ದೇವಸ್ಥಾನ ಸೇರಿ ಹಿಂದೂಗಳೇ ವಾಸವಿರುವ ಇಡೀ ಹಳ್ಳಿಯನ್ನೇ ಕಬಳಿಸಿದ ಮುಸ್ಲಿಂ ವಕ್ಫ್ ಬೋರ್ಡ್!

By Suvarna News  |  First Published Sep 13, 2022, 7:29 PM IST

ಖಾಲಿ ಜಾಗ ಕಬಳಿಕೆ, ಮಾಲೀಕರಿಲ್ಲದೆ ಇದ್ದ ಸ್ಥಳ ಕಬಳಿಕೆ ಸೇರಿದಂತೆ ಹಲವು ಪ್ರಕರಣಗಳನ್ನು ನೋಡಿದ್ದೇವೆ. ಆದರೆ ಊರಿಗೆ ಊರನ್ನೇ ಕಬಳಿಸಿದ  ಉದಾಹರಣೆ ಇದೆಯಾ? ಇದು ಹೇಗೆ ಸಾಧ್ಯ ಅಂತಾ ಪ್ರಶ್ನೆ ಮಾಡಬೇಡಿ. 1,500 ವರ್ಷಗಳ ಹಿಂದಿನ ದೇವಸ್ಥಾನ, ದೇವಸ್ಥಾನದ 400 ಏಕರೆ, 100ಕ್ಕೂ ಹೆಚ್ಟು ಹಿಂದೂ ಕುಟುಂಬಗಳು ವಾಸಿಸುತ್ತಿರುವ ಹಳ್ಳಿಯನ್ನೇ ಮುಸ್ಲಿಂ ವಕ್ಫ್ ಬೋರ್ಡ್ ಸ್ವಾಹ ಮಾಡಿದೆ. 


ಚೆನ್ನೈ(ಸೆ.13): ಮೊಘಲರ ದಾಳಿ, ಸುಲ್ತಾನರ ದಾಳಿ, ಮೊಹಮ್ಮದ್ ಘಜ್ನಿ, ಮೊಹಮ್ಮದ್ ಘೋರಿ ಭಾರತದ ಮೇಲೆ ದಾಳಿ ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡಿ ಅಲ್ಲಿ ಮಸೀದಿ, ದರ್ಗಾಗಳನ್ನು ಕಟ್ಟಿದ ಹಲವು ಉದಾಹರಣೆಗಳಿವೆ. ಇಡೀ ಪಟ್ಟಣವನ್ನೇ ದೋಚಿದ ಕಟು ಸತ್ಯ ಈಗ ಇತಿಹಾಸ. ಆದರೆ ಇದೀಗ ತಮಿಳುನಾಡಿನ ಮುಸ್ಲಿಂ ವಕ್ಫ್ ಬೋರ್ಡ್ ಹಿಂದೂಗಳು ಪ್ರಾಬಲ್ಯವಿರುವ ಇಡೀ ಊರನ್ನೇ ಕಬಳಿಸಿ ತಮ್ಮದಾಗಿಸಿಕೊಂಡ ಘಟನೆ ಬೆಳಕಿಗೆ ಬಂದಿದೆ. ಈ ಊರಿನಲ್ಲಿರುವ 1,500 ವರ್ಷಗಳ ಹಳೆ ದೇವಸ್ಥಾನ, ದೇವಾಲಯದ 400 ಏಕರೆ ಜಾಗ, 100ಕ್ಕೂ ಹೆಚ್ಚು ಹಿಂದೂ ಕುಟುಂಬಗಳ ಆಸ್ತಿ, ಮನೆ ಎಲ್ಲವೂ ಸದ್ದಿಲ್ಲದೆ ವಕ್ಫ್ ಬೋರ್ಡ್ ಖಾತೆ ಸೇರಿದೆ. ಸ್ವಾತಂತ್ರ್ಯ ನಂತರದಲ್ಲಿ ನಡೆದ ಅತೀ ದೊಡ್ಡ ಒತ್ತುವರಿ ನಡೆದಿರುವುದು ತಮಿಳುನಾಡಿನ ತಿರುಚಿರಾಪಲ್ಲಿ ಜಿಲ್ಲೆಯ ತಿರುಚೇಂದುರೈ ಗ್ರಾಮದಲ್ಲಿ. ಅತ್ಯಂತ ಪುರಾತನ ಮನೆಂದಿಯಾವಲ್ಲಿ ಸಮೇತಾ ಚಂದ್ರಶೇಖರ ಸ್ವಾಮಿ ದೇವಸ್ಥಾನ ಕೂಡ ಇದೀಗ ವಕ್ಫ್ ಬೋರ್ಡ್ ಆಸ್ತಿ.  ಈ ಗ್ರಾಮದ ನಿವಾಸಿ ತನ್ನ ಜಮೀನನ್ನು ಮಾರಾಟಕ್ಕೆ ಮುಂದಾದಾಗ ಈ ವಿಚಾರ ಬಯಲಾಗಿದೆ. ಇದೀಗ ಇಡೀ ಗ್ರಾಮಸ್ಥರ ನೆಮ್ಮದಿ ಹಾಳಾಗಿದೆ. 

