ಕೆನಡಾದಲ್ಲಿ 55 ಅಡಿಯ ಹನುಮಾನ್ ಪ್ರತಿಮೆಗೆ ಖಲಿಸ್ತಾನಿಗಳ ತೀವ್ರ ವಿರೋಧ: ಬಿಗಿ ಭದ್ರತೆ

By Anusha KbFirst Published Dec 20, 2023, 9:02 AM IST
Highlights

 ಕೆನಡಾದ ಟೊರೆಂಟೋದ ಬ್ರಾಂಪ್ಟಾನ್‌ನಲ್ಲಿ 55 ಅಡಿ ಎತ್ತರದ ಬೃಹತ್‌ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಇದಕ್ಕೆ ಸ್ಥಳೀಯ ಖಲಿಸ್ತಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. 

ಟೊರೊಂಟೋ: ಕೆನಡಾದ ಟೊರೆಂಟೋದ ಬ್ರಾಂಪ್ಟಾನ್‌ನಲ್ಲಿ 55 ಅಡಿ ಎತ್ತರದ ಬೃಹತ್‌ ಹನುಮಂತನ ವಿಗ್ರಹವನ್ನು ಪ್ರತಿಷ್ಠಾಪಿಸಲಾಗುತ್ತಿದ್ದು, ಇದಕ್ಕೆ ಸ್ಥಳೀಯ ಖಲಿಸ್ತಾನಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ. ಜಾಲತಾಣಗಳಲ್ಲಿ ಹನುಮನ ಪ್ರತಿಮೆ ನಿರ್ಮಾಣದ ವಿರುದ್ಧ ಖಲಿಸ್ತಾನಿಗಳು ಪೋಸ್ಟರ್‌ ಮೂಲಕ ಕಿಡಿಕಾರಿರುವ ಬೆನ್ನಲ್ಲೇ ವಿಗ್ರಹ ಮತ್ತು ದೇವಸ್ಥಾನಕ್ಕೆ ಬಿಗಿ ಭದ್ರತೆ ಒದಗಿಸಲಾಗಿದೆ.

ಬ್ರಾಂಪ್ಟಾನ್‌ನ ಹಿಂದೂ ಮಹಾಸಭಾ ಸಮಿತಿಯು ಹನುಮನ ದೇವಸ್ಥಾನ (Hanuman Temple) ಮತ್ತು ಎತ್ತರದ ಪ್ರತಿಮೆಯನ್ನು ನಿರ್ಮಿಸುತ್ತಿದ್ದು, ಈಗಾಗಲೇ ಪ್ರತಿಮೆ ನಿರ್ಮಾಣವು ಶೇ.95ರಷ್ಟು ಪೂರ್ಣಗೊಂಡಿದೆ. 2024ರ ಏಪ್ರಿಲ್‌ನಲ್ಲಿ ಹನುಮ ಜಯಂತಿಯಂದು (Hanuman Jayanti) ಇದನ್ನು ಉದ್ಘಾಟಿಸಲು ಯೋಜಿಸಲಾಗಿದೆ. ಆದರೆ ಪ್ರತಿಮೆ ನಿರ್ಮಾಣಗೊಳ್ಳುತ್ತಿರುವ ಈ ಸ್ಥಳವು ಖಲಿಸ್ತಾನ್‌ ಪರ ಚಟುವಟಿಕೆಗಳಿಗೆ ಹಾಟ್‌ಸ್ಪಾಟ್‌ ಎನಿಸಿಕೊಂಡಿದ್ದು ಇಲ್ಲಿ ಖಲಿಸ್ತಾನಿಗಳೇ ಹೆಚ್ಚಿನ ಪ್ರಮಾಣದಲ್ಲಿ ಇದ್ದಿದ್ದಾರೆ.

ದೀಪಾವಳಿ ಆಚರಣೆ ವೇಳೆ ಕೆನಡಾದಲ್ಲಿ ಖಲಿಸ್ತಾನಿಗಳು ಭಾರತೀಯರ ನಡುವೆ ಹೊಯ್‌ಕೈ: ವೀಡಿಯೋ ವೈರಲ್‌

Latest Videos

ನಮ್ಮ ದೇವಸ್ಥಾನಕ್ಕೆ ಬೆದರಿಕೆ ಇದೆ. ಆನ್‌ಲೈನ್‌ ಹನುಮ ಪ್ರತಿಮೆ ವಿರುದ್ಧ ಕೆಲವರು ಕಿಡಿಕಾರಿದ್ದಾರೆ. ಹೀಗಾಗಿ ದೇವಸ್ಥಾನಕ್ಕೆ ಭದ್ರತೆ ಒದಗಿಸಲಾಗಿದ್ದು, ರಾತ್ರಿಯೂ ಸಹ ದೇವಾಲಯವನ್ನು ಕಾವಲು ಕಾಯುತ್ತೇವೆ ಎಂದು ದೇವಸ್ಥಾನದ ಅರ್ಚಕ ಫೂಲ್ ಕುಮಾರ್ ಶರ್ಮಾ ಹೇಳಿದ್ದಾರೆ. ಈ ಹಿಂದೆ ಕೆನಡಾದ (Canada) ಹಲವು ದೇವಾಲಯ ಮತ್ತು ಭಾರತದ ರಾಯಭಾರ ಕಚೇರಿ ಮೇಲೆ ಖಲಿಸ್ತಾನಿ ಬೆಂಬಲಿಗರು ದಾಳಿ ಮಾಡಿ, ಗೋಡೆಗಳ ಮೇಲೆ ಖಲಿಸ್ತಾನಿ ಬರಹಗಳನ್ನು ಗೀಚಿ ವಿರೂಪಗೊಳಿಸಿದ ಹಲವು ಘಟನೆಗಳು ನಡೆದಿವೆ.

ರಾಜತಾಂತ್ರಿಕ ಬಿಕ್ಕಟ್ಟಿನ ನಂತರ ಕೆನಡಾ ಜನರಿಗೆ ವೀಸಾ ಸೇವೆ ಮರು ಆರಂಭಿಸಿದ ಭಾರತ

click me!