ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನಕ್ಕೆ ಅನುಮತಿ!

Published : Jan 05, 2021, 07:51 AM IST
ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನಕ್ಕೆ ಅನುಮತಿ!

ಸಾರಾಂಶ

ಚಿತ್ರಮಂದಿರಗಳಲ್ಲಿ ಹೌಸ್‌ಫುಲ್‌ ಪ್ರದರ್ಶನಕ್ಕೆ ತ.ನಾಡು ಅನುಮತಿ!| ಶೇ.100ರಷ್ಟುಸೀಟು ಭರ್ತಿಗೆ ಅವಕಾಶ ನೀಡಿದ ದೇಶದ ಮೊದಲ ರಾಜ್ಯ| ಪೊಂಗಲ್‌ ಹಬ್ಬಕ್ಕೂ ಮುನ್ನ ನಟ, ನಿರ್ಮಾಪಕರ ಒತ್ತಡಕ್ಕೆ ಮಣಿದ ಸರ್ಕಾರ

ಚೆನ್ನೈ(ಜ.05): ತಮಿಳುನಾಡಿನ ಸಿನಿಮಾ ಮಂದಿರಗಳಲ್ಲಿ ಶೇ.100ರಷ್ಟುಸೀಟು ಭರ್ತಿಯೊಂದಿಗೆ ಚಿತ್ರಗಳನ್ನು ಪ್ರದರ್ಶಿಸಬಹುದು ಎಂದು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಇದರೊಂದಿಗೆ ಕೊರೋನಾ ಲಾಕ್‌ಡೌನ್‌ ಅಂತ್ಯದ ನಂತರ ಥಿಯೇಟರ್‌ಗಳ ಸಂಪೂರ್ಣ ಹೌಸ್‌ಫುಲ್‌ಗೆ ಅವಕಾಶ ನೀಡಿದ ದೇಶದ ಮೊದಲ ರಾಜ್ಯ ಎನ್ನಿಸಿಕೊಂಡಿದೆ.

ಕೊರೋನಾ ಸೋಂಕು ದೇಶದಲ್ಲಿ ವ್ಯಾಪಿಸಿದ ನಂತರ ಮಾಚ್‌ರ್‍ನಿಂದಲೇ ಥಿಯೇಟರ್‌ಗಳು ಬಂದ್‌ ಆಗಿದ್ದವು. ಆದರೆ ನ.10ರಂದು ಶೇ.50ರಷ್ಟುಸೀಟು ಭರ್ತಿಯೊಂದಿಗೆ ಚಿತ್ರಮಂದಿರಗಳ ಕಾರ್ಯಾರಂಭಕ್ಕೆ ತಮಿಳುನಾಡು ಸರ್ಕಾರ ಅವಕಾಶ ನೀಡಿತ್ತು.

ಕೇವಲ ಅರ್ಧ ಭರ್ತಿ ಆದ ಚಿತ್ರಮಂದಿರಗಳಿಂದ ಆದಾಯ ಅಷ್ಟಾಗಿ ಹರಿದುಬರುತ್ತಿರಲಿಲ್ಲ. ಈ ಕಾರಣಕ್ಕೇ ಬಿಗ್‌ ಬಜೆಟ್‌ ಚಿತ್ರಗಳು ಬಿಡುಗಡೆ ಆಗಿರಲಿಲ್ಲ. ಈ ನಡುವೆ ಜ.14ರ ಪೊಂಗಲ್‌ ಹಬ್ಬ ಸಮೀಪಿಸುತ್ತಿದ್ದು ಬಿಗ್‌ ಬಜೆಟ್‌ ಚಿತ್ರಗಳ ಬಿಡುಗಡೆಗೆ ಅನೇಕ ನಿರ್ಮಾಪಕರು ತವಕದಲ್ಲಿದ್ದಾರೆ. ಈ ನಿರ್ಮಾಪಕರು ಹಾಗೂ ನಟ ವಿಜಯ್‌ ಅವರು ಇತ್ತೀಚೆಗೆ ಶೇ.100 ಸೀಟು ಭರ್ತಿಗೆ ಅವಕಾಶ ನೀಡಬೇಕು ಎಂದು ಮುಖ್ಯಮಂತ್ರಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರಿಗೆ ಕೋರಿದ್ದರು.

ಇದನ್ನು ಮನ್ನಿಸಿ ಸಂಪೂರ್ಣ ಸೀಟು ಭರ್ತಿಗೆ ಅನುಮತಿ ನೀಡಿರುವ ಸರ್ಕಾರ, ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಬೇಕು ಹಾಗೂ ಚಿತ್ರ ಪ್ರದರ್ಶನದ ವೇಳೆ ಕೊರೋನಾ ಜಾಗೃತಿ ಸಂದೇಶಗಳನ್ನು ಪ್ರದರ್ಶಿಸಬೇಕು ಎಂಬ ಷರತ್ತುಗಳನ್ನು ವಿಧಿಸಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ
ತಾಯಿಯ ಜಾತಿ ಆಧಾರದಲ್ಲೇ ಮಗಳಿಗೆ ಜಾತಿ ಪ್ರಮಾಣಪತ್ರ