ತಮಿಳುನಾಡು, ಸರ್ಕಾರಿ ಉದ್ಯೋಗದಲ್ಲಿ ಮಹಿಳಾ ಮೀಸಲು ಶೇ.40ಕ್ಕೆ ಏರಿಕೆ!

By Suvarna NewsFirst Published Sep 15, 2021, 9:29 AM IST
Highlights

* ಸರ್ಕಾರಿ ಉದ್ಯೋಗಗಳಲ್ಲಿ ಮಹಿಳಾ ಮೀಸಲಾತಿ ಏರಿಕೆ

* ಮಹಿಳಾ ಮೀಸಲಾತಿಯನ್ನು ತಮಿಳುನಾಡು ಸರ್ಕಾರ ಶೇ.30ರಿಂದ ಶೇ.40ಕ್ಕೆ ಏರಿಕೆ 

* ಬದಲಾವಣೆಯನ್ನು ತರುವಲ್ಲಿ ಲಿಂಗ ಸಮಾನತೆ ಮಹತ್ವದ ಪಾತ್ರವನ್ನು ವಹಿಸಲಿದೆ

ಚೆನ್ನೈ(ಸೆ.15): ಸರ್ಕಾರಿ ಉದ್ಯೋಗಗಳಲ್ಲಿ ಮಹಿಳಾ ಮೀಸಲಾತಿಯನ್ನು ತಮಿಳುನಾಡು ಸರ್ಕಾರ ಶೇ.30ರಿಂದ ಶೇ.40ಕ್ಕೆ ಏರಿಕೆ ಮಾಡಿದೆ.

ತಮಿಳುನಾಡು ಮಾನವ ಸಂಪನ್ಮೂಲ ನಿರ್ವಹಣಾ ಸಚಿವ ಪಳನಿವೆಲ್‌ ತ್ಯಾಗ ರಾಜನ್‌ ವಿಧಾನಸಭೆಯಲ್ಲಿ ಈ ಘೋಷಣೆ ಮಾಡಿದ್ದಾರೆ. ಬದಲಾವಣೆಯನ್ನು ತರುವಲ್ಲಿ ಲಿಂಗ ಸಮಾನತೆ ಮಹತ್ವದ ಪಾತ್ರವನ್ನು ವಹಿಸಲಿದೆ. ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಮೀಸಲು ಹೆಚ್ಚಿಸುವ ಸಂಬಂಧ ಕಾಯ್ದೆಗೆ ಅಗತ್ಯ ತಿದ್ದುಪಡಿಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಸದ್ಯ ತಮಿಳುನಾಡು ಲೋಕಸೇವಾ ಆಯೋಗ ಮತ್ತು ಶಿಕ್ಷಕರ ನೇಮಕಾತಿ ಮಂಡಳಿ (ಟಿಆರ್‌ಬಿ) ಮೂಲಕ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ಸಮಾನಾಂತರ ಮೀಸಲಾತಿ ಸೂತ್ರವನ್ನು ಅನುಸರಿಸುತ್ತಿದೆ. ಅಂದರೆ, ಮಹಿಳೆಯರಿಗೆ ಶೇ.50ರಷ್ಟುಸಮಾನಾಂತರ ಮೀಸಲು ನೀಗದಿ ಮಾಡಿದರೆ, ಸರ್ಕಾರಿ ಹುದ್ದೆಗಳಿಗೆ ಆಯ್ಕೆಯಾದ ಅಭ್ಯರ್ಥಿಗಳ ಪೈಕಿ ಅರ್ಧದಷ್ಟುಮಂದಿ ಮಹಿಳೆಯರೇ ಆಗಿರಬೇಕು.

click me!