ಬಸ್‌ನಲ್ಲಿ ಬಿಯರ್ ಕುಡಿದು ತೂರಾಡಿದ ಶಾಲಾ ವಿದ್ಯಾರ್ಥಿನಿಯರು

By Anusha KbFirst Published Mar 24, 2022, 5:10 PM IST
Highlights
  • ಬಸ್‌ನಲ್ಲಿ ವಿದ್ಯಾರ್ಥಿಗಳು ಬಿಯರ್ ಕುಡಿದ ವಿದ್ಯಾರ್ಥಿಗಳು
  • ಸಾಮಾಜಿಕ ಜಾಲತಾಣದಲ್ಲಿ ಫೋಟೋ ವೈರಲ್
  • ತನಿಖೆಗೆ ಮುಂದಾದ ಪೊಲೀಸರು

ತಮಿಳುನಾಡು: ಶಾಲಾ ಬಸ್‌ನಲ್ಲಿ ವಿದ್ಯಾರ್ಥಿಗಳು ಬಿಯರ್ ಕುಡಿದ ಘಟನೆ ನಡೆದಿದ್ದು, ಇದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ನಡೆದಿರುವುದನ್ನು ಪೊಲೀಸ್ ಅಧಿಕಾರಿಗಳು ಖಚಿತಪಡಿಸಿದ್ದಾರೆ. ಈ ವಾರದ ಆರಂಭದಲ್ಲಿ ವಿದ್ಯಾರ್ಥಿಗಳು ಸಮವಸ್ತ್ರ ಧರಿಸಿ ಶಾಲಾ ಬಸ್‌ನಲ್ಲಿ ಬಿಯರ್ ಸೇವಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ವರದಿಗಳ ಪ್ರಕಾರ, ಪೊಲೀಸರು ಮತ್ತು ಜಿಲ್ಲಾ ಅಧಿಕಾರಿಗಳು ಈ ವಿಷಯವನ್ನು ಪರಿಶೀಲಿಸಿದ್ದು, ಇದು ನಿಜ ಎಂಬುದು ತಿಳಿದು ಬಂದಿದೆ. 

ಆರಂಭದಲ್ಲಿ, ಈ ದೃಶ್ಯಗಳು ಹಳೆ ವಿಡಿಯೋವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಹಳೇ ವಿಡಿಯೋಗಳು ವೈರಲ್‌ ಆಗಿವೆ ಎಂದು ಹೇಳಲಾಗಿತ್ತು. ಆದಾಗ್ಯೂ, ಮಂಗಳವಾರ ತಿರುಕಝುಕುಂದ್ರಂನಿಂದ (Thirukazhukundram) ತಚೂರಿಗೆ (Thachur) ಪ್ರಯಾಣಿಸುವಾಗ ಈ ಘಟನೆ ಸಂಭವಿಸಿದೆ ಎಂದು ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Latest Videos

Bengaluru Crime: ಎಣ್ಣೆ ಹಾಕಲು ನೂರು ರೂ. ಕೇಳಿದವನ ಕೊಲೆ ಮಾಡಿದ ಗೆಳೆಯ!

ಚಲಿಸುತ್ತಿರುವ ಬಸ್‌ನಲ್ಲಿ ದಾರಿ ಮಧ್ಯೆ  ಹುಡುಗ ಹುಡುಗಿಯರ ಗುಂಪು ಬಿಯರ್ ಬಾಟಲಿಗಳನ್ನು ತೆರೆದು ಅದನ್ನು ಕುಡಿಯಲು ಪ್ರಾರಂಭಿಸಿದ್ದಾರೆ. ಈ ಘಟನೆಯನ್ನು ದೃಢಪಡಿಸಿದ ಚೆಂಗಲ್ಪಟ್ಟು (Chengalpattu) ಜಿಲ್ಲಾ ಶಿಕ್ಷಣಾಧಿಕಾರಿ ರೋಸ್ ನಿರ್ಮಲಾ ( Rose Nirmala) ಅವರನ್ನು ಉಲ್ಲೇಖಿಸಿ ಡೈಲಿ ಥಂಥಿ ವರದಿ ಮಾಡಿದೆ. 'ಇದು ಶಾಲೆಯ ಹೊರಗೆ ನಡೆದಿರುವುದರಿಂದ, ಪೊಲೀಸರು ಅದರ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ. ಅದು ಮುಗಿದ ನಂತರ, ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.' ಎಂದು ಅವರು ಹೇಳಿದ್ದಾರೆ. 

ಇದಕ್ಕೂ ಮೊದಲು 2017 ರಲ್ಲಿ ಕರ್ನಾಟಕದ ತುಮಕೂರು ಜಿಲ್ಲೆಯ ಸರ್ಕಾರಿ ಶಾಲೆಯೊಂದರ ಶಾಲಾ ಶಿಕ್ಷಕರು ಶಾಲಾ ಪ್ರವಾಸದ ವೇಳೆ ನೀರು ಕೇಳಿದಾಗ ವಿದ್ಯಾರ್ಥಿಗಳಿಗೆ ಮದ್ಯ ನೀಡಿದ ಘಟನೆ ವರದಿಯಾಗಿತ್ತು. ವರದಿಯ ಪ್ರಕಾರ, ಮಕ್ಕಳು 8, 9 ಮತ್ತು 10 ನೇ ತರಗತಿಯ ವಿದ್ಯಾರ್ಥಿಗಳಾಗಿದ್ದು, ಶಾಲಾ ಮುಖ್ಯೋಪಾಧ್ಯಾಯರು ಮತ್ತು ಇಬ್ಬರು ಶಿಕ್ಷಕರು ಮದ್ಯ ಸೇವಿಸಿದ್ದರು. ಪ್ರಕರಣ ಬೆಳಕಿಗೆ ಬಂದ ಬಳಿಕ ಎಲ್ಲಾ ಮೂವರು ಆರೋಪಿ ಅಧ್ಯಾಪಕರನ್ನು ಅಮಾನತುಗೊಳಿಸಲಾಗಿತ್ತು.

