ಮೃತ ತಾಯಿಯನ್ನು ತಬ್ಬಿ ಮಲಗಿದ್ದ ಕೋತಿ ಮರಿಯ ರಕ್ಷಣೆ

By Anusha Kb  |  First Published Apr 13, 2022, 7:58 PM IST
  • ತಾಯಿ ಸಾವಿನ ಅರಿವಿಲ್ಲದ ಕೋತಿ
  • ಮೃತ ತಾಯಿಯನ್ನು ತಬ್ಬಿಕೊಂಡಿದ್ದ ಮರಿಯ ರಕ್ಷಣೆ
  • ವಿಡಿಯೋ ಶೇರ್‌ ಮಾಡಿದ ಐಎಎಸ್‌ ಅಧಿಕಾರಿ

ತಾಯಿ ಮೃತಪಟ್ಟಿದೆ ಎಂಬುದರ ಅರಿವಿಲ್ಲದ ತನ್ನ ಮೃತ ತಾಯಿಯನ್ನು ತಬ್ಬಿ ಹಿಡಿದುಕೊಂಡಿದ್ದ ಕೋತಿ ಮರಿಯೊಂದನ್ನು ತಮಿಳುನಾಡಿನ ಪರಿಸರ ಸ್ವಯಂಸೇವಕರು ರಕ್ಷಿಸಿದ್ದಾರೆ. ಮೃತ ತಾಯಿಯಿಂದ ಬೇರ್ಪಡಿಸಲ್ಪಟ್ಟ ಪುಟ್ಟ ಕೋತಿ ಮರಿಗೆ ಹಾಲು ಕುಡಿಸುತ್ತಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಲಾಗಿದೆ. 

ಭಾರತೀಯ ಆಡಳಿತ ಸೇವೆ ಅಧಿಕಾರಿ (Indian Administrative Officer) ಸುಪ್ರಿಯಾ ಸಾಹು (Supriya Sahu) ಅವರು ಈ  21 ಸೆಕೆಂಡುಗಳ ವಿಡಿಯೋವನ್ನು ತಮ್ಮ ಟ್ವಿಟ್ಟರ್‌ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ಮರಿ ಕೋತಿಯು ವ್ಯಕ್ತಿಯೊಬ್ಬರ ತೊಡೆಯ ಮೇಲೆ ಕುಳಿತು ಫೀಡಿಂಗ್ ಬಾಟಲಿಯಿಂದ  ಹಾಲು ಕುಡಿಯುವುದನ್ನು ಈ ವಿಡಿಯೋ ತೋರಿಸುತ್ತಿದೆ. ಮರಿ ಕೋತಿಯು ತನ್ನ ಮೃತ ತಾಯಿಯನ್ನು ತಬ್ಬಿಕೊಂಡಿರುವುದನ್ನು ಕಂಡು  ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿ (Besant Memorial Animal Dispensary) ಸ್ವಯಂಸೇವಕರು ಅದನ್ನು ರಕ್ಷಿಸಿದರು ಎಂದು ಸುಪ್ರಿಯಾ ಸಾಹು ಬರೆದುಕೊಂಡಿದ್ದಾರೆ. 

Kudos to volunteers at the Besant Memorial Animal Dispensary for saving this baby monkey who was found hugging her dead mother. Thank you for your service. pic.twitter.com/P8ZgeC4JMv

— Supriya Sahu IAS (@supriyasahuias)

