ತಮಿಳುನಾಡಲ್ಲಿ ವ್ಯಾಪಕ ಮಳೆಗೆ 10 ಸಾವು, 17 ಸಾವಿರಕ್ಕೂ ಹೆಚ್ಚು ಮಂದಿ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ

By Gowthami KFirst Published Dec 20, 2023, 10:07 AM IST
Highlights

ತಮಿಳು ನಾಡಲ್ಲಿ ಮಳೆ ನಿಂತ್ರೂ ತಗ್ಗದ ಪ್ರವಾಹ, 10 ಸಾವು- ತೂತ್ತುಕುಡಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದವರ ರಕ್ಷಣೆಗೆ ಹೆಲಿಕಾಪ್ಟರ್‌- ರೈಲು ನಿಲ್ದಾಣದಲ್ಲಿ ಸಿಲುಕಿದ್ದ 800 ಜನರ ಪೈಕಿ 300 ಜನ ಸ್ಥಳಾಂತರ 

ತಮಿಳುನಾಡು (ಡಿ.20): ಚೆನ್ನೈ ಭಾನುವಾರ ಸುರಿದ ಭಾರೀ ಮಳೆಗೆ ತತ್ತರಿಸಿರುವ ದಕ್ಷಿಣ ತಮಿಳುನಾಡಿನ ಕನ್ಯಾ ಕುಮಾರಿ, ತಿರುನೆಲ್ವೇಲಿ, ತೂತ್ತುಕುಡಿ ಮತ್ತು ತೆಂಕಾಸಿಗಳಲ್ಲಿ ಮಳೆ ಕಡಿಮೆಯಾ ಗಿದೆಯಾದರೂ ಪ್ರವಾಹ ಸ್ಥಿತಿ ಮುಂದು ವರೆದಿದ್ದು ರಾಜ್ಯದಲ್ಲಿ ಈವರೆಗೆ ಮಳೆ ಸಂಬಂಧಿಸಿದ ಘಟನೆಗಳಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ. ತಮಿಳುನಾಡು ಮುಖ್ಯ ಕಾರ್ಯದರ್ಶಿ ಶಿವ ದಾಸ್ ಮೀನಾ ಮಂಗಳವಾರ ತಿಳಿಸಿದ್ದಾರೆ

ಮಳೆಯಿಂದಾಗಿ ತೂತ್ತುಕುಡಿ ರೈಲು ನಿಲ್ದಾಣದಲ್ಲಿ ಸಿಲುಕಿದ್ದ 800 ಮಂದಿ ಪೈಕಿ ಸೋಮವಾರ ರಾತ್ರಿ 300 ಜನರನ್ನು ಸುರಕ್ಷಿತವಾಗಿ ಸ್ಥಳೀಯ ಶಾಲೆಗೆ ಸ್ಥಳಾಂತರಿಸಲಾಗಿದೆ.

CWRC Meeting: ಭಾರಿ ಮಳೆಗೆ ತಮಿಳುನಾಡು ಕೊಚ್ಚಿ ಹೋದ್ರೂ ಪರವಾಗಿಲ್ಲ, ನಮಗೆ 14 ಟಿಎಂಸಿ ಕಾವೇರಿ ನೀರು ಬೇಕು!

ಈಗಾಗಲೇ ಮೇಲಿನ ನಾಲ್ಕೂ ಜಿಲ್ಲೆಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಿ ಸಲಾಗಿದೆ. ಅಲ್ಲದೇ ಅತ್ಯಧಿಕ ಮಳೆಯಿಂ ದಾಗಿ ದಕ್ಷಿಣ ತಮಿಳುನಾಡಿನ ಬಹುತೇಕ ಆಣೆಕಟ್ಟುಗಳ ನೀರಿನ ಮಟ್ಟವು ಶೇ.80ರಿಂದ 100ರಷ್ಟಿದೆ ಎಂದು ಸರ್ಕಾರ ತಿಳಿಸಿದೆ.

