ED investigation ಮನಿ ಲಾಂಡರಿಂಗ್ ಪ್ರಕರಣದಲ್ಲಿ ಕೇರಳದ ಪಿಎಫ್ಐ ನಾಯಕನ ಬಂಧನ!

By Suvarna News  |  First Published Apr 13, 2022, 7:27 PM IST
  • ಅಕ್ರಮ ಹಣ ವರ್ಗಾವಣೆ ತನಿಖೆಯಲ್ಲಿ PFI ನಾಯಕನ ಬಂಧನ
  • ಇಡಿ ತನಿಖೆಯಲ್ಲಿ ಪಿಎಫ್ಐ ಮನಿ ಲಾಂಡರಿಂಗ್ ಬಯಲು
  • ಸಿಎಎ ಪ್ರತಿಭಟನೆಗೆ ಹಣ ವರ್ಗಾವಣೆ ಕುರಿತೂ ಇಡಿ ತನಿಖೆ

ನವದೆಹಲಿ(ಏ.13): ಮನಿ ಲಾಂಡರಿಂಗ್ ತನಿಖೆ ತೀವ್ರಗೊಳಿಸಿರುವ ಇಡಿ ಅಧಿಕಾರಿಗಳು ಕೇರಳದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ( PFI) ನಾಯಕ ಎಂಕೆ ಅಶ್ರಫ್‌ನನ್ನು ಬಂಧಿಸಲಾಗಿದೆ. ಕಳೆದ ಡಿಸೆಂಬರ್ ತಿಂಗಳಲ್ಲಿ  PFI ಕಚೇರಿ ಹಾಗೂ ವಿಲ್ಲಾ ಪ್ಲಾಜೆಕ್ಟ್ ನಡೆಯುತ್ತಿರುವ ಪ್ರದೇಶಗಳಲ್ಲಿ ಸರ್ಚ್ ನಡೆಸಿತ್ತು. ಬಳಿಕ ತನಿಖೆ ತೀವ್ರಗೊಳಿಸಿದ ಇಡಿ ಅಧಿಕಾರಿಗಳು ಇದೀಗ ಅಶ್ರಫ್‌ನನ್ನು ಬಂಧಿಸಿದ್ದಾರೆ.

ದಾಳಿ ವೇಳೆ ಹಲವು ದಾಖಲೆಗಳನ್ನು ಇಡಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಕೇರಳದ ಮುನಾರ್‌ನಲ್ಲಿ ನಿರ್ಮಾಣಗೊಳ್ಳುತ್ತಿರುವ ಮುನಾರ್ ವಿಲ್ಲ ವಿಸ್ತ್ರಾ ಪ್ರಾಜೆಕ್ಟ್, ದುಬೈ ಸೇರಿದಂತೆ ವಿದೇಶಗಳಲ್ಲಿರುವ ವ್ಯವಹಾರ ಹಾಗೂ ಅಕ್ರಮ ಹಣ ವರ್ಗಾವಣೆ ಕುರಿತು ಮಹತ್ವದ ದಾಖಲೆಗಳು ಪತ್ತೆಯಾಗಿತ್ತು. 

Tap to resize

Latest Videos

Hijab Verdict ಭಟ್ಕಳದಲ್ಲಿ ಮುಸ್ಲಿಂ ಅಂಗಡಿಗಳು ಬಂದ್, ನಾಲ್ವರು PFI ಕಾರ್ಯಕರ್ತರ ಬಂಧನ!

ವ್ಯವಹಾರಗಳಲ್ಲಿ ಬರುವ ಆದಾಯದಲ್ಲಿ ಆಪರಾಧ ಚಟುವಟಿಕೆಗಳಿಗೆ ಬಳಸಲಾಗುತ್ತಿದೆ ಅನ್ನೋ ಆರೋಪದ ಕುರಿತು ತನಿಖೆ ನಡೆಯುತ್ತಿದೆ. ಹೀಗಾಗಿ ಎಲ್ಲಾ ಆಯಾಮಗಳಲ್ಲಿನ ತನಿಖೆಯಲ್ಲಿ ಇದೀಗ ಪಾಂಪ್ಯಲರ್ ಫ್ರಂಟ್ ಆಫ್ ಇಂಡಿಯಾಗೆ ಸಂಕಷ್ಟ ಎದುರಾಗಿದೆ.

