
ಸ್ವಾತಂತ್ರ ದಿನಾಚರಣೆ ಹತ್ತಿರ ಬರುತ್ತಿದ್ದಂತೆ ಎಲ್ಲರಲ್ಲಿ ದೇಶಭಕ್ತಿ ಮತ್ತಷ್ಟು ತೀವ್ರವಾಗುತ್ತದೆ. ಈ ಬಾರಿ ಬೇರೆ ನಮ್ಮ ದೇಶ 75ನೇ ಸ್ವಾತಂತ್ರೋತ್ಸವದ ಸಂಭ್ರಮಾಚರಣೆಯಲ್ಲಿದ್ದು, ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಭಾಗವಾಗಿ ಯುವ ಸಮೂಹದಲ್ಲಿ ದೇಶಭಕ್ತಿ ತುಂಬುವ ಹಲವು ಕಾರ್ಯಕ್ರಮಗಳು ದೇಶಾದ್ಯಂತ ನಡೆಯುತ್ತಿವೆ. ಈ ನಡುವೆ ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬರು ಕಣ್ಣಿನಲ್ಲಿ ರಾಷ್ಟ್ರಧ್ವಜವನ್ನು ಅರಳಿಸಿದ್ದಾರೆ. ಕಲಾವಿದರೂ ಆಗಿರುವ ಯುಎಂಟಿ ರಾಜ ಎಂಬುವವರಿಗೂ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವಕ್ಕೆ ಏನಾದರೂ ವಿಭಿನ್ನವಾಗಿ ಮಾಡಬೇಕೆನಿಸಿದೆ. ಅದಕ್ಕಾಗಿ ಅವರು ತಮ್ಮ ಕಣ್ಣನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಕಣ್ಣಿನಲ್ಲಿ ರಾಷ್ಟ್ರಧ್ವಜವನ್ನು ಚಿತ್ರಿಸಿಕೊಂಡಿದ್ದಾರೆ.
ಸಾಮಾನ್ಯವಾಗಿ ಕಣ್ಣಿನೊಳಗೆ ಸಣ್ಣದಾದ ಧೂಳಿನ ಕಣ ಬಿದ್ದರು ನಮಗೆ ಸಹಿಸಲಾಗದು. ಕಣ್ಣಿನಲ್ಲಿ ಧಾರಾಕಾರ ನೀರು ಸುರಿಯುವುದರ ಜೊತೆಗೆ ಕಣ್ಣನ್ನು ತೆರೆಯಲಾಗದಷ್ಟು ಕಸಿವಿಸಿಯಾಗುತ್ತದೆ. ಆದರೆ ರಾಜು ಮಾತ್ರ ಇವುಗಳಿಗೆ ಏನು ತಲೆಕೆಡಿಸಿಕೊಳ್ಳದೇ ಕಣ್ಣಿನೊಳಗೆ ತ್ರಿವರ್ಣ ಬಿಡಿಸಿ ಎಲ್ಲರನ್ನು ಕಣ್ಣು ಬಿಟ್ಟು ನೋಡುವಂತೆ ಮಾಡಿದ್ದಾರೆ. ಬಾಲ್ಯದಲ್ಲಿ ಶಾಲಾ ದಿನಗಳಲ್ಲಿ ನಮ್ಮ ಕಣ್ಣುಗಳಂತೆ ನಮ್ಮ ತಾಯ್ನೆಲ್ಲವನ್ನು ನಾವು ರಕ್ಷಿಸಬೇಕು ಎಂಬ ಶಿಕ್ಷಕರು ಮಾತುಗಳನ್ನೇ ಇವರು ಸ್ಫೂರ್ತಿಯಾಗಿ ತೆಗೆದುಕೊಂಡಿದ್ದಾರೆ. ಇವರು ತಮ್ಮ ಕಣ್ಣಿನ ಗುಡ್ಡೆಯ ಸಮೀಪದ ಬಿಳಿಯ ಜಾಗದಲ್ಲಿ ರಾಷ್ಟ್ರಧ್ವಜವನ್ನು ಇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸುಮಾರು 20 ನಿಮಿಷಗಳ ಕಾಲ ಇವವರು ಕಣ್ಣಲ್ಲಿ ಈ ರಾಷ್ಟ್ರಧ್ವಜವನ್ನು ಇರಿಸಿಕೊಂಡಿದ್ದಾರೆ. ಆಗಸ್ಟ್ 5 ರಂದು ಅವರು ಈ ಸಾಧನೆಯನ್ನು ಮಾಡಿದ್ದಾರೆ.
ತಲೆ ನೋವು , ಕಣ್ಣು ನೋವಿದ್ದರೆ, ಇಲ್ಲಿದೆ ನೋಡಿ ಈಸಿ ಮನೆ ಮದ್ದು!
