ಕೋವಿಡ್‌ನಿಂದ ಪೋಷಕರ ಕಳೆದುಕೊಂಡ ಮಕ್ಕಳಿಗೆ ಮಾಸಿಕ 4,000ರು. ನೆರವು!

By Kannadaprabha NewsFirst Published Sep 15, 2021, 8:18 AM IST
Highlights

* ಕೊರೋನಾದಿಂದ ಹೆತ್ತವರ ಕಳೆದುಕಜೊಂಡ ಮಕ್ಕಳ ಆರ್ಥಿಕ ನೆರವು ಏರಿಕೆ

* ಮುಂದಿನ ಕೆಲ ವಾರಗಳಲ್ಲಿ ಪ್ರಸ್ತಾವನೆಗೆ ಅನುಮೋದನೆ

ನವದೆಹಲಿ(ಸೆ.15): ಕೋವಿಡ್‌ನಿಂದ ಪೋಷಕರನ್ನು ಕಳೆದುಕೊಂಡ ಮಕ್ಕಳಿಗೆ ಪ್ರತಿ ತಿಂಗಳು ನೀಡಲಾಗುತ್ತಿದ್ದ 2000 ರು. ಆರ್ಥಿಕ ನೆರವನ್ನು 4000 ರು. ಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮುಂದಿನ ಕೆಲ ವಾರಗಳಲ್ಲಿ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಸಂಪುಟದ ಮುಂದಿಡಲಾಗುತ್ತದೆ. ಕೊರೋನಾದಿಂದ ತಂದೆ-ತಾಯಿಯನ್ನು ಕಳೆದಕೊಂಡು ಅನಾಥರಾದ ಮಕ್ಕಳಿಗೆ ಪಿಎಂ ಕೇ​ರ್ಸ್‌ ನಿಧಿಯಿಂದ ನೆರವು ನೀಡುವುದಾಗಿ ಕೇಂದ್ರ ಸರ್ಕಾರ ಕಳೆದ ಮೇ ನಲ್ಲಿ ಘೋಷಿಸಿತ್ತು.

ಒಟ್ಟು 3250 ಅರ್ಜಿಗಳ ಪೈಕಿ 667 ಅರ್ಜಿಗಳನ್ನು ಜಿಲ್ಲಾಧಿಕಾರಿಗಳು ಅನುಮೋದಿಸಿದ್ದರು.

click me!