ಶ್ವಾನಕ್ಕಾಗಿ ದೇಗುಲವನ್ನೇ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

Published : Apr 06, 2022, 04:07 PM IST
ಶ್ವಾನಕ್ಕಾಗಿ ದೇಗುಲವನ್ನೇ ನಿರ್ಮಿಸಿದ ತಮಿಳುನಾಡಿನ ವ್ಯಕ್ತಿ

ಸಾರಾಂಶ

ಪ್ರೀತಿಯ ಶ್ವಾನಕ್ಕಾಗಿ ದೇಗುಲ ತಮಿಳುನಾಡಿನ ನಿವೃತ್ತ ಸರ್ಕಾರಿ ನೌಕರನ ಶ್ವಾನ ಪ್ರೇಮ 80 ವರ್ಷದ ಮುತ್ತು ಅವರಿಂದ ಶ್ವಾನಕ್ಕೆ ಪ್ರತಿಮೆ

ಶಿವಗಂಗಾ(ಏ.6): ಶ್ವಾನಗಳು ಮತ್ತು ಮನುಷ್ಯನ ನಡುವಿನ ಸಂಬಂಧ ಅವಿನಾಭಾವವಾದುದ್ದು, ತಮಿಳುನಾಡಿನ ವ್ಯಕ್ತಿಯೊಬ್ಬರು ತನ್ನ ಪ್ರೀತಿಯ ನಾಯಿ ಟಾಮ್‌ಗಾಗಿ ಶ್ವಾನದ ಪ್ರತಿಮೆಯನ್ನು ನಿರ್ಮಿಸಿದ್ದಾರೆ.ಶಿವಗಂಗೆಯ (Sivaganga) ಮನಮದುರೈ (Manamadurai) ಮೂಲದ ವ್ಯಕ್ತಿಯೊಬ್ಬರು ತಮ್ಮ ತೀರಿಕೊಂಡ ಸಾಕು ನಾಯಿ ಮೇಲಿನ ಪ್ರೀತಿಗಾಗಿ ವಿಶಿಷ್ಟ ರೀತಿಯಲ್ಲಿ ಸುದ್ದಿ ಮಾಡುತ್ತಿದ್ದಾರೆ. ಮುತ್ತು (Muthu) ಎಂಬ ನಿವೃತ್ತ ಸರ್ಕಾರಿ ನೌಕರ ತನ್ನ ಲ್ಯಾಬ್ರಡಾರ್ (Labrador) ತಳಿಯ ಶ್ವಾನ ಟಾಮ್‌ನ ಅಮೃತಶಿಲೆಯ ಪ್ರತಿಮೆಯೊಂದಿಗೆ ದೇವಾಲಯವನ್ನು ನಿರ್ಮಿಸಲಿದ್ದಾರೆ.

ನಾಯಿಗಳಷ್ಟು ಸ್ವಾಮಿನಿಷ್ಠ ಪ್ರಾಣಿ ಬೇರೊಂದಿಲ್ಲ. ನಾಯಿಗಳು ತಮಗೆ ಮನೆಯಿಲ್ಲದಿದ್ದರೂ, ಅಪಾಯದಲ್ಲಿರುವಾಗ ಅಥವಾ ತಮ್ಮನ್ನು ಇತರರನ್ನು ನೋಡಿಕೊಳ್ಳುವ ಸ್ಥಿತಿಯಲ್ಲಿ ಇಲ್ಲದಿದ್ದರೂ ಸಹ ಯಾವಾಗಲೂ ಮನುಷ್ಯರ ಪಕ್ಕದಲ್ಲಿಯೇ ಇರುತ್ತವೆ ಎಂದು ತಿಳಿದು ಬಂದಿದೆ.

ಹಾಗೇಯೇ ಮನುಷ್ಯರು ಕೂಡ ತಮ್ಮ ಅದ್ಭುತ ಪ್ರಾಣಿ ಸ್ನೇಹಿತರು ನೀಡಿದ ಈ ಬೇಷರತ್ತಾದ ಪ್ರೀತಿಗೆ ಪದೇ ಪದೇ ಪ್ರೀತಿಯ ಮರು ಪಾವತಿ ಮಾಡಿದ್ದಾರೆ. ಇಂತಹದ್ದೇ ಒಂದು ಪ್ರಕರಣದಲ್ಲಿ ತಮಿಳುನಾಡಿನ ವ್ಯಕ್ತಿಯೊಬ್ಬರು ತಮ್ಮ ಶ್ವಾನದ ನೆನಪಿಗಾಗಿ ಪ್ರತಿಮೆ ನಿರ್ಮಿಸಿ ದೇಗುಲ ಮಾಡಿದ್ದಾರೆ. ತನ್ನ ಕುಟುಂಬ ಸದಸ್ಯನಂತಿದ್ದ ಶ್ವಾನ ತೀರಿದ ಬಳಿಕ ಇವರ ಕುಟುಂಬದವರು ಇದನ್ನು ಸದಾ ನೆನಪಿಸಿಕೊಳ್ಳುತ್ತಿದ್ದರು. ಹೀಗಾಗಿ ತಮ್ಮ ಜಮೀನಿನಲ್ಲಿ 82 ವರ್ಷ ಪ್ರಾಯದ  ಶಿವಗಂಗೆಯ ಮನಮದುರೈ ನಿವಾಸಿ ಮುತ್ತು ಶ್ವಾನದ ಗೌರವಾರ್ಥವಾಗಿ ಗುಡಿಯನ್ನು ನಿರ್ಮಿಸಿದರು.