Tap to resize

Latest Videos

'ತನ್ನ ಮೃತ ತಾಯಿಯನ್ನು ತಬ್ಬಿಕೊಳ್ಳುತ್ತಿರುವ ಈ ಮರಿ ಕೋತಿಯನ್ನು ರಕ್ಷಿಸಿದ್ದಕ್ಕಾಗಿ ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಯ ಸ್ವಯಂಸೇವಕರಿಗೆ  ವಂದನೆಗಳು, ನಿಮ್ಮ ಸೇವೆಗೆ ಧನ್ಯವಾದಗಳು ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ.  ಮರಿ ಕೋತಿಯನ್ನು ರಕ್ಷಿಸಿದ ಸ್ವಯಂಸೇವಕರನ್ನು ನೆಟ್ಟಿಗರು ಶ್ಲಾಘಿಸಿದ್ದಾರೆ. ಅಮೂಲ್ಯ ಜೀವವನ್ನು ಉಳಿಸಿದ ಸ್ವಯಂಸೇವಕರಿಗೆ ಹ್ಯಾಟ್ಸ್ ಆಫ್. ಮಾಮ್ (sic) ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು, ಎಂದು ಬಳಕೆದಾರರು ಕಾಮೆಂಟ್ ಮಾಡಿದ್ದಾರೆ. ಸ್ಥಳೀಯ ವರದಿಗಳ ಪ್ರಕಾರ ಬೆಸೆಂಟ್ ಮೆಮೋರಿಯಲ್ ಅನಿಮಲ್ ಡಿಸ್ಪೆನ್ಸರಿಯು ಚೆನ್ನೈನ ಬೆಸೆಂಟ್ ನಗರದಲ್ಲಿ ಗಾಯಗೊಂಡ ಮತ್ತು ಅನಾರೋಗ್ಯಕ್ಕೆ ಒಳಗಾದ ಪ್ರಾಣಿಗಳ ಪುನರ್ವಸತಿಗಾಗಿ ಸ್ಥಾಪಿಸಲಾದ ಸಂಸ್ಥೆಯಾಗಿದೆ.

ಯೂಟ್ಯೂಬ್‌ ಸ್ಟಾರ್‌ನನ್ನು ಬೆನ್ನಟ್ಟಿ ದೋಚಿದ ಕೋತಿಗಳು... ವಿಡಿಯೋ ನೋಡಿ

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಪೊಲೀಸ್‌ ಒಬ್ಬರು ನೀರಾಡಿಕೆಯಿಂದ ಬಳಲಿ ಬೆಂಡಾಗಿದ್ದ ಕೋತಿಯೊಂದಕ್ಕೆ ನೀರುಣಿಸುವ ಮೂಲಕ ಮಾನವೀಯತೆ ಮೆರೆದಿದ್ದರು. ಆ ದೃಶ್ಯದ ವಿಡಿಯೋ ಆಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿತ್ತು. ಹೇಳಿ ಕೇಳಿ ಇದು ಬಿರು ಬೇಸಿಗೆ. ಬುದ್ಧಿವಂತ ಪ್ರಾಣಿ ಎನಿಸಿರುವ ಮನುಷ್ಯರೇನೋ ಶುದ್ಧ ನೀರನ್ನು ಎಲ್ಲಿಂದಾದರು ತಂದು ಕುಡಿಯುತ್ತಾರೆ. ಆದರೆ ಪ್ರಾಣಿ ಪಕ್ಷಿಗಳು ಏನು ಮಾಡಬೇಕು. ಬೇಸಿಗೆಯಲ್ಲಿ ಸರಿಯಾದ ನೀರು ಸಿಗದೆ ಬಿಸಿಲಿನ ದಾಹ ತಾಳಲಾಗದೇ ಅನೇಕ ಸಣ್ಣಪುಟ್ಟ ಪಕ್ಷಿಗಳು ತಮ್ಮ ಪ್ರಾಣವನ್ನೇ ಬಿಡುತ್ತವೆ. ಈ ಕಾರಣಕ್ಕೆ ಬೇಸಿಗೆಯಲ್ಲಿ ಮನೆಯ ಮಹಡಿಗಳಲ್ಲಿ ಅಂಗಳದಲ್ಲಿ ಅಲಲ್ಲಿ ನೀರು ಇಟ್ಟು ಜೀವ ಸಂಕುಲದ ವೈವಿಧ್ಯತೆಗೆ ಸಾಕ್ಷಿಯಾಗಿರುವ ಪ್ರಾಣಿ ಪಕ್ಷಿಗಳಿಗೂ ಬದುಕಲು ಅವಕಾಶ ನೀಡಿ ಎಂದು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಪರಿಸರ ಪ್ರೇಮಿಗಳು ಕರೆ ನೀಡುತ್ತಾರೆ. 