Greater Noida ಕುಡಿಯೋದ್ ಬಿಡು ಎಂದಿದ್ದಕ್ಕೆ ಅಕ್ಕನಿಗೆ ಗುಂಡಿಕ್ಕಿ ಕೊಂದ!
 

ಕೆಲ ದಿನಗಳ ಹಿಂದಷ್ಟೇ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Delhi) ಶೇಕಡಾ 43ಕ್ಕಿಂತ ಹೆಚ್ಚು ಅಪ್ರಾಪ್ತ ವಯಸ್ಕರು ವಾರಕ್ಕೆ ಎರಡರಿಂದ ನಾಲ್ಕು ಬಾರಿ ಮದ್ಯಪಾನ ಮಾಡುತ್ತಾರೆ ಮತ್ತು ಶೇಕಡಾ 89 ಕ್ಕಿಂತ ಹೆಚ್ಚು ಜನರು 21 ವರ್ಷಗಳ ಮೊದಲೇ ತಮ್ಮ ಮೊದಲ ಮದ್ಯಪಾನದ ರುಚಿ ನೋಡಿದ್ದಾರೆ ಎಂದು ಹೊಸ ಸಮೀಕ್ಷೆಯೊಂದು ತಿಳಿಸಿತ್ತು. ದೆಹಲಿಯಲ್ಲಿ ಕಾನೂನುಬದ್ಧವಾಗಿ ಮದ್ಯಪಾನ ಮಾಡಲು 25 ವರ್ಷ ವಯಸ್ಸಾಗಿರಬೇಕು. ಸುಮಾರು 44.5 ಪ್ರತಿಶತದಷ್ಟು ಜನರು ಕುಡಿದ ನಂತರ ರಾಶ್ ಡ್ರೈವಿಂಗ್(Rash Driving), ಸ್ಪೀಡ್ ಬೈಕಿಂಗ್ (Speed Biking) ಮತ್ತು ಸ್ಟಂಟ್ ಬೈಕಿಂಗ್ (Stunt Biking) ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಅಲ್ಲದೇ ಸೀಟ್ ಬೆಲ್ಟ್‌ಗಳು ಮತ್ತು ಹೆಲ್ಮೆಟ್‌ಗಳನ್ನು ಧರಿಸುವಂತಹ ಸಂಚಾರಿ ಸುರಕ್ಷತಾ ನಿಯಮಗಳನ್ನು ((Traffic Safety Rule)  ಅನುಸರಿಸುತ್ತಿಲ್ಲ ಎಂದು ಅವರು ಒಪ್ಪಿಕೊಂಡಿದ್ದಾರೆ.

ಸಮೀಕ್ಷೆಗೆ ಒಳಗಾದವರಲ್ಲಿ, 35.8 ಪ್ರತಿಶತದಷ್ಟು ಜನರು ತಾವು ಕುಡಿದು ಜಗಳವಾಡಿದ್ದಾಗಿ ಎಂದು ಒಪ್ಪಿಕೊಂಡಿದ್ದಾರೆ ಮತ್ತು 19.7 ಪ್ರತಿಶತದಷ್ಟು ಜನ ಕುಡಿದ ನಂತರ ಇತರ ವಿರುದ್ಧ ಲಿಂಗಗಳ (Gender) ಕಡೆಗೆ ಆಕ್ರಮಣಕಾರಿ ವರ್ತನೆ ಪ್ರದರ್ಶಿಸಿದ್ದಾಗಿ ಒಪ್ಪಿಕೊಂಡಿದ್ದಾರೆ. ಕಮ್ಯುನಿಟಿ ಅಗೇನ್ಸ್ಟ್ ಡ್ರಂಕನ್ ಡ್ರೈವಿಂಗ್ (CADD) ಎಂಬ ಸಂಸ್ಥೆಯೂ ನವೆಂಬರ್ 20 ರಿಂದ ಡಿಸೆಂಬರ್ 31, 2021ರವರೆಗೆ 50 ಪ್ರಮುಖ ಮದ್ಯ ಮಾರಾಟ ಸಂಸ್ಥೆ, ಬಾರ್‌ಗಳು ಮತ್ತು ರೆಸ್ಟೋರೆಂಟ್‌ಗಳ ಹೊರಗೆ 10,000 ಜನರನ್ನು ಒಳಗೊಂಡು ಈ ಸಮೀಕ್ಷೆಯನ್ನು ನಡೆಸಿದೆ. ಇವರಲ್ಲಿ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ 5976 ಪುರುಷರು ಮತ್ತು 4024 ಮಹಿಳೆಯರು ಸಮೀಕ್ಷೆಗೆ ಪ್ರತಿಕ್ರಿಯಿಸಿದವರಾಗಿದ್ದಾರೆ.

click me!