
ಚೆನ್ನೈ: ಲೋಕಸಭಾ ಕ್ಷೇತ್ರಗಳ ಮರುವಿಂಗಡಣೆ ಕುರಿತು ಚರ್ಚೆಗಳು ಜೋರಾಗುತ್ತಿರುವ ನಡುವೆಯೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ನವವಿವಾಹಿತರಿಗೆ ಮದುವೆಯಾದ ತಕ್ಷಣವೇ ತಡಮಾಡದೇ ಮಕ್ಕಳನ್ನು ಹೆರುವಂತೆ ಸಲಹೆ ನೀಡಿದ್ದಾರೆ.
ಸೋಮವಾರ ಪಕ್ಷದ ಮುಖಂಡರ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ಸ್ಟಾಲಿನ್, ‘ಹಿಂದೆ ಕುಟುಂಬ ನಿಯಂತ್ರಣ ಕಾಯ್ದೆ ತಂದಾಗ, ನಾವು ಪರಿಪೂರ್ಣವಾಗಿ ಅದನ್ನು ಜಾರಿ ಮಾಡಿದೆವು. ಅದರ ಪರಿಣಾಮ ಈಗ ಲೋಕಸಭೆಯಲ್ಲಿ ರಾಜ್ಯದ ಪ್ರಾತಿನಿಧ್ಯ ಕಡಿತಗೊಳ್ಳುವ ಭೀತಿ ಎದುರಾಗಿದೆ. ಹೀಗಾಗಿ ಜನರು ತಡಮಾಡದೆ ಹೆಚ್ಚು ಮಕ್ಕಳನ್ನು ಪಡೆಯಿರಿ. ಅವರಿಗೆ ಚಂದದ ತಮಿಳಿನ ಹೆಸರಿಡಿ. ಹಿಂದೆಲ್ಲಾ ಮದುವೆ ಬಳಿಕ ಯೋಚಿಸಿ ಕುಟುಂಬ ಕಟ್ಟಿಕೊಳ್ಳಿ ಎಂದು ಹೇಳುತ್ತಿದ್ದರು. ಆದರೆ ಈಗ ಹಾಗಾಗುವುದಿಲ್ಲ. ಕೂಡಲೇ ಮಕ್ಕಳನ್ನು ಹೆರಬೇಕು’ ಎಂದು ಸಲಹೆ ನೀಡಿದ್ದಾರೆ.
ಕೆಲ ದಿನಗಳ ಹಿಂದೆ ಕೂಡಾ ತಮಿಳಿನ ನಾಣ್ಣುಡಿಯಂತೆ ಪ್ರತಿ ದಂಪತಿ 16 ಮಕ್ಕಳನ್ನು ಹೆರಬೇಕು ಎಂದು ಸ್ಟಾಲಿನ್ ಸಲಹೆ ನೀಡಿದ್ದರು.
ಇದನ್ನೂ ಓದಿ: ಸನಾತನ ಧರ್ಮ ಅವಹೇಳನ ಪ್ರಕರಣ; ಉದಯ್ ನಿಧಿ ಸ್ಟಾಲಿನ್‌ಗೆ ಷರತ್ತುಬದ್ಧ ಜಾಮೀನು ನೀಡಿದ ಕೋರ್ಟ್
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