಿಕ ವಿಭಾಗವು ಒಂದು ವಾರದವರೆಗೆ ಮುಚ್ಚುವ ಸಾಧ್ಯತೆಯಿದೆ ಎಂದು ಶಾಲಾ ಆಡಳಿತ ಮಂಡಳಿ ತಿಳಿಸಿದೆ. ಈಗಿನ ಸ್ಥಿತಿಯನ್ನು ನೋಡಿದರೆ, ನಾವು ಏಳು ದಿನಗಳ ಕಾಲ ಶಾಲೆಯನ್ನು ಮುಚ್ಚಲು ಒತ್ತಾಯಿಸಲ್ಪಟ್ಟಿದ್ದೇವೆ. ಮಕ್ಕಳ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ನಿರ್ಧಾರ ಕೈಗೊಳ್ಳಲಾಗುತ್ತಿದೆ ಎಂದು ಶಾಲೆಯ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ. ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅಲ್ಲಿನ ನಿವಾಸಿಗಳಿಗೆ ಸಹಾಯ ಮಾಡುತ್ತಿದ್ದಾರೆ.

ಬ್ಯಾಟರಾಯನಪುರ ಬಿಬಿಎಂಪಿ ಕಚೇರಿಯಲ್ಲಿ ಬೆಂಕಿ ಅವಘಡ, ದಾಖಲೆಗಳು ನಾಶ
 

click me!