ಲೋಕಸಭಾ ನೂತನ ಸಂಸದೆ ಬಾಲಿವಿಡ್ ಬ್ಯೂಟಿ ಕಂಗನಾ ರಾಣಾವತ್ ಕೆನ್ನೆಗೆ ಬಾರಿಸಿದ ಸಿಐಎಸ್‌ಎಫ್ ಮಹಿಳಾ ಪೇದೆಗೆ ತಮಿಳುನಾಡು ಪೆರಿಯಾರ್ ಅಭಿಮಾನಿಗಳಿಂದ 8 ಗ್ರಾಂ ಬಂಗಾರದ ಉಂಗುರ ಉಡುಗೊರೆಯಾಗಿ ನೀಡಲಾಗುತ್ತಿದೆ.
ನವದೆಹಲಿ (ಜೂ.09): ದೇಶದ 18ನೇ ಲೋಕಸಭೆಗೆ ಸಂಸದೆಯಾಗಿ ಆಯ್ಕೆಯಾದ ಬಾಇವುಡ್ ಬ್ಯೂಟಿ ಕಂಗನಾ ರಣಾವತ್ ಅವರು ವಿಮಾನ ನಿಲ್ದಾಣ ಪ್ರವೇಶ ಮಾಡುತ್ತಿದ್ದಂತೆಯೇ ಎಲ್ಲರೆದುರು ಸಿಐಎಸ್‌ಎಫ್ ಮಹಿಳಾ ಪೊಲೀಸ್ ಪೇದೆ ಕೆನ್ನೆಗೆ ಬಾರಿಸಿದ್ದಳು. ಕಂಗನಾ ಕೆನ್ನೆಗೆ ಹೊಡೆದ ಹಿನ್ನೆಲೆಯಲ್ಲಿ ಮಹಿಳಾ ಪೇದೆಯನ್ನು ಅಮಾನತು ಮಾಡಲಾಗಿದೆ. ಆದರೆ, ಈಗ ತಮಿಳುನಾಡಿನ ಪೆರಿಯಾರ್ ಅಭಿಮಾನಿಗಳ ಸಂಘವು ಮಹಿಳಾ ಪೇದೆ ಕುಲ್ವಿಂದರ್ ಕೌರ್ ಅವರಿಗೆ 8 ಗ್ರಾಂ ಚಿನ್ನದ ಉಂಗುರ ಉಡುಗೊರೆಯಾಗಿ ನೀಡಲು ಮುಂದಾಗಿದೆ.
ಬಾಲಿವುಡ್ ಚೆಲುವೆ ಕಂಗನಾ ರಾಣಾವತ್ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲುವು ಸಾಧಿಸುವ ಮೂಲಕ ಲೋಕಸಭೆಗೆ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಆದರೆ, ಸಂಸದೆಯಾದ ಖುಷಿಯಲ್ಲಿದ್ದ ಕಂಗನಾಗೆ ಚಂಡೀಘಡ ವಿಮಾಣ ನಿಲ್ದಾಣದಲ್ಲಿ ಸಿಐಎಸ್‌ಎಫ್ ಮಹಿಳಾ ಪೇದೆ ಕೆನ್ನೆಗೆ ಬಾರಿಸುವ ಮೂಲಕ ಅಮಾನತುಗೊಂಡಿದ್ದಾಳೆ. ಈ ಘಟನೆ ಇಡೀ ದೇಶದಾದ್ಯಂತ ಭಾರೀ ಸಂಚಲನ ಸೃಷ್ಟಿಸಿತ್ತು. ಸಿಐಎಸ್‌ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಅವರನ್ನು ಈ ಬಗ್ಗೆ ವಿಚಾರಣೆ ಮಾಡಿದಾಗ ಕೇಂದ್ರ ಸರ್ಕಾರದ ವಿರುದ್ಧ ದೇಶದ ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ದೆಹಲಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದಾಗ, ಕಂಗನಾ ರೈತರ ಬಗ್ಗೆ ಬೇಕಾಬಿಟ್ಟಿಯಾಗಿ ಮಾತನಾಡಿದ್ದರು. ಆಗ ರೈತರ ಪ್ರತಿಭಟನೆಯಲ್ಲಿ ನಮ್ಮ ತಾಯಿಯೂ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರಂತೆ.
ಗೆಲುವಿನ ಸಂಭ್ರಮದಲ್ಲಿರುವ ಕಂಗನಾಗೆ ಶಾಕ್, ವಿಮಾನ ನಿಲ್ದಾಣದಲ್ಲಿ ಸಂಸದೆ ಮೇಲೆ ಹಲ್ಲೆ!