ತಿರುಚೇಂದುರೈ ಗ್ರಾಮದ(Thiruchendurai village) ನಿವಾಸಿ ರಾಜಗೋಪಾಲ್ ಕೃಷಿ ಭೂಮಿ ಹೊಂದಿದ್ದಾರೆ.  ರಾಜಗೋಪಾಲ ಕೃಷಿ ಮಾಡುತ್ತಿದ್ದಾರೆ. ಇದೀಗ ಆರ್ಥಿಕ ಕಾರಣಕ್ಕಾಗಿ ತಮ್ಮ ಕೃಷಿ ಭೂಮಿಯಲ್ಲಿನ 1 ಏಕರೆ 2 ಸೆಂಟ್ ಜಾದಾವನ್ನು ರಾಜೇಶ್ವರಿ ಎಂಬುವರಿಗೆ ಮಾರಾಟ ಮಾಡಲು ಮುಂದಾಗಿದ್ದಾರೆ. ತಮಲ್ಲಿರುವ ಆರ್‌ಟಿಸಿ, ಪಹಣಿ ಹಿಡಿದು ಸಬ್ ರಿಜಿಸ್ಟ್ರಾರ್ ಕಚೇರಿಗೆ ತೆರಳಿದ ರಾಜಗೋಪಾಲ್‌ಗೆ ಆಘಾತವಾಗಿದೆ. ಈ ಭೂಮಿಯನ್ನು ಮಾರಾಟ ಮಾಡಲು ಸಾಧ್ಯವಿಲ್ಲ ಅನ್ನೋ ಕಚೇರಿ ಅಧಿಕಾರಿಗಳ ಉತ್ತರಕ್ಕೆ ರಾಜಗೋಪಾಲ್ ದಂಗಾಗಿದ್ದಾರೆ. ಕಾರಣ ಕೇಳಿದರೆ, ಇದು ವಕ್ಫ್ ಬೋರ್ಡ್(Tamil Nadu Waqf board) ಆಸ್ತಿಯಾಗಿದೆ. ಇದನ್ನು ನೀವು ಮಾರಟ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

Tap to resize

Latest Videos

ಚಾಮರಾಜಪೇಟೆ ಈದ್ಗಾ ಮೈದಾನ ವಿವಾದ: ವಕ್ಫ್‌ ಬೋರ್ಡ್‌ಗೆ ಬಿಬಿಎಂಪಿ ಮತ್ತೊಮ್ಮೆ ನೋಟಿಸ್!

1992ರಲ್ಲಿ ರಾಜಗೋಪಾಲ್ ಈ ಭೂಮಿಯನ್ನು(Property) ಖರೀದಿಸಿದ್ದರು. ಅದಕ್ಕಿಂತ ಮೊದಲೇ ಅಂದರೆ ಸ್ವಾತಂತ್ರ್ಯ ಪೂರ್ವದಿಂದಲೂ ಇಲ್ಲಿ ಹಲವು ಕುಟುಂಬಗಳು ಕೃಷಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದೆ. ತನ್ನ ಜಮೀನು ಮಾರಲು ವಕ್ಫ್(Muslim board) ಅನುಮತಿ ಯಾಕೆ ಎಂದು ರಾಜಗೋಪಾಲ್ ಮತ್ತೆ ಮತ್ತೆ ಪಶ್ನಿಸಿದ್ದರೆ. ಈ ವೇಳೆ ಕಚೇರಿ ಅಧಿಕಾರಿಗಳು ದಾಖಲೆ ತೆಗೆದು ತೋರಿಸಿದ್ದಾರೆ. ಇಡೀ ಗ್ರಾಮವೇ ಮುಸ್ಲಿಂ ವಕ್ಫ್ ಬೋರ್ಡ್ ಕಬಳಿಸಿರುವು ಬೆಳಕಿಗೆ ಬಂದಿದೆ. 

