ನಿಮಗೆ ಸಿಗ್ತಿರೋ ಉಚಿತ ಭಾಗ್ಯಗಳ ಬಗ್ಗೆ ಹೇಳ್ತೀರಾ, ಮಖ್ಯ ನ್ಯಾಯಮೂರ್ತಿಗೇ ಪ್ರಶ್ನಿಸಿದ ಜಯಂತ್‌ ಚೌಧರಿ!

By Santosh Naik  |  First Published Aug 12, 2022, 9:47 AM IST

ದೇಶದಲ್ಲಿ ರಾಜಕೀಯ ಪಕ್ಷಗಳು ಚುನಾವಣೆಯ ವೇಳೆಯಲ್ಲಿ ಘೋಷಣೆ ಮಾಡುವ ಉಚಿತ ಭಾಗ್ಯಗಳ ಬಗ್ಗೆ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಕಿಡಿಕಾರಿದ ಬೆನ್ನಲ್ಲಿಯೇ ರಾಜಕೀಯ ಪಕ್ಷಗಳು ಮುಖಂಡರು ಸ್ವತಃ ಸಿಜೆಐ ವಿರುದ್ಧವೇ ತಿರುಗಿಬಿದ್ದಿದ್ದಾರೆ. ಆರ್‌ಎಲ್‌ಡಿ ಮುಖ್ಯಸ್ಥ ಜಯಂತ್‌ ಚೌಧರಿ ಈ ವಿಚಾರವಾಗಿ ಸಿಜೆಐ ಎನ್‌ವಿ ರಮಣ ಅವರನ್ನೇ ಪ್ರಶ್ನೆ ಮಾಡಿದ್ದಾರೆ.
 


ನವದೆಹಲಿ (ಆ. 12): ರಾಜಕೀಯ ಪಕ್ಷಗಳು ಚುನಾವಣೆಯ ಸಮಯದಲ್ಲಿ ಘೋಷಣೆ ಮಾಡುವ ಉಚಿತ ಭಾಗ್ಯಗಳ ಕುರಿತಾಗಿ ದೇಶದಲ್ಲಿ ಸಂಚಲನ ಸೃಷ್ಟಿಯಾಗುವುದು ಖಚಿತವಾಗಿದೆ. ರಾಜಕೀಯ ಪಕ್ಷಗಳು ಘೋಷಿಸುವ ಉಚಿತ ಭಾಗ್ಯಗಳ ಕುರಿತು ಯಾವುದೇ ಕ್ರಮ ಕೈಗೊಳ್ಳದ ಕಾರಣಕ್ಕೆ ಕೇಂದ್ರ ಚುನಾವಣಾ ಆಯೋಗಕ್ಕೆ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಛೀಮಾರಿ ಹಾಕಿದ್ದರು. ಇದರ ಬೆನ್ನಲ್ಲಿಯೇ ಟ್ವೀಟ್‌ ಮಾಡಿರುವ ರಾಷ್ಟ್ರೀಯ ಲೋಕದಳದ ಮುಖ್ಯಸ್ಥ ಹಾಗೂ ಮಾಜಿ ಪ್ರಧಾನಿ ಚೌಧರಿ ಚರಣ್‌ ಸಿಂಗ್‌ ಅವರ ಅವರ ಪುತ್ರ ಜಯಂತ್‌ ಚೌಧರಿ, ಸಿಜೆಐ ವಿರುದ್ಧವೇ ವಾಗ್ದಾಳಿ ನಡೆಸಿದ್ದಾರೆ. "ದೇಶದ ಗೌರವಾನ್ವಿತ ಮುಖ್ಯ ನ್ಯಾಯಮೂರ್ತಿಗಳಿಗೆ ಯಾವೆಲ್ಲಾ ಉಚಿತ ಭಾಗ್ಯಗಳು ಸಿಗುತ್ತಿವೆ?' ಎಂದು ಟ್ವೀಟ್‌ ಮಾಡಿರುವ ಜಯಂತ್‌ ಚೌಧರಿ ಇದರಲ್ಲಿ ರೇವ್ಡಿ ಸಂಸ್ಕೃತಿ ಎನ್ನುವ ಅಕ್ಷರವನ್ನು ಹ್ಯಾಶ್‌ಟ್ಯಾಗ್‌ ಮಾಡಿದ್ದಾರೆ. ಚುನಾವಣಾ ಸಂದರ್ಭದಲ್ಲಿ ರಾಜಕೀಯ ಪಕ್ಷಗಳ ಉಚಿತ ಘೋಷಣೆ ಮತ್ತು ಭರವಸೆಗಳನ್ನು ಸುಪ್ರೀಂ ಕೋರ್ಟ್ ಗಂಭೀರ ವಿಷಯ ಎಂದು ಬಣ್ಣಿಸಿದ ನಂತರ ಆರ್‌ಎಲ್‌ಡಿ ಮುಖ್ಯಸ್ಥ ಈ ಟೀಕೆ ಮಾಆಡಿದ್ದಾರೆ. ಆದರೆ ಅದಕ್ಕಾಗಿ ರಾಜಕೀಯ ಪಕ್ಷಗಳ ನೋಂದಣಿ ರದ್ದುಗೊಳಿಸುವ ಮನವಿಯನ್ನು ನಾನು ಪರಿಶೀಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು.

