ತಮಿಳುನಾಡಿನಲ್ಲಿ ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಅಪ್ಪಳಿಸಿದ ಬಂಡೆ, ತಪ್ಪಿತು ಮಹಾ ದುರಂತ!

Published : Sep 21, 2026, 10:14 AM IST
Nagercoil Bengaluru Express train accident

ಸಾರಾಂಶ

ತಮಿಳುನಾಡಿನ ಧರ್ಮಪುರಿ ಬಳಿ ಮಳೆಯಿಂದಾಗಿ ಗುಡ್ಡ ಕುಸಿದು ನಾಗರಕೋಯಿಲ್‌-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಬೃಹತ್ ಬಂಡೆಯೊಂದು ಅಪ್ಪಳಿಸಿದೆ. ಚಾಲಕನ ಸಮಯಪ್ರಜ್ಞೆಯಿಂದಾಗಿ ಭಾರಿ ದುರಂತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ರೈಲು ಸಂಚಾರ 30 ನಿಮಿಷ ವಿಳಂಬವಾಯಿತು.

ಧರ್ಮಪುರಿ: ತಮಿಳುನಾಡಿನ ಧರ್ಮಪುರಿ ಬಳಿ ಭಾನುವಾರ ನಾಗರಕೋಯಿಲ್‌-ಬೆಂಗಳೂರು ಎಕ್ಸ್‌ಪ್ರೆಸ್‌ ರೈಲಿಗೆ ಬೃಹತ್ ಬಂಡೆ ಅಪ್ಪಳಿಸಿದೆ. ಆದಾಗ್ಯೂ ಕೂದಲೆಳೆ ಅಂತರದಲ್ಲಿ ದೊಡ್ಡ ದುರಂತ ತಪ್ಪಿದೆ. ಧರ್ಮಪುರಿ ಜಿಲ್ಲೆಯ ಮುತ್ತಂಪಟ್ಟಿ ಬಳಿ ರೈಲು ಸಾಗುವ ವೇಳೆ ಪಕ್ಕದ ಗುಡ್ಡ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿದೆ. ಪರಿಣಾಮ ಗುಡ್ಡದ ಮಣ್ಣು, ಕಲ್ಲುಗಳು ಹಾಗೂ ಬಂಡೆಗಳು ರೈಲು ಹಳಿಯತ್ತ ಉರುಳಿ ಬಂದಿವೆ. ಆಗ ಬಂಡೆಯೊಂದು ಚಲಿಸುತ್ತಿದ್ದ ರೈಲಿಗೆ ತಾಗಿದೆ. ಆದಾಗ್ಯೂ ಚಾಲಕರು ಸಮಯಪ್ರಜ್ಞೆ ಮೆರೆದು ರೈಲಿನ ವೇಗ ನಿಯಂತ್ರಿಸಿದ್ದಾರೆ. ಬಳಿಕ ಎಚ್ಚರಿಕೆಯಿಂದ ಕಡಿಮೆ ವೇಗದಲ್ಲಿ ಧರ್ಮಪುರಿ ರೈಲು ನಿಲ್ದಾಣಕ್ಕೆ ಒಯ್ದಿದ್ದಾರೆ. ಅಲ್ಲಿ ರೈಲಿನ ದುರಸ್ತಿ ನಡೆದಿದೆ. ಯಾವುದೇ ಪ್ರಾಣ ಹಾನಿ ಆಗಿಲ್ಲ.

ಮುತ್ತಮಪಟ್ಟಿ ಬಳಿಯ ಬೆಟ್ಟಗಳಿಂದ ಬಂಡೆಯೊಂದು ಉರುಳಿಬಂದು ಬಿದ್ದ ಪರಿಣಾಮ ನಾಗರಕೋಯಿಲ್ - ಬೆಂಗಳೂರು SMVT ರೈಲು ಸಂಖ್ಯೆ 17236 ಸಂಚಾರಕ್ಕೆ ಅಡ್ಡಿಯಾಯ್ತು. ಘಟನೆಯಲ್ಲಿ ಓರ್ವ ಗಾಯಗೊಂಡಿದ್ದು, ಭಾನುವಾರ ರೈಲು 30 ನಿಮಿಷಗಳಿಗೂ ಹೆಚ್ಚು ಕಾಲ ವಿಳಂಭವಾಯ್ತು. ಶನಿವಾರ ರಾತ್ರಿ ಮುತ್ತಂಪಟ್ಟಿ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿಪರೀತ ಮಳೆಯಾಗಿದ್ದು, ಬೆಟ್ಟಗಳ ಮೇಲಿನ ಮಣ್ಣು ಕುಸಿದು ಕೊಚ್ಚಿ ಹೋಗಿದೆ. ಈ ಮಣ್ಣಿನಿಂದ ಆಸರೆಯಾಗಿದ್ದ ಬಂಡೆಯೊಂದು ಭಾನುವಾರ ಬೆಳಿಗ್ಗೆ 5.30 ಕ್ಕೆ ಉರುಳಿಬಿದ್ದು ರೈಲಿಗೆ ಡಿಕ್ಕಿ ಹೊಡೆದಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಟ್ಟಗಳ ಮಧ್ಯೆ ಹಾದು ಹೋಗಿರುವ ರೈಲ್ವೆ ಹಳಿ

