
ವಾರಾಣಸಿ (ಮಾ.4): ಅಯೋಧ್ಯೆಯಲ್ಲಿ ಭಕ್ತರು ಬಿಟ್ಟುಹೋದ ಪಾದರಕ್ಷೆಗಳು ದೊಡ್ಡ ಸಮಸ್ಯೆಯಾಗಿ ಹೊರಹೊಮ್ಮಿದ ಬೆನ್ನಲ್ಲೇ ಭಕ್ತರಿಂದ ತುಂಬಿ ತುಳುಕುತ್ತಿರುವ ವಾರಾಣಸಿ (ಕಾಶಿ)ಯಲ್ಲೂ ಅದೇ ಸಮಸ್ಯೆಯಾಗಿ ಕಾಡಿದೆ. ನಿತ್ಯವೂ ಕಾಶಿ ವಿಶ್ವನಾಥ ಮಂದಿರದ ಆಸುಪಾಸಿನಿಂದ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆಗಳನ್ನು ಕಸದ ಗುಂಡಿಗೆ ಎಸೆಯಲಾಗುತ್ತಿದೆ.
ಕುಂಭಮೇಳ ಆರಂಭದ ಬಳಿಕ ಪ್ರಯಾಗ್‌ರಾಜ್‌ನಿಂದ ಭಕ್ತರು ಅಯೋಧ್ಯೆ ಮತ್ತು ವಾರಾಣಸಿಗೆ ಭೇಟಿ ನೀಡುವುದು ಹೆಚ್ಚಾಗಿದೆ. ಆದರೆ ಕಾಶಿ ದೇಗುಲಕ್ಕೆ ಪ್ರವೇಶ ಹಾದಿಗಳು ಅಷ್ಟೇನು ವಿಶಾಲವಾಗಿ ಇಲ್ಲದ ಕಾರಣ ದೇಗುಲದ ಪ್ರವೇಶ ದ್ವಾರ ಸೇರಿದಂತೆ ರಸ್ತೆಗಳಲ್ಲೇ ಪಾದರಕ್ಷೆ ಬಿಟ್ಟು ಭಕ್ತರು ದೇವರ ದರ್ಶನಕ್ಕೆ ತೆರಳುತ್ತಿದ್ದಾರೆ.
ಆದರೆ ನಿತ್ಯವೂ ಲಕ್ಷಾಂತರ ಜನರ ಆಗಮನ ಹಿನ್ನೆಲೆಯಲ್ಲಿ, ಭಕ್ತರು ದೇವರ ದರ್ಶನ ಪಡೆದು ಹೊರಗೆ ಬರುವ ವೇಳೆ ಅವರ ಪಾದರಕ್ಷೆಗಳು ಒಂದೊಂದು ಒಂದು ಕಡೆ ಚದುರಿ ಹೋಗಿ ಸಮಸ್ಯೆ ಎದುರಾಗುತ್ತಿದೆ. ಇನ್ನು ಕೆಲವು ಸಂದರ್ಭದಲ್ಲಿ ಎಲ್ಲಿ ಬಿಟ್ಟಿದ್ದೀವಿ ಎಂದು ತಿಳಿಯದೇ ಭಕ್ತರು ಚಪ್ಪಲಿ ಹಾಗೆಯೇ ಬಿಟ್ಟು ಹೋಗುತ್ತಿದ್ದಾರೆ.
ಇದನ್ನೂ ಓದಿ: Foreigners worship in Hindu temple: ಕಳಸೇಶ್ವರ ದೇವಸ್ಥಾನದಲ್ಲಿ ಧ್ಯಾನದಲ್ಲಿ ಮಿಂದೆದ್ದ ವಿದೇಶಿಗರು! Suvarna
2 ಲೋಡ್‌ನಷ್ಟು ಚಪ್ಪಲಿ:
ಪರಿಣಾಮ ದೇಗುಲದ ಆಸುಪಾಸಿನಲ್ಲಿ ನಿತ್ಯವೂ ಭಾರೀ ಪ್ರಮಾಣದಲ್ಲಿ ಪಾದರಕ್ಷೆ ಹಾಗೆಯೇ ಉಳಿದುಹೋಗುತ್ತಿದೆ. ಹೀಗಾಗಿ ಪಾಲಿಕೆ ಸಿಬ್ಬಂದಿ ತಡರಾತ್ರಿ 12 ಗಂಟೆಯಿಂದ 2 ಗಂಟೆ ಅವಧಿಯಲ್ಲಿ ಬಂದು ಉಳಿದ ಪಾದರಕ್ಷೆ ಒಟ್ಟುಗೂಡಿಸಿ ಕಸ ಸಂಗ್ರಹ ಪ್ರದೇಶದಲ್ಲಿ ಎಸೆಯುತ್ತಿದ್ದಾರೆ. ಹೀಗೆ ನಿತ್ಯವೂ 2 ಲಾರಿ ಲೋಡ್‌ಗಳಷ್ಟು ಪಾದರಕ್ಷೆ ಸಂಗ್ರಹವಾಗುತ್ತಿದೆ ಎಂದು ಪಾಲಿಕೆ ಸಿಬ್ಬಂದಿ ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