ಎಂಕೆ ಅಶ್ರಫ್ ಬಂಧನವನ್ನು ರಾಜಕೀಯ ಪ್ರೇರಿತ ಎಂದು ಪಿಎಫ್ಐ ಮುಖ್ಯಸ್ಥ ಒಮಾ ಸಲಾಮ್ ಆರೋಪಿಸಿದ್ದಾರೆ. ಮೋದಿ ಸರ್ಕಾರ ಕೇಂದ್ರ ತನಿಖಾ ಸಂಸ್ಥೆಗಳನ್ನು ದಾಳವಾಗಿ ಬಳಸಿಕೊಳ್ಳುತ್ತಿದೆ. ಕಳೆದ ಕೆಲ  ವರ್ಷಗಳಲ್ಲಿ ವಿರೋಧಿ ನಾಯಕರ ಮೇಲೆ ಕೇಂದ್ರ ಈ ಅಸ್ತ್ರ ಪ್ರಯೋಗಿಸಿದೆ. ಇದೀಗ ನಮ್ಮ ಮೇಲೆ ಕೇಂದ್ರ ಅಧಿಕಾರ ಬಳಸಿಕೊಳ್ಳುತ್ತಿದೆ. ಆದರೆ ನಾವು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇವೆ ಎಂದು ಒಮಾ ಸಲಾಮ್ ಹೇಳಿದ್ದಾರೆ.

ಉಪ್ಪಿನಂಗಡಿ ಪ್ರತಿಭಟನೆ ವೇಳೆ ಹಿಂಸೆ : 20 ಮಂದಿಗೆ ಗಾಯ

ಅಕ್ರಮ ಹಣ ವರ್ಗಾವಣೆ: ಕೇರಳದಲ್ಲಿ ಪಿಎಫ್‌ಐ ಮೇಲೆ ಇ.ಡಿ ದಾಳಿ
ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ(ಪಿಎಫ್‌ಐ)ಗೆ ಸಂಬಂಧಿಸಿದ ಕೇರಳದ ನಾಲ್ಕು ಸ್ಥಳಗಳ ಮೇಲೆ ಜಾರಿ ನಿರ್ದೇಶನಾಲಯ ಡಿಸೆಂಬರ್ ತಿಂಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿತ್ತು. ಎರ್ನಾಕುಲಂ ಸೇರಿದಂತೆ ಇನ್ನಿತರ ಸ್ಥಳಗಳಲ್ಲಿ ನಡೆದ ಈ ದಾಳಿ ವೇಳೆ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ವಶಕ್ಕೆ ಪಡೆದಿದ್ದಾರೆ ಎನ್ನಲಾಗಿದೆ. ಆದರೆ ಏನೆಲ್ಲಾ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿಲ್ಲ. ಈ ವೇಳೆ ಇ.ಡಿ ಅಧಿಕಾರಿಗಳಿಗೆ ಕೇಂದ್ರೀಯ ಪ್ಯಾರಾಮಿಟರಿ ಸಿಬ್ಬಂದಿಯ ಭದ್ರತೆ ಒದಗಿಸಲಾಗಿತ್ತು.