ಬಂಡೆ ಉರುಳಿಬಂದು ಡಿಕ್ಕಿಯಾಗಿದೆ ಎಂಬುದನ್ನು ಅರಿತ ಲೋಕೋ ಪೈಲಟ್ ತಕ್ಷಣ ರೈಲನ್ನು ನಿಲ್ಲಿಸಿದರು. ಬಳಿಕ ರೈಲನ್ನು ಧರ್ಮಪುರಿ ರೈಲ್ವೆ ಜಂಕ್ಷನ್‌ಗೆ ನಿಧಾನವಾಗಿ ತರಲಾಯಿತು, ಅಲ್ಲಿ ಎಂಜಿನಿಯರ್‌ಗಳು ಸಂಪೂರ್ಣ ತನಿಖೆ ನಡೆಸಿದ ಬಳಿಕ ಪ್ರಯಾಣ ಮುಂದುವರೆಸಲು ಯೋಗ್ಯವಾಗಿದೆ ಎಂದು ದೃಢಪಟ್ಟ ಬಳಿಕ ರೈಲು ಬೆಂಗಳೂರು ಕಡೆಗೆ ತನ್ನ ಪ್ರಯಾಣವನ್ನು ಪುನರಾರಂಭಿಸಿತು. ಈ ಹಿನ್ನೆಲೆಯಲ್ಲಿ ರೈಲು ನಿಗದಿತ ಸಮಯಕ್ಕಿಂದ 30 ನಿಮಿಷಗಳಷ್ಟು ವಿಳಂಬವಾಗಿ ಪ್ರಯಾಣ ಬೆಳೆಸಿತು. ಮುತ್ತಂಪಟ್ಟಿಯಲ್ಲಿ ರೈಲು ಹಳಿಗಳು ಎರಡು ಬೆಟ್ಟಗಳ ಮಧ್ಯೆ ಹಾದು ಹೋಗಿದೆ. ಈಶಾನ್ಯ ಮಾನ್ಸೂನ್‌ ಆರಂಭವಾಗಿದ್ದು, ಮಳೆ ವಿಪರೀತವಾಗಿದೆ. ಮಳೆಯ ಕಾರಣ ದುರಸ್ತಿಗಳು ನಡೆಯುತ್ತಿದೆ. ನಾವು ಕೆಲಸವನ್ನು ಪೂರ್ಣಗೊಳಿಸುವುದಕ್ಕೂ ಮುನ್ನವೇ ಈ ಘಟನೆ ನಡೆದಿದೆ ಎಂದು ರೈಲ್ವೆ ಅಧಿಕಾರಿಕಾರಿಗಳು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಆಕಾಶದಲ್ಲಿ ಹಾರಬೇಕಿದ್ದವಳು ರಸ್ತೆಯಲ್ಲಿ ಓಡಿಸುತ್ತಿದ್ದಾಳೆ 16 ಟನ್ ಟ್ರಕ್! 25ರ ಹರೆಯದ ನೇಹಾ ಠಾಕೂರ್ ಕಥೆ!
ವೇ*ಶ್ಯಾ ಪದ್ದತಿಯಿಂದ ಪಾರಾಗಲು ಗುಜರಾತ್‌ನ ವಾಡಿಯಾ ಗ್ರಾಮದಲ್ಲಿ 7ನೇ ವಯಸ್ಸಿಗೆ ಹಸುಳೆಗಳಿಗೆ ನಿಶ್ಚಿತಾರ್ಥ!