ಕೆಳಹಂತದ ಜನರಿಗೆ ಸರ್ಕಾರ ಉಚಿತವಾಗಿ ಭಾಗ್ಯಗಳನ್ನು ಘೋಷಣೆ ಮಾಡಬೇಕಾಗುತ್ತದೆ: ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ನೇತೃತ್ವದ ಪೀಠವು ಈ ಉಚಿತ ಕೊಡುಗೆಗಳಿಂದ ಆರ್ಥಿಕತೆಯು ದುರ್ಬಲವಾಗುತ್ತಿದೆ. ಆದರೆ ಅದೇ ಕಡೆ, ಜನರ ಕಲ್ಯಾಣವನ್ನು ಸರ್ಕಾರ ನೋಡಿಕೊಳ್ಳಬೇಕು ಎಂದು ಹೇಳಿದರು.  ಉಚಿತವಾಗಿ ಭಾಗ್ಯಗಳನ್ನು ನೀಡುವ ರಾಜಕೀಯ ಪಕ್ಷಗಳ ನೋಂದಣಿಯನ್ನು ರದ್ದು ಮಾಡುವ ವಿಚಾರವನ್ನು ನಾನು ಪರಿಶೀಲನೆ ಮಾಡೋದಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತು.

What are the ‘freebies’ provided to the Honourable Chief Justice of India?

— Jayant Singh (@jayantrld)

Tap to resize

Latest Videos

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಜಯಂತ್‌ ಚೌಧರಿ ನ್ಯಾಯಾಲಯ ನೀಡಿರುವ ಹೇಳಿಕೆಗಳು ಸಾಹಸಮಯದ ರೀತಿಯಲ್ಲಿದ್ದು, ಸರಿಯಾದ ಮನೋಭಾವವನ್ನು ಹೊಂದಿಲ್ಲ ಎಂದು ಹೇಳಿದರು. ಸುಪ್ರೀಂ ಕೋರ್ಟ್‌ ವಿಮರ್ಶೆಯ ಬಗ್ಗೆ ಪ್ರತಿಕ್ರಿಯಿಸಿದ ಜಯಂತ್ ಚೌಧರಿ ಅವರು ಟ್ವೀಟ್‌ನಲ್ಲಿ, "ಸುಪ್ರೀಂ ಕೋರ್ಟ್‌ನ ಇತ್ತೀಚಿನ ಹೇಳಿಕೆಗಳು ಸಾಕಷ್ಟು ಸಾಹಸಮಯವಾಗಿವೆ ಮತ್ತು ಸರಿಯಾದ ಉತ್ಸಾಹದಲ್ಲಿಲ್ಲ. ನಮ್ಮ ಆರ್ಥಿಕತೆಯಲ್ಲಿ ತೀರಾ ಕೆಳಹಂತದಲ್ಲಿರುವ ಜನರಿಗೆ ಪಡಿತರ ಅಥವಾ ಹಣಕಾಸಿನ ನೆರವು ನೇರವಾಗಿ ತಲುಪುವ ಅಗತ್ಯವಿದೆ. ಆ ಮೂಲಕ ಅವರ ಬದುಕುವ ಹಕ್ಕು ಹಾಗೂ ಮೂಲಭೂತ ಹಕ್ಕುಗಳ ರಕ್ಷಣೆ ಸಾಧ್ಯವಾಗಲಿದೆ ಎಂದು ಹೇಳಿದ್ದಾರೆ.