ಪೌರತ್ವ ಕಾಯ್ದೆ ಹೋರಾಟಕ್ಕೆ ಪಿಎಫ್‌ಐ ಹಣ
ಕೇರಳ ಮೂಲದ ವಿವಾದಿತ ಸಂಘಟನೆಯಾದ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಹಾಗೂ ಅದರ ವಿದ್ಯಾರ್ಥಿ ಸಂಘಟನೆಯಾದ ಕ್ಯಾಂಪಸ್‌ ಫ್ರಂಟ್‌ ಆಫ್‌ ಇಂಡಿಯಾ (ಸಿಎಫ್‌ಐ) ಖಾತೆಗಳಲ್ಲಿ ವಿವಿಧ ಮೂಲಗಳಿಂದ 100 ಕೋಟಿ ರು. ಹಣ ಸಂಗ್ರಹವಾಗಿರುವುದು ಪತ್ತೆಯಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.) ಗುರುವಾರ ಹೇಳಿದೆ. ಅಲ್ಲದೆ, ಸಿಎಎ ವಿರೋಧಿ ಪ್ರತಿಭಟನೆಗಳು ಹಾಗೂ ಇತ್ತೀಚಿನ ಬೆಂಗಳೂರು ಗಲಭೆಗಳಲ್ಲಿ ಪಿಎಫ್‌ಐ ಪಾತ್ರ ಕಂಡುಬಂದಿದೆ ಎಂಬ ಗಂಭೀರ ಆರೋಪವನ್ನು ಇ.ಡಿ. ಮಾಡಿದೆ.

ಪಿಎಫ್‌ಐ ನಡೆಸಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಪ್ರಕರಣಗಳ ತನಿಖೆ ನಡೆಸುತ್ತಿರುವ ಇ.ಡಿ., ಕೊಚ್ಚಿಯ ವಿಶೇಷ ಅಕ್ರಮ ಹಣ ವರ್ಗಾವಣೆ ತಡೆ ಕೋರ್ಟ್‌ಗೆ ನೀಡಿರುವ ವರದಿಯಲ್ಲಿ ಈ ಮಾಹಿತಿ ನೀಡಿದೆ. ಬಂಧಿತ ಸಿಎಫ್‌ಐ ಕಾರ್ಯದರ್ಶಿ ಕೆ.ಎ. ರೌಫ್‌ ಶರೀಫ್‌ನನ್ನು ಇನ್ನೂ 3 ದಿನ ತನ್ನ ವಶಕ್ಕೆ ನೀಡುವಂತೆ ಕೋರಿಕೆ ಸಲ್ಲಿಸುವಾಗ ಈ ವರದಿಯನ್ನು ಇ.ಡಿ. ನೀಡಿದೆ.

ಕೇರಳ ಅರಣ್ಯದಲ್ಲಿ ಸ್ಫೋಟಕ ಪತ್ತೆ: ಪಿಎಫ್‌ಐ ಪಾತ್ರ ಶಂಕೆ
ಕೇರಳದಲ್ಲಿ ಕೊಲ್ಲಂ ಜಿಲ್ಲೆಯ ಅರಣ್ಯ ಪ್ರದೇಶವೊಂದರಲ್ಲಿ ಸೋಮವಾರ ಜಿಲೆಟಿನ್‌ ಕಡ್ಡಿ ಹಾಗೂ ಡೆಟೋನೇಟರ್‌ನಂಥ ಸ್ಫೋಟಕ ಪತ್ತೆ ಆದ ಪ್ರಕರಣದಲ್ಲಿ ವಿವಾದಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (ಪಿಎಫ್‌ಐ) ಪಾತ್ರ ಇರುವ ಶಂಕೆ ಇದೆ ಎಂದು ಅಧೀಕೃತ ಮೂಲಗಳು ಮಂಗಳವಾರ ತಿಳಿಸಿವೆ. ಪಾಥನಪುರಂ ಎಂಬ ಈ ಪ್ರದೇಶದಲ್ಲಿ ಇವು ಅರಣ್ಯಾಧಿಕಾರಿಗಳಿಗೆ ಸಿಕ್ಕಿದ್ದವು. ಇಲ್ಲಿ ಸ್ಫೋಟಕ ತರಬೇತಿ ಶಿಬಿರ ನಡೆದಿರಬಹುದು ಎಂಬ ಶಂಕೆ ಇದೆ. ಈ ಬಗ್ಗೆ ತನಿಖೆ ನಡೆದಿದೆ ಎಂದು ಅವು ಹೇಳಿವೆ. ಈ ಹಿಂದೆ ಹಲವಾರು ಕೃತ್ಯಗಳಲ್ಲಿ ಪಿಎಫ್‌ಐ ಪಾತ್ರದ ಶಂಕೆ ಇತ್ತು.

click me!