ಇನ್ನು ಭಾನುವಾರ ಮತ್ತು ಸೋಮವಾರಕ್ಕೆ ಹೋಲಿಸಿದರೆ ತಮಿಳು ನಾಡಿನಲ್ಲಿ ಮಳೆಯ ಪ್ರಮಾಣವು ಕಡಿಮೆಯಾಗಿದೆ ಯಾದರೂ, ರಸ್ತೆಗಳು, ತಗ್ಗು ಪ್ರದೇಶಗಳು ಮತ್ತು ಇತರ ವಸತಿ ಸಮುಚ್ಚಯಗಳಲ್ಲಿ ಪ್ರವಾಹದ ನೀರು ಮಾತ್ರ ಕಡಿಮೆಯಾಗಿಲ್ಲ. ಇದರಿಂದ ಜನರು ತೀರಾ ಸಮಸ್ಯೆಗೆ ತುತ್ತಾಗಿದ್ದಾರೆ. ಸದ್ಯ ಹವಾಮಾನ ಇಲಾಖೆಯು ರಾಜ್ಯದಲ್ಲಿ ಎಲ್ಲೋ ಅಲರ್ಟ್ ಘೋಷಿಸಿದೆ.

ಮಳೆಗೆ ತಮಿಳುನಾಡು ತತ್ತರ: 4 ಜಿಲ್ಲೆಗಳಲ್ಲಿ ಭಾರಿ ಅನಾಹುತ; ಹಲವು ಪ್ರದೇಶ ಪೂರ್ಣ ಜಲಾವೃತ

ರೈಲು ನಿಲ್ದಾಣದಲ್ಲಿ ಸಿಲುಕಿದ್ದ 300 ಮಂದಿ ರಕ್ಷಣೆ: ಇನ್ನು ರಾಜ್ಯದಲ್ಲಿ ದಾಖಲೆಯ 95. ಸೆ.ಮೀ ಮಳೆಗೆ ತುತ್ತಾ ಗಿರುವ ತೂತ್ತುಕುಡಿ ರೈಲು ನಿಲ್ದಾಣದ ಸುತ್ತ ಪ್ರವಾಹ ಸೃಷ್ಟಿಯಾಗಿದ್ದರಿಂದ ನಿಲ್ದಾಣದಲ್ಲೇ ಸಿಲುಕಿದ್ದ 800 ಜನರ ಪೈಕಿ 300 ಜನರನ್ನು ರಕ್ಷಣೆ ಮಾಡಲಾಗಿದೆ. ಜನರ ರಕ್ಷಣೆಗೆ ಹೆಲಿಕಾಪ್ಟರ್ ಬಳಕೆ ಮಾಡಲಾ ಗುತ್ತಿದ್ದು, ನಿಲ್ದಾಣದಲ್ಲಿರುವವರಿಗೆ ಆಹಾರದ ಪೊಟ್ಟಣಗಳನ್ನು ವಿತರಿಸಲಾಗಿದೆ. 

100 ಎನ್‌ಡಿಆರ್‌ಎಫ್‌ ಸಿಬ್ಬಂದಿ ತಂಡ ನಿಲ್ದಾಣದಲ್ಲಿ ಜನರ ರಕ್ಷಣಾ ಕಾರ್ಯಾಚರಣೆ ಯಲ್ಲಿ ತೊಡಗಿದ್ದು, ರಕ್ಷಿಸಿದರವನ್ನು ಸ್ಥಳೀಯ ಸರ್ಕಾರಿ ಶಾಲೆಗೆ ಸ್ಥಳಾಂತರಿಸಲಾಗಿದೆ. ರಕ್ಷಣಾ ಕಾರ್ಯಾಚರಣೆ ಇನ್ನೂ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇಲ್ಲಿಯವರೆಗೆ ಸರಕಾರ 160 ಪರಿಹಾರ ಶಿಬಿರಗಳನ್ನು ಸ್ಥಾಪಿಸಿದೆ ಮತ್ತು ಸುಮಾರು 17,000 ಜನರನ್ನು ಈ ಪರಿಹಾರ ಶಿಬಿರಗಳಲ್ಲಿ ಇರಿಸಿದೆ. ಸುಮಾರು 34,000 ಆಹಾರ ಪ್ಯಾಕೆಟ್‌ಗಳನ್ನು ಜನರಿಗೆ ಸರಬರಾಜು ಮಾಡಲಾಗಿದೆ ಮತ್ತು ಈಗಲೂ ಸಹ, ನೀರಿನ ಮಟ್ಟ ಇನ್ನೂ ಕಡಿಮೆಯಾಗದ ಕಾರಣ  ಕೆಲವು ಗ್ರಾಮಗಳಿಗೆ ತಲುಪಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

click me!