ಚುನಾವಣೆಯಲ್ಲಿ ಬಿಟ್ಟಿ ಭಾಗ್ಯಗಳ ಘೋಷಣೆ, ಕೇಂದ್ರ ಚುನಾವಣಾ ಆಯೋಗಕ್ಕೆ ಸುಪ್ರೀಂ ಛೀಮಾರಿ!

ಬಿಜೆಪಿ ಬಗ್ಗೆ ಕಿಡಿ: ಚುನಾವಣಾ ಸಮಯದಲ್ಲಿ ಹೆಚ್ಚಿನ ಉಚಿತ ಭರವಸೆಗಳು ಪ್ರಣಾಳಿಕೆಯ ಭಾಗವಾಗಿಲ್ಲ ಎಂಬ ಕೇಂದ್ರ ಸರ್ಕಾರದ ಹೇಳಿಕೆಯ ಬಗ್ಗೆ ಆರ್‌ಎಲ್‌ಡಿ ಮುಖ್ಯಸ್ಥರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. 'ಬಹುಶಃ ಬಿಜೆಪಿ ಹೀಗೆ ಮಾಡುತ್ತಿರಬಹುದು. ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರ ಭಾಷಣಗಳಲ್ಲಿ ನಾವು ಹೇಳಿದ್ದ ಎಲ್ಲಾ ಘೋಷಣೆಗಳನ್ನು ನಮ್ಮ ಪ್ರಣಾಳಿಕೆಯಲ್ಲಿ ಇದ್ದ ಭರವಸೆಗಳೇ ಆಗಿದ್ದವು' ಎಂದು ಟ್ವೀಟ್‌ನಲ್ಲಿ ಬರೆದುಕೊಂಡಿದ್ದಾರೆ. "ಪಕ್ಷಗಳು ಪ್ರಣಾಳಿಕೆಯನ್ನು ಘೋಷಿಸದೆ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಿದಾಗ ಮಾತ್ರ ಈ ಸಮಸ್ಯೆಗಳು ಉದ್ಭವಿಸುತ್ತವೆ. ತಜ್ಞರು ಮತ್ತು ಸಾರ್ವಜನಿಕ ಪ್ರತಿಕ್ರಿಯೆಯನ್ನು ಆಧರಿಸಿದ ಪ್ರಣಾಳಿಕೆಯನ್ನು ಸಮಯಕ್ಕೆ ಸರಿಯಾಗಿ ಘೋಷಿಸಲಾಗಿದೆ, ಆದ್ದರಿಂದ ಮತದಾರರು ಪ್ರಮುಖ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಭರವಸೆಗಳನ್ನು ಪ್ರಜಾಪ್ರಭುತ್ವದ ಮತದಾನ ಪ್ರಕ್ರಿಯೆಯ ಪಾವಿತ್ರ್ಯತೆಯನ್ನು ಕಾಪಾಡಿಕೊಳ್ಳಲು ಅವಿಭಾಜ್ಯವಾಗಿದೆ!' ಎಂದು ಬರೆದಿದ್ದಾರೆ.

ಭಾರತದ 49ನೇ ಮುಖ್ಯ ನ್ಯಾಯಮೂರ್ತಿಯಾಗಿ ಯುಯು ಲಿಲಿತ್‌ ನೇಮಕ!

ಕೇಂದ್ರ ಸರ್ಕಾರದ ಕಲ್ಯಾಣ ನೀತಿಗಳು ಉದ್ದೇಶಿತ ಯೋಜನೆಗಳೊಂದಿಗೆ ಸಮಾಜದ ವಿವಿಧ ವಂಚಿತ ವರ್ಗಗಳನ್ನು ಸಬಲೀಕರಣಗೊಳಿಸುತ್ತಿದ್ದರೆ, ಕೆಲವು ಪಕ್ಷಗಳು ರಾಜಕೀಯ ಲಾಭಕ್ಕಾಗಿ ಎಲ್ಲರಿಗೂ ಉಚಿತ ಕೊಡುಗೆಗಳನ್ನು ನೀಡುವ ಮೂಲಕ ರೇವಡಿ ಸಂಸ್ಕೃತಿಯಲ್ಲಿ ತೊಡಗಿವೆ ಎಂದು ಬಿಜೆಪಿ ಗುರುವಾರ ಹೇಳಿಕೊಂಡಿದೆ, ಇದು ಆಮ್ ಆದ್ಮಿ ಪಕ್ಷವನ್ನು (ಎಎಪಿ) ಸ್ಪಷ್ಟವಾಗಿ ಗೇಲಿ ಮಾಡಿದೆ. .
 

click me!