
ಚೆನ್ನೈ(ಏ.11): ಕೊರೋನಾ ದೇಶದಲ್ಲಿ ಅಪಾಯದ ಬಿರುಗಾಳಿ ಎಬ್ಬಿಸಿದೆ. ಪಂಚ ರಾಜ್ಯಗಳ ಚುನಾವಣೆ, ಪ್ರಚಾರ, ಸಂವಾದಗಳಿಂದಲೂ ಕೊರೋನಾ ಏರಿಕೆಯಾಗಿದೆ ಅನ್ನೋ ವಾದವನ್ನು ತಳ್ಳಿಹಾಕುವಂತಿಲ್ಲ. ಇದೀಗ ತಮಿಳುನಾಡಿನ ಶ್ರಿವಿಲ್ಲಿಪುತ್ಥೂರ್ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಪಿಎಸ್‌ಡಬ್ಲೂ ಮಾಧವರ್ ರಾವ್ ಕೊರೋನಾ ಸೋಂಕು ತಗುಲಿ ನಿಧನರಾಗಿದ್ದಾರೆ.
ಮಾಜಿ IPS ಅಧಿಕಾರಿ, ಬಿಜೆಪಿ ನಾಯಕ ಅಣ್ಣಾಮಲೈಗೆ ಕೊರೋನಾ!.
ಕಳೆದ ತಿಂಗಳು ಕೊರೋನಾ ಸೋಂಕಿಗೆ ತುತ್ತಾದ ಮಾದವ್ ರಾವ್ ಆಸ್ಪತ್ರೆ ದಾಖಲಾಗಿದ್ದರು. ಚಿಕಿತ್ಸೆ ಪಡೆಯುತ್ತಿದ್ದ ಮಾಧವ್ ರಾವ್ ಇಂದು(ಏ.11) ಅಸುನೀಗಿದ್ದಾರೆ. ನಿಧನರಾಗಿರುವ ಮಾಧವ್ ರಾವ್ ಗೆಲುವು ಸಾಧಿಸಿದರೆ, ಉಪ-ಚುನಾವಣೆ ನಡೆಯಲಿದೆ. ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ತಮಿಳುನಾಡು ಮತ್ತು ಪುದುಚೇರಿಯ ಉಸ್ತುವಾರಿ ಕಾರ್ಯದರ್ಶಿ ಸಂಜಯ್ ದತ್ ಟ್ವಿಟರ್ ಮೂಲಕ ಈ ಮಾಹಿತಿ ಖಚಿತಪಡಿಸಿದ್ದಾರೆ.
ಮಾಧವ್ ರಾವ್ ಅವರ ಕುಟಂಬಕ್ಕೆ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಕುಟುಂಬಕ್ಕೆ ಎಲ್ಲಾ ನೆರವನ್ನು ಕಾಂಗ್ರೆಸ್ ನೀಡಲಿದೆ ಎಂದು ಸಂಜಯ್ ದತ್ ಹೇಳಿದ್ದಾರೆ. ತಮಿಳುನಾಡಿನ 38 ಜಿಲ್ಲೆಗಳ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 6 ರಂದು ಮತದಾನ ನಡೆದಿದೆ. ಮೇ 2 ರಂದು ಮತ ಎಣಿಕೆ ನಡೆಯಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