ಬೆಕ್ಕಿನೊಂದಿಗೆ ಪ್ರೀತಿಯಲ್ಲಿ ಬಿದ್ದ ಕೋತಿ: ತಬ್ಬಿ ಕಿಸ್ ಮಾಡಲೆತ್ನಿಸಿದ ವಾನರ


ಇನ್ನು ಕೋತಿಗೆ ಪೊಲೀಸ್ ಸಿಬ್ಬಂದಿ ನೀರು ಕುಡಿಸುತ್ತಿರುವ ದೃಶ್ಯ ಸೆರೆಯಾಗಿದ್ದು, ಮುಂಬೈ-ಅಹಮದಾಬಾದ್ (Mumbai-Ahmedabad route) ಮಾರ್ಗದ ಮಲ್ಶೇಜ್ ಘಾಟ್‌ನಲ್ಲಿ (Malshej ghat). ಇಲ್ಲಿ ಸೇವೆಯಲ್ಲಿರು ಟ್ರಾಫಿಕ್ ಪೊಲೀಸರು ಹತ್ತಿರದ ಕಾಡುಗಳಿಂದ ರಸ್ತೆಯಲ್ಲಿ ಸಾಗುವ ಪ್ರಾಣಿಗಳಿಗೆ ನೀಡಲು ಹಲವಾರು ನೀರಿನ ಬಾಟಲಿಗಳನ್ನು ಒಯ್ಯುತ್ತಿರುವುದು ಕಂಡು ಬರುತ್ತಿದೆ. ವೀಡಿಯೊದಲ್ಲಿ ಕಾಣಿಸುವಂತೆ ಪೋಲೀಸ್ ಅಧಿಕಾರಿಯೊಬ್ಬರು ಕೋತಿಗೆ (Monkey) ನೀರು ಕುಡಿಯಲು ಬಾಟಲಿಯನ್ನು ಕೈಯಲ್ಲಿ ಹಿಡಿದಿರುವುದನ್ನು ಕಾಣಬಹುದು. StreetDogsofBombay ಎಂಬ ಇನ್‌ಸ್ಟಾಗ್ರಾಮ್ ಪುಟದಿಂದ ಈ ವಿಡಿಯೋ ಪೋಸ್ಟ್ ಆಗಿದೆ. 'ಧ್ವನಿಯಿಲ್ಲದ ಶಿಶುಗಳ ಕಡೆಗೆ ದಯೆ ಮತ್ತು ಕರುಣೆಗಾಗಿ ಮಹಾರಾಷ್ಟ್ರ ಪೊಲೀಸರಿಗೆ ಸೆಲ್ಯೂಟ್, ಬೇಸಿಗೆಯ ಬಿಸಿಯು ಹೆಚ್ಚುತ್ತಿದೆ ಮತ್ತು ಧ್ವನಿಯಿಲ್ಲದ ಶಿಶುಗಳು ನೀರಿಗಾಗಿ ಹುಡುಕುತ್ತಿದ್ದಾರೆ ಆದ್ದರಿಂದ ದಯವಿಟ್ಟು ನಿಮ್ಮ ಮನೆಯ ಹೊರಗೆ ನೀರಿನ ಬಟ್ಟಲುಗಳನ್ನು ಇರಿಸಿ ಮತ್ತು ದಾಹದಿಂದ ಅವುಗಳನ್ನು ರಕ್ಷಿಸಿ' ಎಂದು ಬರೆದು ಈ ವಿಡಿಯೋವನ್ನು ಪೋಸ್ಟ್‌ ಮಾಡಲಾಗಿದೆ.

click me!