ಕರ್ನಾಟಕ-ತಮಿಳುನಾಡು ರಾಜ್ಯಗಳನ್ನು ಇನ್ನಿಲ್ಲದಂತೆ ಕಾಡಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಗುಂಡಿಕ್ಕಿ ಕೊಂದ ‘ಎನ್‌ಕೌಂಟರ್ ಸ್ಪೆಷಲಿಸ್ಟ್’, ತಮಿಳುನಾಡಿನ ತಿರುವಣ್ಣಾಮಲೈ ಎಡಿಎಸ್ಪಿ ಎಸ್. ವೆಲ್ಲದುರೈ ಅವರು ಗುರುವಾರ ಸೇವಾ ನಿವೃತ್ತಿ ಹೊಂದಿದ್ದಾರೆ. ಆದರೆ ನಿವೃತ್ತಿ ದಿನವೇ ಅವರನ್ನು ಅಮಾನತು ಮಾಡಿ, ನಂತರ ವಿರೋಧದ ಕಾರಣ ಅಮಾನತು ರದ್ದು ಮಾಡಿದ ಘಟನೆ ನಡೆದಿದೆ.
ಚೆನ್ನೈ: ಕರ್ನಾಟಕ-ತಮಿಳುನಾಡು ರಾಜ್ಯಗಳನ್ನು ಇನ್ನಿಲ್ಲದಂತೆ ಕಾಡಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಗುಂಡಿಕ್ಕಿ ಕೊಂದ ‘ಎನ್‌ಕೌಂಟರ್ ಸ್ಪೆಷಲಿಸ್ಟ್’, ತಮಿಳುನಾಡಿನ ತಿರುವಣ್ಣಾಮಲೈ ಎಡಿಎಸ್ಪಿ ಎಸ್. ವೆಲ್ಲದುರೈ ಅವರು ಗುರುವಾರ ಸೇವಾ ನಿವೃತ್ತಿ ಹೊಂದಿದ್ದಾರೆ. ಆದರೆ ನಿವೃತ್ತಿ ದಿನವೇ ಅವರನ್ನು ಅಮಾನತು ಮಾಡಿ, ನಂತರ ವಿರೋಧದ ಕಾರಣ ಅಮಾನತು ರದ್ದು ಮಾಡಿದ ಘಟನೆ ನಡೆದಿದೆ.
ವೆಲ್ಲದುರೈ ಅವರು 2013ರಲ್ಲಿ ಲಾಕ್ ಅಪ್ ಡೆತ್ ಆರೋಪ ಹೊಂದಿದ್ದರು. ಈ ಕಾರಣ ನೀಡಿ ಅವರನ್ನು ನಿವೃತ್ತಿ ದಿನವೇ ಅಮಾನತು ಮಾಡಲಾಯಿತು. ಆದರೆ ಕೊನೆಗೆ ಪ್ರತಿರೋಧದ ಕಾರಣ ಅಮಾನತು ರದ್ದು ಮಾಡಲಾಯಿತು. ಆದಾಗ್ಯೂ ಅವರ ನಿವೃತ್ತಿ ಫಂಡ್‌ನಲ್ಲಿನ 5 ಲಕ್ಷ ರು.ಗಳನ್ನು ಕಡಿತ ಮಾಡಿ ಶಿಸ್ತುಕ್ರಮ ಕೈಗೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು.
ಇಂಡಿಯಾ ಕೂಟಕ್ಕೆ 295 ಸ್ಥಾನ, ಅಧಿಕಾರ: ಮಲ್ಲಿಕಾರ್ಜುನ ಖರ್ಗೆ
ಎನ್‌ಕೌಂಟರ್ ಸ್ಪೆಷಲಿಸ್ಟ್ ಎಂದೇ ಖ್ಯಾತರಾಗಿದ್ದ ವೆಲ್ಲದುರೈ, 2003ರಲ್ಲಿ ಹಿಸ್ಟರಿ ಶೀಟರ್ ವೀರಮಣಿ ಎಂಬಾತನನ್ನು ಚೆನ್ನೈನಲ್ಲಿ ಗುಂಡಿಕ್ಕಿ ಸಾಯಿಸಿ ಪ್ರವರ್ಧಮಾನಕ್ಕೆ ಬಂದಿದ್ದರು. ನಂತರ 2004ರಲ್ಲಿ ವೆಲ್ಲದುರೈ ಗುಂಡಿಗೆ ವೀರಪ್ಪನ್ ಬಲಿಯಾಗಿದ್ದ.