ನಾವು ಇಂದು ನಮ್ಮ ಸ್ವಾತಂತ್ರ್ಯವನ್ನು ಅನುಭವಿಸುತ್ತಿದ್ದೇವೆ ಎಂದರೆ ಇದಕ್ಕೆ ಕಾರಣ ನಮ್ಮ ವೀರಯೋಧರು, ಸ್ವಾತಂತ್ರ ಸೇನಾನಿಗಳು ಹಾಗೂ ಮಹಾನ್ ನಾಯಕರ ತ್ಯಾಗ ಅದಕ್ಕೆ ಕಾರಣ. ಅವರು ನಮಗಾಗಿ ಸಾಕಷ್ಟು ನೋವು ಅನುಭವಿಸಿರುವಾಗ ನಮಗೆ ಇಷ್ಟೊಂದು ಸಣ್ಣ ನೋವು ಅನುಭವಿಸುವುದು ಸಾಧ್ಯವಾಗದೆ ಎಂದು ಅವರು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ರೀತಿ ಮಾಡಲು ಅವರು ಮೊದಲಿಗೆ ಮೊಟ್ಟೆಯ ಬಿಳಿ ಬಣ್ಣದ ತೆಳುವಾದ ಪೊರೆಯನ್ನು ಕಣ್ಣೊಳಗೆ ಕಣ್ಣಿನ ಬಿಳಿ ಭಾಗದಲ್ಲಿ ಇರಿಸಿದ್ದಾರೆ ನಂತರ, ಅವರು ಅದರ ಮೇಲೆ ತ್ರಿವರ್ಣ ಧ್ವಜವನ್ನು ಹಾಕಿದರು. 16 ಬಾರಿ ಪ್ರಯತ್ನಿಸಿದ ನಂತರ ಈ ಸಾಹಸ ಯಶಸ್ವಿಯಾಯಿತು, ಮತ್ತು 20 ನಿಮಿಷಗಳ ನಂತರ ಅವರಿಗೆ ತಮ್ಮ ಕಣ್ಣುಗಳಲ್ಲಿ ಸುಡುವಂತಹ ಉರಿ ಉರಿಯಾದ ಅನುಭವ ಆಗಲು ಶುರುವಾಯಿತು. ನಂತರ ಅವರು ಕಣ್ಣಿಗೆ ನೀರು ಚಿಮುಕಿಸಿದರು. ಆದರೂ ಸ್ವಲ್ಪ ಹೊತ್ತುಗಳ ಕಾಲ ಇದೇ ರೀತಿ ಕಣ್ಣಿನಲ್ಲಿ ಏನೋ ಇರುವಂತೆ ಭಾಸವಾಗಲು ಶುರುವಾಯಿತು. ಈ ಪ್ರಯತ್ನವನ್ನು ಎಲ್ಲರೂ ಮಾಡದಂತೆ ಅವರು ಎಚ್ಚರಿಕೆ ನೀಡಿದ್ದಾರೆ.
ಕ್ಯಾನ್ಸರ್‌ನಿಂದ ಕಣ್ಣು ಕಳೆದುಕೊಂಡಿದ್ದ ಹುಡುಗಿಗೆ ಈಗ ಚಿನ್ನದ ಕಣ್ಣಿನ ರಂಗು
ಈ ವಿಚಾರಕ್ಕೆ ಸಂಬಂಧಿಸಿದಂತೆ ಕೊಯಮತ್ತೂರಿನ ಕುಣಿಯಮುತ್ತೂರಿನ ನೇತ್ರಾ ತಜ್ಞೆ ಡಾ.ಆರ್. ಕವಿಯಾ ಅವರು ಪ್ರತಿಕ್ರಿಯಿಸಿದ್ದು, ತಜ್ಞರ ಮೇಲ್ವಿಚಾರಣೆಯಿಲ್ಲದೆ ಸಾಮಾನ್ಯ ಜನರು ಇಂತಹ ಪ್ರಯತ್ನಗಳನ್ನು ಮಾಡಬಾರದು ಎಂದು ಹೇಳಿದ್ದಾರೆ. ರಾಜಾ ಅವರು ವೈದ್ಯರನ್ನು ಸಮಾಲೋಚಿಸಿದ ಬಳಿಕ ಈ ಸಾಹಸ ಮಾಡಿದ್ದಾರೆ. ಅವರು ಪ್ರಯತ್ನಿಸಿದ ರೀತಿ ಕಣ್ಣಿಗೆ ಸುರಕ್ಷಿತವಾಗಿದೆ. ಏಕೆಂದರೆ ಅವರು ಮೊಟ್ಟೆಯ ಬಿಳಿಯ ತೆಳುವಾದ ಪೊರೆಯನ್ನು ಬಳಸಿ ಈ ಸಾಹಸ ಮಾಡಿದ್ದಾರೆ. ಮತ್ತು ರಾಷ್ಟ್ರಧ್ವಜವನ್ನು ಕಾರ್ನಿಯಾದ ಮೇಲೆ ಅಲ್ಲ, ಸ್ಕ್ಲೆರಾದ ಮೇಲೆ ಇರಿಸಲಾಗಿದೆ ಎಂದು ಹೇಳಿದರು. ಮೊಟ್ಟೆಯ ಬಿಳಿ ಪೊರೆಯು ಕಣ್ಣಿನ ಮೇಲೆ ಇರಿಸಲು ಸುರಕ್ಷಿತವಾಗಿದೆ ಎಂದು ಹೇಳುವ ಅಧ್ಯಯನಗಳಿವೆ. ಆದರೆ, ಕಣ್ಣಿನೊಳಗೆ ಬಣ್ಣ ದುರ್ಬಲಗೊಂಡರೆ, ಅದೂ ಅಪಾಯವನ್ನುಂಟುಮಾಡುತ್ತದೆ ಎಂದು ಅವರು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