1,000 ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಪರಿವರ್ತನೆ; ಹೊಸ ಬಾಂಬ್ ಸಿಡಿಸಿದ ಬಾಬಾ!

Published : May 31, 2021, 05:24 PM IST
1,000 ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಪರಿವರ್ತನೆ; ಹೊಸ ಬಾಂಬ್ ಸಿಡಿಸಿದ ಬಾಬಾ!

ಸಾರಾಂಶ

ಆಲೋಪಥಿ vs ಆಯುರ್ವೇದಾ ಜಟಾಪಟಿ ತೀವ್ರ ಸಾವಿರ ವೈದ್ಯರನ್ನು ಅಲೋಪಥಿಯಿಂದ ಆಯುರ್ವೇದಕ್ಕೆ ಕರೆತರುತ್ತೇನೆ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್ 

ನವದೆಹಲಿ(ಮೇ.31): ಕೊರೋನಾ ವೈರಸ್ ನಿಯಂತ್ರಿಸಲು ಸಾಧ್ಯವಾಗದ ಕಾರಣ ಆಲೋಪಥಿ ವಿರುದ್ಧವೇ ವಿವಾದಾತ್ಮಕ ಹೇಳಿಕೆ ನೀಡಿದ ಯೋಗ ಗುರು ಬಾಬಾ ರಾಮ್‌ದೇವ್ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ. ಅಲೋಪಥಿ ಹಾಗೂ ಆಯುರ್ವೇದ ನಡುವಿನ ಜಟಾಪಟಿ ಹೆಚ್ಚಾಗುತ್ತಿರುವ ಬೆನ್ನಲ್ಲೇ ರಾಮ್‌ದೇವ್, ಈ ವರ್ಷ 1,000 ಅಲೋಪಥಿ ವೈದ್ಯರನ್ನು ಆಯುರ್ವೇದಾ ವೈದ್ಯರನ್ನಾಗಿ ಪರಿವರ್ತಿಸುತ್ತೇವೆ ಎಂದಿದ್ದಾರೆ.

ಬಾಬಾ ರಾಮ್‍ದೇವ್‌ಗೆ 1,000 ಕೋಟಿ ರೂ. ಮಾನನಷ್ಟ ನೋಟಿಸ್: ಕ್ಷಮೆ ಕೇಳಿದ್ರೆ ಬಚಾವ್!.

ರಾಮ್‌ದೇವ್ ಅವರ ಯೋಗ ಕಾರ್ಯಕ್ರಮವೊಂದರಲ್ಲಿ ಈ ಹೇಳಿಕೆ ನೀಡಿ ಮತ್ತೊಂದು ವಿವಾದ ಸೃಷ್ಟಿಸಿದ್ದಾರೆ. ಎಂಬಿಬಿಎಸ್ ಮತ್ತು ಎಂಡಿ ಪದವಿಗಳನ್ನು ಪಡೆದಿರುವ ಹಲವಾರು ಅಲೋಪಥಿ ವೈದ್ಯರು, ಆರೋಗ್ಯ ಸಿಬ್ಬಂಧಿಗಳು  ಯೋಗ ಶಿಬಿರದಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷದೊಳಗೆ ಸಾವಿರಕ್ಕೂ ಹೆಚ್ಚು ಅಲೋಪಥಿ ವೈದ್ಯರನ್ನು ಆಯುರ್ವೇದಕ್ಕೆ ಕರೆತರುತ್ತೇನೆ ಎಂದಿದ್ದಾರೆ.  

ಅಲೋಪಥಿ ಔಷಧಿಗಳಿಂದ ಈ ವೈದ್ಯರು ಅಡ್ಡಪರಿಣಾಣ ಎದುರಿಸಿದ್ದಾರೆ. ಹೀಗಾಗಿ ಯೋಗ, ಆಯುರ್ವೇದತ್ತ ಆಕರ್ಷಿತರಾಗಿ ಗುಣಮುಖರಾಗಿದ್ದಾರೆ. ಜೀವನದಲ್ಲಿ ನೆಮ್ಮದಿ ಕಂಡುಕೊಂಡಿದ್ದಾರೆ. ಈಗಾಗಲೇ ಹಲವು ಅಲೋಪಥಿ ವೈದ್ಯರು ತಮ್ಮ ವೃತ್ತಿಗೆ ರಾಜೀನಾಮೆ ನೀಡಿ ಯೋಗ, ಆಯುರ್ವೇದತ್ತ ಆಗಮಿಸುತ್ತಿದ್ದಾರೆ ಎಂದು ರಾಮ್‌ದೇವ್ ಹೇಳಿದ್ದಾರೆ.

ಕ್ಷಮೆ ಯಾಚಿಸಿದ್ದ 24 ಗಂಟೆಯೊಳಗೇ ಮತ್ತೆ 25 ಪ್ರಶ್ನೆ ಎಸೆದ ಬಾಬಾ ರಾಮ್‌ದೇವ್!

ಮುಂದಿನ ಒಂದು ವರ್ಷದಲ್ಲಿ ಸಾವಿರಕ್ಕೂ ಹೆಚ್ಚು ಅಲೋಪಥಿ ವೈದ್ಯರನ್ನು ಪ್ರಕೃತಿ ಚಿಕಿತ್ಸಾ ವೈದ್ಯರನ್ನಾಗಿ ಪರಿವರ್ತಿಸುವ ಗುರಿ ಇಟ್ಟುಕೊಂಡಿದ್ದೇನೆ ಎಂದು ರಾಮ್‌ದೇವ್ ಹೇಳಿದರು. 

ಆಲೋಪಥಿ ಮೂರ್ಖತನದ ಪದ್ದತಿ, ಆಲೋಪಥಿ ವ್ಯರ್ಥ ಎಂಬ ವಿವಾದಾತ್ಮಕ ಹೇಳಿಕೆ ನೀಡಿದ ಬಾಬಾ ರಾಮ್‌ದೇವ್ ವಿರುದ್ಧ ವೈದ್ಯರ ಫೆಡರೇಶನ್, ಭಾರತೀಯ ವೈದ್ಯಕೀಯ ಸಂಘ ಸರೇದಂತೆ ಅಲೋಪಥಿಗಳು ಜೂನ್ 1 ರಂದು ದೇಶಾದ್ಯಂತ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ರಾಮ್‌ದೇವ್ ಭೇಷರತ್ ಕ್ಷಮೆ ಯಾಚಿಸಬೇಕು ಎಂದು ಪಟ್ಟು ಹಿಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಮನೆಯಲ್ಲಿ ಒಂದು ರೂಪಾಯಿ ಇಲ್ಲ ಆದ್ರೂ ಸಿಸಿಟಿವಿ ಯಾಕೆ ಹಾಕಿದ್ರಿ: ಸಿಕ್ಕಿದ್ದನ್ನು ದೋಚಿ ಪತ್ರ ಬರೆದಿಟ್ಟು ಹೋದ ಕಳ್ಳ