ದೇಶದ ರೈತರ ಕಷ್ಟವನ್ನು ಅರಿಯದೇ ಬೇಕಾಬಿಟ್ಟಿ ಮಾತನಾಡಿದ್ದ ಕಂಗನಾ ವಿರುದ್ಧ ಸೇಡು ತೀರಿಸಿಕೊಳ್ಳಲು ಸಿಐಎಸ್‌ಎಫ್ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಕಾಯುತ್ತಿದ್ದಳು. ಈಗ ಕಂಗನಾ ರಣಾವತ್ ಲೋಕಸಭೆಗೆ ಸ್ಪರ್ಧಿಸಿ ಗೆಲ್ಲುವ ಮೂಲಕ ಸಂಸದೆಯಾಗಿದ್ದಾರೆ. ಇದರಿಂದ ಮತ್ತಷ್ಟು ಕೋಪಗೊಂಡ ಮಹಿಳಾ ಪೇದೆ ಅವಕಾಶಕ್ಕಾಗಿ ಕಾಯುತ್ತಿದ್ದಳು. ನೂತನ ಸಂಸದೆಯಾಗಿ ಸಂಸತ್ತಿನತ್ತ ಹೋಗಲು ಚಂಡೀಘಡ ವಿಮಾನ ನಿಲ್ದಾಣಕ್ಕೆ ಬಂದಿದ್ದ ಕಂಗನಾ ರಣಾವತ್‌ಗೆ ಸಾರ್ವಜನಿಕರೆದರು ಕೆನ್ನೆಗೆ ಬಾರಿಸಿದ್ದರು.
ಸಂಸದೆ ಕಂಗನಾ ಕೆನ್ನೆಗೆ ಬಾರಿಸಿದ ಮಹಿಳಾ ಪೇದೆಗೆ ಪಂಜಾಬ್ ರೈತರು ಶಹಬ್ಬಾಷ್‌ಗಿರಿ ಕೊಟ್ಟಿದ್ದಾರೆ. ನೀನು ರೈತನ ಮಗಳಾಗಿದ್ದಕ್ಕೆ ಸಾರ್ಥಕವಾಯಿತು ಎಂದು ಪೇದೆ ಕುಲ್ವಿಂದರ್ ಕೌರ್ ಬೆಂಬಲಕ್ಕೆ ನಿಂತಿದ್ದಾರೆ. ಇನ್ನು ಕಪಾಳಮೋಕ್ಷ ಘಟನೆಯ ಬಳಿಕ ಅಧಿಕಾರಿಗಳು ಮಹಿಳಾ ಪೇದೆಯನ್ನು ಅಮಾನತು ಮಾಡಿ, ಬಂಧಿಸಲಾಗಿದೆ. ಆದರೆ, ಸಿಐಎಸ್‌ಎಫ್ ಪೇದೆ ಕುಲ್ವಿಂದರ್ ಕೌರ್ ಅನ್ನು ಬಂಧನದಿಂದ ಬಿಡುಗಡೆ ಮಾಡಬೇಕು, ಆಕೆಗೆ ನೌಕರಿ ಮರಳಿ ಕೊಡಬೇಕು ಎಂದು ರೈತ ಸಂಘಗಳು ಆಗ್ರಹಿಸುತ್ತಿವೆ.
ಫಿಲ್ಮ್ ಸಿಟಿ, ವಿಮಾನ ನಿಲ್ದಾಣ.. ಚುನಾವಣೆ ಗೆದ್ದರೆ ಈ 5 ಕೆಲಸ ಮಾಡ್ತೀನಂದಿದಾರೆ ಬಾಲಿವುಡ್ ನಟಿ ಕಂಗನಾ ರಣಾವತ್
ಈಗ ಮಹಿಳಾ ಪೇದೆ ಕುಲ್ವಿಂದರ್ ಕೌರ್ ಬೆಂಬಲಕ್ಕೆ ನಿಂತಿರುವ ತಮಿಳುನಾಡಿನ ಪೆರಿಯಾರ್ ಅಭಿಮಾನಿಗಳ ಸಂಘವು ಆಕೆಗೆ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕೊಡಲು ಮುಂದಾಗಿದೆ. ಕೊಯಮತ್ತೂರಿನ ತಂತ್ರ್ಯ ಪೆರಿಯಾರ್ ದ್ರಾವಿಡರ್ ಕಳಗಂ (TPDK) ವತಿಯಿಂದ 8 ಗ್ರಾಂ ಚಿನ್ನದ ಉಂಗುರವನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ಘೋಷಿಸಿದೆ. ದೇಶದ ರೈತರನ್ನು ಅವಮಾನಿಸಿದ ಕಂಗನಾ ಕೆನ್ನೆಗೆ ಹೊಡೆದ ಮಹಿಳಾ ಪೇದೆಯ ಕಾರ್ಯವನ್ನು ನಾವು ಮೆಚ್ಚುತ್ತೇವೆ. ಅವರಿಗೆ ನಾವು ಪೆರಿಯಾರ್ ಮೂರ್ತಿಯೊಂದಿಗೆ 8 ಗ್ರಾಂ ಚಿನ್ನದ ಉಂಗುರ ನೀಡುತ್ತೇವೆ. ಜೊತೆಗೆ, ಪೆರಿಯಾರ್ ಪುಸ್ತಕಗಳನ್ನು ನೀಡುತ್ತೇವೆ ಎಂದು ಟಿಪಿಡಿಕೆ ಪ್ರಧಾನ ಕಾರ್ಯದರ್ಶಿ ಕೋವೆ ರಾಮಕೃಷ್ಣನ್ ಹೇಳಿದ್ದಾರೆ.