ನಿಸ್ವಾರ್ಥ ನಿಸರ್ಗ ಸೇವೆ.. ಯಾವ ಪ್ರಶಸ್ತಿಗಳೂ ಬೇಕಿಲ್ಲ...  ಬೆದರಿದ ಪಾರ್ಶ್ವವಾಯು!

By Suvarna News  |  First Published Jan 4, 2021, 9:48 PM IST

ನಿಜವಾದ ಹೀರೋಗಳು ಮುಂದಕ್ಕೆ ಬರುವುದಿಲ್ಲ/  ಪಾರ್ಶ್ವವಾಯು ಕಾಡುತ್ತಿದ್ದರೂ ಇವರ ಸಾಧನೆಗೆ ಯಾವುದು ಅಡ್ಡಿಯಾಗಿಲ್ಲ/ ನಿಸ್ವಾರ್ಥದ ನಿಸರ್ಗ ಸೇವೆ/  ಕೇಂದ್ರ ಸರ್ಕಾರವೂ ಮನ್ನಣೆ ನೀಡಿದೆ


ಕೇರಳ(ಜ. 04) ನಿಜವಾದ ಹೀರೋಗಳು ವೇದಿಕೆಗೆ ಬರುವುದೇ ಇಲ್ಲ... ಅವರು ತಮ್ಮ ಕೆಲಸವನ್ನು ತಾವೇ ಮಾಡಿಕೊಂಡು ಸಮಾಜಕ್ಕೆ ಕೊಡುಗೆ ನೀಡುತ್ತಲೇ ಇರುತ್ತಾರೆ. ಸಮಯ ಸಂದರ್ಭ  ಒಂದೊಂದು ಸಾರಿ ಅವರನ್ನು ಎದುರಿಗೆ ತರುವಂತೆ ಮಾಡುತ್ತದೆ.

ಎನ್‌ಎಸ್ ರಾಜಪ್ಪನ್.. ಯಾವ ಪ್ರತಿಫಲಾಪೇಕ್ಷೆ ಇಲ್ಲದೇ   ಪರಿಸರ ಸೇವೆ ಮಾಡುವ ಕೆಲಸ ಮಾಡಿಕೊಂಡೆ ಇದ್ದಾರೆ. ಪಾರ್ಶ್ವವಾಯು ಕಾಡುತ್ತಿದ್ದರೂ ಇವರ ಸಾಧನೆಗೆ ಯಾವುದು ಅಡ್ಡಿಯಾಗಿಲ್ಲ.

Tap to resize

Latest Videos

ಮಳೆಯೇ ಕಾಣದ ಮರುಭೂಮಿಯಲ್ಲಿ ಮರಗಳು ಬೆಳೆದಿದ್ದು ಹೇಗೆ?

ಮೊಣಕಾಲುಗಳು ಶಕ್ತಿ ಕಳೆದುಕೊಂಡಿದ್ದರೂ ಇವರ ಅಂತರಂಗದ ಶಕ್ತಿಗೆ ಕುಂದಿಲ್ಲ. ತಮ್ಮದೇ ಚಿಕ್ಕ ಬೋಟಿನಲ್ಲಿ ಜಗಮೆಚ್ಚುವ ಕೆಲಸ ಮಾಡಿದ್ದಾರೆ.  ವೆಂಬನಾಡ್ ಸರೋವರದಲ್ಲಿ ಆಧುನಿಕತೆ ಹೆಸರಿನಲ್ಲಿ ಎಸೆದ ಪ್ಲಾಸ್ಟಿಕ್ ಬಾಟಲಿಗಳನ್ನು ಒಂದೊಂದಾಗಿ ಹೆಕ್ಕಿ ತೆಗೆದಿದ್ದಾರೆ.  ಹಲವಾರು ವರ್ಷಗಳಿಂದ  ಇದೇ ಕೆಲಸ ಮಾಡಿಕೊಂಡಿದ್ದು ಒಂದು ಸಲಾಂ ಹೇಳಲೇಬೇಕು.

ನಿಸ್ವಾರ್ಥದ ನಿಸರ್ಗ ಸೇವೆಯನ್ನು ಕೇಂದ್ರ ಸರ್ಕಾರ ಗುರುತಿಸಿದೆ. ಸೋಶಿಯಲ್ ಮೀಡಿಯಾದಲ್ಲಿಯೂ ಮೆಚ್ಚುಗಳ ಮಹಾಪೂರವೇ ಹರಿದುಬಂದಿದೆ. ಇಂಥವರಿಂದಲೇ ಅಸಲಿ ಪ್ರೇರಣೆ ಪಡೆದುಕೊಳ್ಳಬೇಕು.

 

Meet NS Rajappan. He cannot walk as he is paralysed below his knees. Uses his hands to move around. Everyday Rajappan gets into his small boat & collect plastic bottles from Vembanad lake. All alone. From last many years. Let’s make him famous. pic.twitter.com/uDhXIzAHI7

— Parveen Kaswan, IFS (@ParveenKaswan)
click me!