ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ, ಬಿಜೆಪಿ ನಾಯಕನ ಪುತ್ರನ ಕೊಲೆಯಲ್ಲಿ ಅಂತ್ಯ!

By Suvarna News  |  First Published Mar 24, 2022, 4:20 PM IST

* ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಲಹ

* ಕ್ಷುಲ್ಲಕ ಕಾರಣಕ್ಕೆ ಆರಮಭವಾದ ಜಗಳ ಕೊಲೆಯಲ್ಲಿ ಅಂತ್ಯ

* ಪುಟ್ಟ ವಿವಾದಕ್ಕೆ ಬಿಜೆಪಿ ನಾಯಕನ ಪುತ್ರ ಬಲಿ


ಇಂದೋರ್(ಮಾ.24): ಸಣ್ಣ ವಿಚಾರಕ್ಕೆ ಆರಂಭವಾದ ಕಲಹ ಕೊಲೆಯಲ್ಲಿ ಅಂತ್ಯವಾಗುವ ಘಟನೆ ಆಗಾಗ ಸದ್ದು ಮಾಡುತ್ತಿರುತ್ತವೆ. ಸದ್ಯ ಮಧ್ಯಪ್ರದೇಶದ ಇಂದೋರ್‌ನಲ್ಲಿ ಇಂತಹದೊಂದು ಘಟನೆ ಬೆಳಕಿಗೆ ಬಂದಿದ್ದು, ಸಣ್ಣ ವಿಚಾರಕ್ಕೆ ಎರಡು ಗುಂಪುಗಳ ವಿಷಯ ವಿಕೋಪಕ್ಕೆ ಹೋಗಿದೆ. ನೋಡುತ್ತಲೇ ಅದು ರಕ್ತಸಿಕ್ತ ಸಂಘರ್ಷಕ್ಕೆ ಸಾಕ್ಷಿಯಾಗಿದೆ. ಅಲ್ಲಿ ಬಿಜೆಪಿ ನಾಯಕ ಉದಯ್ ಸಿಂಗ್ ಚೌಹಾಣ್ ಅವರ ಪುತ್ರ ಸುಜಿತ್ ಚೌಹಾಣ್‌ರನ್ನು ಜನರು ಇರಿದು ಕೊಂದಿದ್ದಾರೆ. ಈ ಘಟನೆಯ ನಂತರ ಪೊಲೀಸ್-ಆಡಳಿತದಲ್ಲಿ ಕೋಲಾಹಲ ಉಂಟಾಗಿದೆ.

ಧೂಳಿನಿಂದ ಪ್ರಾರಂಭವಾದ ವಿಷಯ ರಕ್ತ ಹರಿಸುವವರೆಗೆ ತಲುಪಿತು

Tap to resize

Latest Videos

ವಾಸ್ತವವಾಗಿ, ಈ ಸಂಪೂರ್ಣ ಘಟನೆ ಇಂದೋರ್‌ನ ಪಕ್ಕದ ಪಿಗ್‌ದಂಬರ್ ಗ್ರಾಮದಲ್ಲಿ ನಡೆದಿದೆ. ಅಲ್ಲಿ ರಾಜ ವರ್ಮಾ ಎಂಬ ಯುವಕ ಖಾಲಿ ಜಾಗದಲ್ಲಿ ಬೋರ್‌ವೆಲ್ ತೆಗೆಸುವ ಕೆಲಸ ಮಾಡುತ್ತಿದ್ದ. ಇದರಿಂದ ಧೂಳು ಎದ್ದಿತ್ತು, ಕೆಲಕಾಲ ಇದನ್ನು ನಿಲ್ಲಿಸುವಂತೆ ಅತ್ತ ಕಡೆಯ ಜನರು ಕೇಳಿಕೊಂಡರು. ಆದರೆ ರಾಜಾ ವರ್ಮ ಅದಕ್ಕೆ ಒಪ್ಪಲಿಲ್ಲ. ಕೂಡಲೇ ಗ್ರಾಮದ ಜನರು ಈ ಬಗ್ಗೆ ಒಗ್ಗಟ್ಟಾಗಿ ವಿರೋಧ ವ್ಯಕ್ತಪಡಿಸಿದ್ದಾರೆ.

ಕೋಲುಗಳಿಂದ ಆರಂಭವಾದ ಹೊಡೆದಾಟ ಚಾಕು ಇರಿತದವರೆಗೆ

ಈ ಸಣ್ಣ ವಿವಾದ ಎಷ್ಟು ವಿಕೋಪಕ್ಕೆ ಹೋಗಿದೆಯೆಂದರೆ ಈ ವೇಳೆ ಆರೋಪಿಗಳು ಹಲವು ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ. ಎರಡೂ ಕಡೆಯ ಜನರು ಪರಸ್ಪರರ ಮೇಲೆ ದೊಣ್ಣೆಗಳಿಂದ ದಾಳಿ ನಡೆಸಿದ್ದಾರೆ, ಹಲ್ಲೆ ನಡೆಸಲಾರಂಭಿಸಿದರು. ಹೆದ್ದಾರಿಯಲ್ಲಿ ಕೂಗಾಟ ನಡೆದಿದೆ. ಇದೇ ವೇಳೆ ಬಿಜೆಪಿ ಮುಖಂಡ ಉದಯ್ ಚೌಹಾಣ್ ಅವರ ಏಕೈಕ ಪುತ್ರ ಸುಜಿತ್ ಮೇಲೆ ಚಾಕು ಇಇರಿತವಾಘಿದ್ದು, ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಜಿಲ್ಲಾಧಿಕಾರಿಯಿಂದ ಡಿಐಜಿ, ಎಸ್ಪಿ ಎಲ್ಲರೂ ಘಟನಾ ಸ್ಥಳಕ್ಕೆ

ವಿಷಯ ತಿಳಿಯುತ್ತಿದ್ದಂತೆಯೇ ಹೆಚ್ಚಿನ ಸಂಖ್ಯೆಯ ಪೊಲೀಸರು ಸ್ಥಳಕ್ಕೆ ಆಗಮಿಸಿದರು. ಜಿಲ್ಲಾಧಿಕಾರಿ ಮನೀಷ್ ಸಿಂಗ್, ಹೆಚ್ಚುವರಿ ಜಿಲ್ಲಾಧಿಕಾರಿ ಪವನ್ ಜೈನ್ ರಿಂದ ಡಿಐಜಿ, ಎಸ್ಪಿ, ಟಿಐ ಸೇರಿದಂತೆ ಎಲ್ಲ ಅಧಿಕಾರಿಗಳು ಆಗಮಿಸಿದರು. ದೇವಪುರಿ ಕಾಲೋನಿಯಲ್ಲಿರುವ ಆರೋಪಿಗಳ ಮನೆಗಳನ್ನು ಕೆಡವಲು ಜಿಲ್ಲಾಧಿಕಾರಿ ಆದೇಶಿಸಿದರು. ಇನ್ನು ಈ ಮನೆಗಳನ್ನು ಈಗಾಗಲೇ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂಬುವುದು ಉಲ್ಲೇಖನೀಯ. ಸದ್ಯ ಪೊಲೀಸರು ಮತ್ತು ಆಡಳಿತ ಮಂಡಳಿ ಈ ಬಗ್ಗೆ ತನಿಖೆಗೆ ಆದೇಶಿಸಿದೆ.

click me!