ಅಪಘಾತದಲ್ಲಿ ತೀರಿಕೊಂಡ ಮಗನ ನೆನಪಿಗೆ ಪ್ರತಿಮೆ ಪ್ರತಿಷ್ಠಾಪನೆ

ನಿವೃತ್ತ ಸರ್ಕಾರಿ ನೌಕರ ಮುತ್ತು ಅವರಿಗೆ ಟಾಮ್‌ನ ಮೇಲೆ ಪ್ರೀತಿ ಅಗಾಧವಾಗಿತ್ತು. ಮುತ್ತು ಅವರ ಸ್ವಂತ ಮಕ್ಕಳಿಗಿಂತಲೂ ಅವರು ಶ್ವಾನವನ್ನು ಹೆಚ್ಚು ಪ್ರೀತಿಸುತ್ತಿದ್ದರು ಎಂದು ಅವರು ಹೇಳಿದರು. ನಾನು 2010 ರಿಂದ ಟಾಮ್ ಅನ್ನು ಸಾಕುತ್ತಿದ್ದೆ  ನಾನು ಅವನನ್ನು ನನ್ನ ಮಗುವಿಗಿಂತ ಹೆಚ್ಚಾಗಿ ಪ್ರೀತಿಸುತ್ತಿದ್ದೆ. ದುರದೃಷ್ಟವಶಾತ್, 2021 ರಲ್ಲಿ ಅವನು ಪ್ರಾಣ ಬಿಟ್ಟ. ಆದ್ದರಿಂದ, ಆತನ ನೆನಪಿಗಾಗಿ ನಾವು ಅವನಿಗೆ ಪ್ರತಿಮೆಯನ್ನು ತಯಾರಿಸಿದ್ದೇವೆ. ಕಳೆದ ಮೂರು ತಲೆಮಾರುಗಳಿಂದ, ನನ್ನ ಕುಟುಂಬದಲ್ಲಿ ಶ್ವಾನವಿಲ್ಲದೇ ಯಾರೂ ಇರುತ್ತಿರಲಿಲ್ಲ. ನನ್ನ ಅಜ್ಜ ಮತ್ತು ನನ್ನ ತಂದೆ ಎಲ್ಲರೂ ಶ್ವಾನ ಪ್ರೇಮಿಗಳು ಎಂದು ಅವರು ಹೇಳಿದರು.

ಗುಂಡಿ ತೋಡಿ ಮಣ್ಣುಮುಚ್ಚಿ ಅಗಲಿದ ಮಿತ್ರನಿಗೆ ಅಂತಿಮ ವಿದಾಯ... ಶ್ವಾನಗಳ ವಿಡಿಯೋ ವೈರಲ್‌ 

ಸಾಮಾಜಿಕ ಜಾಲತಾಣದಲ್ಲಿ ಶ್ವಾನಗಳ ವಿಡಿಯೋವೊಂದು ವೈರಲ್ ಆಗಿದ್ದು, ಕಣ್ಣೀರು ತರಿಸುವಂತಿದೆ. ವಿಡಿಯೋದಲ್ಲಿ ಶ್ವಾನವೊಂದು ಮೃತಪಟ್ಟಿದ್ದು, ಉಳಿದ ನಾಯಿಗಳೆಲ್ಲ ಜೊತೆ ಸೇರಿ ಆ ಶ್ವಾನದ ಅಂತ್ಯಸಂಸ್ಕಾರ ಮಾಡುತ್ತಾರೆ. ಗುಂಡಿ ತೋಡುವ ಶ್ವಾನಗಳು(dog) ಅದರೊಳಗೆ ತಮ್ಮ ಮೃತಪಟ್ಟ ಸ್ನೇಹಿತನನ್ನು ಮಲಗಿಸಿ ಮಣ್ಣು ಮುಚ್ಚಿ ಅಗಲಿದ ಸ್ನೇಹಿತನಿಗೆ ಅಂತಿಮ ವಿದಾಯ ಹೇಳುತ್ತಾರೆ. ಈ ವಿಡಿಯೋ ನೋಡುಗರ ಕಣ್ಣಂಚಿನಲ್ಲಿ ನೀರು ಜಿನುಗುವಂತೆ ಮಾಡುತ್ತಿದೆ. ಈ ವಿಡಿಯೋ ನೋಡಿದರೆ ಅಚ್ಚರಿಯ ಜೊತೆ ವಿಚಿತ್ರ  ಎನಿಸುವುದು.

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