ಈ ವಿಚಾರವನ್ನು ರಾಜಗೋಪಾಲ್ ಗ್ರಾಮಸ್ಥರಿಗೆ ತಿಳಿಸಿದ್ದರೆ. ಈ ಗ್ರಾಮದಲ್ಲಿರುವ ಸರಿಸುಮಾರು 1,000 ಏಕರೆಗೂ ಹೆಚ್ಚು ಜಾಗವನ್ನು ವಕ್ಫ್ ಬೋರ್ಡ್ ಕಬಳಿಸಿದೆ. ಇದರಲ್ಲಿ 1,500 ವರ್ಷಗಳ ಹಿಂದಿನ ಮನೆಂದಿಯಾವಲ್ಲಿ ಸಮೇತಾ ಚಂದ್ರಶೇಖರ ಸ್ವಾಮಿ ದೇವಸ್ಥಾನ(Hindu Temple) ಕೂಡ ಸೇರಿದೆ. ಈ ದೇವಸ್ಥಾನದ ಟ್ರಸ್ಟ್‌ ಬಳಿರುವ 400 ಏಕರೆ ಆಸ್ತಿ ಕೂಡ ಇದೀಗ ವಕ್ಫ್ ಬೋರ್ಡ್ ಪಾಲಾಗಿದೆ. 

ಮತ್ತೆ ಸ್ಪೀಕರ್ ಸದ್ದು, ಸರ್ಕಾರದ ಆದೇಶ ಆಜಾನ್​ಗೆ ಅನ್ವಯ ಆಗಲ್ಲ ಎಂದ ವಕ್ಫ್ ಮಂಡಳಿ ಅಧ್ಯಕ್ಷ

ಗ್ರಾಮಸ್ಥರು ಆತಂಕ ಹೆಚ್ಚಾಗಿದೆ. ಇಡೀ ಗ್ರಾಮಸ್ಥರು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ತಮ್ಮಲ್ಲಿರುವ ದಾಖಲೆ ಪತ್ರಗಳನ್ನು ನೀಡಿ ದೂರು ನೀಡಿದ್ದಾರೆ. ಈ ಕುರಿತು ಪ್ರತಿಭಟನೆ ನಡೆಸಿದ್ದಾರೆ. ಈ ವಿಚಾರ ತಿಳಿದ ಬಿಜೆಪಿ ಸ್ಥಳೀಯ ಮುಖಂಡ(BJP leader) ತಿರಿಚಿ ಅಲ್ಲೂರ್ ಪ್ರಕಾಶ್ ಸ್ಥಳಕ್ಕೆ ಆಗಮಿಸಿ ಇದು ವಕ್ಫ್ ಕಬಳಿಸಿದ್ದು ಹೇಗೆ ಎಂದು ಪ್ರಶ್ನಿಸಿದ್ದಾರೆ. 1,500 ವರ್ಷಗಳ ಹಳೆಯ ದೇವಸ್ಥಾನ, ಹಿಂದೂಗಳೇ ವಾಸಿಸುತ್ತಿರುವ ಈ ಜಾಗದಲ್ಲಿ ವಕ್ಫ್ ಬೋರ್ಡ್‌ಗೆ ಯಾವ ರೀತಿ ಸಂಬಂಧ ಇದೆ? ಎಂದು ಪ್ರಶ್ನಿಸಿದ್ದಾರೆ. 

ಇತ್ತ ಜಿಲ್ಲಾಧಿಕಾರಿ ಈ ಪ್ರಕರಣ ದಾಖಲೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಆದರೆ ಗ್ರಾಮಸ್ಥರ ಆತಂಕ ತಗ್ಗಿಲ್ಲ. ವಕ್ಫ್ ಬೋರ್ಡ್ ಈ ಆಸ್ತಿ ಮೇಲೆ ಹಕ್ಕು ಹೊಂದಿದೆ. ನಾವು ಬೀದಿ ಪಾಲುಗಲಿದ್ದೇವೆ ಅನ್ನೋ ಆತಂಕ ಕಾಡುತ್ತಿದೆ. ಇದೀಗ ಗ್ರಾಮಸ್ಥರು ಹೋರಾಟ ಆರಂಭಿಸಿದ್ದಾರೆ. 

click me!