ದ​ಲಿ​ತರಿಗೆ ಪ್ರವೇಶ ನೀಡಲು ನಿರಾ​ಕ​ರಿ​ಸಿದ ದೇಗು​ಲಕ್ಕೆ ಬೀಗ ಜಡಿದ ಜಿಲ್ಲಾಧಿಕಾರಿ

By Kannadaprabha NewsFirst Published Jun 8, 2023, 9:21 AM IST
Highlights

ಜಾತಿಯ ಕಾರಣಕ್ಕೆ ಮೇಲ್ವರ್ಗದ ಜನ ದಲಿತರನ್ನು ದೇಗುಲ ಪ್ರವೇಶಿಸಲು ಬಿಡದೇ ಅನಾಗರಿಕವಾಗಿ ವರ್ತಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಚೆನ್ನೈ: ಶತಮಾನಗಳು ಎಷ್ಟೇ ಕಳೆದರೂ ನಮ್ಮ ಸಮಾಜದಲ್ಲಿರುವ ಜಾತಿಬೇಧ ಇನ್ನು ಕಡಿಮೆ ಆಗಿಲ್ಲ, ಕೆಳವರ್ಗದ ಸಮುದಾಯ ಇಂದಿಗೂ ಹಲವು ಕಡೆ ಜಾತಿಯೆಂಬ ಭೂತದಿಂದ ಸಂಕಟ ಪಡುತ್ತಿದೆ. ಜಾತಿಯ ಕಾರಣಕ್ಕೆ ಮೇಲ್ವರ್ಗದ ಜನ ದಲಿತರನ್ನು ದೇಗುಲ ಪ್ರವೇಶಿಸಲು ಬಿಡದೇ ಅನಾಗರಿಕವಾಗಿ ವರ್ತಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೆಲ್ಪತಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇದಕ್ಕೆ ಈಗ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಅಲ್ಲದೇ ಈ ದೇಗುಲಕ್ಕೆ ಜಿಲ್ಲಾಧಿಕಾರಿಗಳು ಬೀಗ ಜಡಿದಿದ್ದಾರೆ.

ದಲಿತರನ್ನು ದೇಗುಲದ ಒಳಗೆ ಪ್ರವೇಶಿಸಲು ಮೇಲ್ವರ್ಗದವರು ನಿರಾಕರಿಸಿದರೆಂಬ ಕಾರಣಕ್ಕೆ ಜಿಲ್ಲಾಧಿಕಾರಿಗಳು ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೆಲ್ಪತಿ ಗ್ರಾಮದ ದೇವಸ್ಥಾನವನ್ನೇ ಬಂದ್‌ ಮಾಡಿಸಿದ್ದಾರೆ. ಇಲ್ಲಿನ ಧರ್ಮರಾಜ ದ್ರೌಪದಿ ದೇವಸ್ಥಾನದಲ್ಲಿ ದಲಿತರು ದೇಗುಲದ ಒಳಗೆ ಪ್ರವೇಶ ಮಾಡಲು ಯತ್ನಿಸಿದ್ದರು. ಆದರೆ ಅವರು ಕೆಳಜಾತಿಯವರು ಎಂಬ ಕಾರಣಕ್ಕೆ ಮೇಲ್ವರ್ಗದವರು ಪ್ರವೇಶ ನಿರ್ಬಂಧಿಸಿದ್ದರು. ಈ ಮಾಹಿತಿ ತಿಳಿದ ಬಳಿಕ ಜಿಲ್ಲಾಧಿಕಾರಿ ರವಿಚಂದ್ರನ್‌ ಅವರು ದೇಗುಲವನ್ನು ಬಂದ್‌ ಮಾಡಿಸಿದ್ದಾರೆ. ದೇಗುಲದ ಗೋಡೆ ಮೇಲೆ,‘ಸಮಸ್ಯೆ ಇತ್ಯರ್ಥವಾಗುವವರೆಗೂ ದೇಗುಲದ ಬಾಗಿಲುಗಳನ್ನು ತೆರೆಯಲಾಗುವುದಿಲ್ಲ’ ಎಂದು ನೋಟಿಸ್‌ ಅಂಟಿಸಿದ್ದಾರೆ.

ನಿಷೇಧ ಮಾಡುವ ಬದಲು ಆರೆಸ್ಸೆಸ್‌ನಲ್ಲಿರುವ ಶೂದ್ರ, ದಲಿತರನ್ನ ಸೆಳೆಯಬೇಕು: ಜಾರಕಿಹೊಳಿ

ವರನಿಗೆ ಹಲ್ಲೆ ಮಾಡಿ ಕುದುರೆಯಿಂದ ಕೆಳಗಿಳಿಸಿದ ಮೇಲ್ಜಾತಿ ಯುವಕರು!

 ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಮದುವೆ ಮೆರವಣಿಗೆಯ ಮೇಲೆ ದಾಳಿ ಮಾಡಿದ ಕೆಲ ವ್ಯಕ್ತಿಗಳು ರಾಡ್‌ಗಳು ಹಾಗೂ ಸ್ಟಿಕ್‌ಗಳಿಂದ ಕುದುರೆಯ ಮೇಲೆ ಕುಳಿತಿದ್ದ ವರನ ಮೇಲೆ ಹಲ್ಲೆ ನಡೆಸಿದ್ದಾರೆ. ದಲಿತ ವ್ಯಕ್ತಿಯಾಗಿದ್ದ ಕಾರಣಕ್ಕೆ ವರ ಕುದುರೆಯ ಮೇಲೆ ಮೆರವಣಿಗೆ ಹೋಗುವಂತಿಲ್ಲ ಎಂದು ಈ ವೇಳೆ ಹೇಳಲಾಗಿದೆ. ಮೇ 4 ರಂದು ಸೋಹಲ್ಲಾ ಜಾತವ್ ಬಸ್ತಿಯಲ್ಲಿರುವ ಸದರ್ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆಘಾತಕಾರಿ ಘಟನೆ ನಡೆದಿದ್ದು, 24 ವರ್ಷದ ವರನ ಮೇಲೆ ಕನಿಷ್ಠ 25 "ಮೇಲ್ಜಾತಿ" ಪುರುಷರು ಹಲ್ಲೆ ನಡೆಸಿದ್ದಾರೆ. ವರನ ಮೇಲೆ ಹಲ್ಲೆ ನಡೆಸಿದ್ದು ಮಾತ್ರವಲ್ಲದೆ, ಮದುವೆ ಮೆರವಣಿಗೆಯಲ್ಲಿ ಹಾಜರಿದ್ದ ಮಹಿಳಾ ಅತಿಥಿಗಳಿಗೆ ಕಿರುಕುಳವನ್ನೂ ನೀಡಿದ್ದಾರೆ. ವರನ ಅತ್ತೆ ಗೀತಾದೇವಿ ನೀಡಿದ ದೂರಿನ ಆಧಾರದ ಮೇಲೆ ಮೇ 9 ರಂದು ಘಟನೆಗೆ ಸಂಬಂಧಿಸಿದಂತೆ ಎಫ್‌ಐಆರ್ ದಾಖಲಿಸಲಾಗಿದೆ. “ನನ್ನ ಅಳಿಯ ಮತ್ತು ಅವನೊಂದಿಗೆ ಬಂದ ಅತಿಥಿಗಳು ಮದುವೆಯ ಸ್ಥಳಕ್ಕೆ ಪ್ರವೇಶಿಸಿದ ಕೂಡಲೇ, ಅವರ ಮೇಲೆ ಕನಿಷ್ಠ 25 ಜನರು, ಮುಖ್ಯವಾಗಿ ಠಾಕೂರ್‌ಗಳು ದಾಳಿ ಮಾಡಿದರು. ಅವರು ನನ್ನ ಅಳಿಯನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ, ‘ನಮ್ಮ ಹಳ್ಳಿಯಲ್ಲಿ ದಲಿತರ ಮದುವೆಗಳಲ್ಲಿ ಕುದುರೆ ಸವಾರಿ ಮಾಡುವುದಿಲ್ಲ, ನಿಮಗೆ ಇದನ್ನು ಮಾಡಲು ಎಷ್ಟು ಧೈರ್ಯ?’ ಎಂದು ಪ್ರಶ್ನೆ ಮಾಡಿದ್ದಾರೆ. ಅದಲ್ಲದೆ, ಮದುವೆ ವಿದ್ಯುತ್‌ ಸರಬರಾಜಿಗೂ ಅಡ್ಡಿಪಡಿಸಿದ್ದಾರೆ' ಎಂದು ವರದಿಯಾಗಿದೆ.

ದಲಿತರು ಬಿಜೆಪಿ ಕಡೆ ತಿರುಗಿಯೂ ನೋಡಬೇಡಿ: ಸಿದ್ದರಾಮಯ್ಯ

ಘಟನೆಯ ಕುರಿತು ಹೆಚ್ಚಿನ ವಿವರಗಳನ್ನು ನೀಡಿದ ವರನ ಸಹೋದರ ಮನೀಶ್ ಕುಮಾರ್, ಅವರನ್ನು ತಡೆಯಲು ಎಲ್ಲಾ ಪ್ರಯತ್ನಗಳನ್ನು ಮಾಡಿದರೂ ಗುಂಪು ದೊಣ್ಣೆಗಳಿಂದ ಥಳಿಸಿತು ಎಂದು ಹೇಳಿದರು. "ನಮ್ಮ ಕುಟುಂಬದವರೊಬ್ಬರು ಪೊಲೀಸರಿಗೆ ಕರೆ ಮಾಡಿದ ಬಳಿಕ ಸ್ಥಳಕ್ಕೆ ಬಂದ ಅವರು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು" ಎಂದು ಅವರು ಹೇಳಿದರು.  ಯೋಗೇಶ್ ಠಾಕೂರ್, ರಾಹುಲ್ ಕುಮಾರ್, ಸೋನು ಠಾಕೂರ್ ಮತ್ತು ಕುನಾಲ್ ಠಾಕೂರ್ ಮತ್ತು ಇತರ ಹಲವರ ವಿರುದ್ಧ ಎಸ್‌ಸಿ/ಎಸ್‌ಟಿ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಲ್ಲಾ ಆರೋಪಿಗಳ ವಿರುದ್ಧ ಭಾರತೀಯ ದಂಡ ಸಂಹಿತೆಯ (ಐಪಿಸಿ) ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಎಚ್‌ಒ ನೀರಜ್ ಶರ್ಮಾ ತಿಳಿಸಿದ್ದಾರೆ.

 

click me!