ಕೊರೋನಾ ಪಾಸಿಟಿವ್: ಆಕ್ಸಿಜನ್‌ಗಾಗಿ ಅಶ್ವತ್ಥ ಮರದಡಿ ಠಿಕಾಣಿ ಹೂಡಿದ ಜನ

By Suvarna NewsFirst Published May 2, 2021, 4:54 PM IST
Highlights

ಕೊರೋನಾ ಪಾಸಿಟಿವ್ ದೃಢಪಟ್ಟ ಕೂಡಲೇ ಅಶ್ವತ್ಥ ಮರದಡಿ ಬರುತ್ತಿರೋ ಜನ | ಮರದ ಕೆಳಗೆ ಬೆಡ್ ಹಾಕಿದ ಕೊರೋನಾ ರೋಗಿಗಳು

ಲಕ್ನೋ(ಮೇ.02): ವಿಜ್ಞಾನವನ್ನೂ ಮೀರಿ ಮೂಢನಂಬಿಕೆ ಮತ್ತು ತಮ್ಮ ವಿಚಿತ್ರ ನಂಬಿಕೆಯಿಂದ ಜನರು ಕೊರೋನಾ ಪಾಸಿಟಿವ್ ಬಂದ ಕೂಡಲೇ ರೋಗಿಗಳನ್ನು ಅಶ್ವತ್ಥ ಮರದ ಕೆಳಗೆ ಮಲಗಿಸುತ್ತಿರುವ ಘಟನೆ ನಡೆದಿದೆ. 

ಉತ್ತರ ಪ್ರದೇಶದ ಶಹಜಾನ್‌ಪುರದ ಬಹದ್ದೂರ್ ಗಂಜ್‌ನಲ್ಲಿ ಘಟನೆ ನಡೆದಿದ್ದು ಜನ ಹಾಸಿಗೆ ಬೆಡ್ ತೆಗೆದುಕೊಂಡು ಬಂದು ಅಶ್ವತ್ಥ ಮರದ ಕೆಳಗೆ ಮಲಗುತ್ತಿದ್ದಾರೆ. ಎರಡು ಕುಟುಂಬದ ಜನರು ಕೊರೋನಾ ಪಾಸಿಟಿವ್ ದೃಢಪಟ್ಟ ನಂತರ ಆಕ್ಸಿಜನ್‌ಗಾಗಿ ಅಶ್ವತ್ಥ ಮರದ ಕೆಳಗೆ ಬೀಡು ಬಿಟ್ಟಿದ್ದಾರೆ.

Latest Videos

ಮರದ ಕೆಳಗೆ ಮಲಗಿರುವ ಮಹಿಳೆಯರಲ್ಲಿ ಒಬ್ಬರಾದ ಊರ್ಮಿಳಾ, ನನಗೆ ಉಸಿರಾಟದ ಸಮಸ್ಯೆ ಇತ್ತು ಮತ್ತು ಆಸ್ಪತ್ರೆ ಅಥವಾ ಆಮ್ಲಜನಕ ಸಿಗಲಿಲ್ಲ. ಅಶ್ವತ್ಥ ಮರವು ಆಮ್ಲಜನಕವನ್ನು ನೀಡುತ್ತದೆ. ನನ್ನ ಕುಟುಂಬ ನನ್ನನ್ನು ಇಲ್ಲಿಗೆ ಕರೆತಂದಿದೆ. ಈಗ ನಾನು ಉತ್ತಮವಾಗಿ ಉಸಿರಾಡಬಹುದು ಎಂದಿದ್ದಾರೆ.

ಆರೋಗ್ಯ ಸಚಿವರ ತಂದೆ ಕೊರೋನಾದಿಂದ ಸಾವು

ಭಾರತೀಯ ಜನತಾ ಪಕ್ಷದ ಶಾಸಕ ರೋಶನ್ಲಾಲ್ ವರ್ಮಾ ಅವರು ಈ ಪ್ರದೇಶವನ್ನು ತಲುಪಿ ಜನರನ್ನು ಭೇಟಿಯಾದರು. ಆರೋಗ್ಯ ವ್ಯವಸ್ಥೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಅವರು ಜಿಲ್ಲಾಧಿಕಾರಿಗಳನ್ನು ಕರೆದು ರೋಗಿಗಳನ್ನು ಆಸ್ಪತ್ರೆಗಳಿಗೆ ಸ್ಥಳಾಂತರಿಸಲು ಹೇಳಿದ್ದಾರೆ. ಆದರೂ ಅಶ್ವತ್ಥ ಮರದ ಕೆಳಗೆ ತಾನು ಅರೋಗ್ಯಕರವಾಗಿರುವುದರಿಂದ ಆಸ್ಪತ್ರೆಗೆ ಸ್ಥಳಾಂತರಿಸಲು ಅವಳು ಬಯಸುವುದಿಲ್ಲ ಎಂದು ಉರ್ಮಿಳಾ ಹೇಳಿದ್ದಾರೆ.

ಅವರ ಕುಟುಂಬ ಸದಸ್ಯೆ, "ಅಶ್ವತ್ಥ ಗರಿಷ್ಠ ಆಮ್ಲಜನಕವನ್ನು ನೀಡುತ್ತದೆ ಎಂದು ನಮಗೆ ತಿಳಿಯಿತು. ಯಾವುದೇ ಆಯ್ಕೆ ಉಳಿದಿಲ್ಲವಾದ್ದರಿಂದ, ನಾವು ನನ್ನ ಚಿಕ್ಕಮ್ಮನನ್ನು ಇಲ್ಲಿಗೆ ಕರೆತಂದೆವು. ಆಕೆ ಚೇತರಿಸಿಕೊಂಡಿದ್ದಾಳೆ ಎಂದಿದ್ದಾರೆ.

ಲಕ್ನೋದಲ್ಲಿನ ವೈದ್ಯಕೀಯ ತಜ್ಞರು ದೈಹಿಕಕ್ಕಿಂತ ಹೆಚ್ಚು ಇದು ಹೆಚ್ಚು ಮಾನಸಿಕ ಪರಿಣಾಮವಾಗಿದೆ. ಬಹುಶಃ ತಾಜಾ ಗಾಳಿ ರೋಗಿಗಳಿಗೆ ಸುಲಭವಾಗಿ ಉಸಿರಾಡಲು ಸಹಾಯ ಮಾಡುತ್ತಿರಬಹುದು ಎಂದು ಕಿಂಗ್ ಜಾರ್ಜ್ ವೈದ್ಯಕೀಯ ವಿಶ್ವವಿದ್ಯಾಲಯದ (ಕೆಜಿಎಂಯು) ವೈದ್ಯರು ಹೇಳಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

click me!